ಬೆಂಗಳೂರು: ಕೊರೊನಾ ಹೊಡೆತದಿಂದ ನಿಧಾನವಾಗಿ ಚೇತರಿಸಿಕೊಳ್ಳುತ್ತಿರುವ ಜನ ಸಾಮಾನ್ಯರಿಗೆ ಈಗಾಗಲೇ ವಿದ್ಯುತ್ ದರ ಹೆಚ್ಚಳ ಶಾಕ್ ಕೊಟ್ಟಿದೆ. ಜೊತೆಗೆ ಅಗತ್ಯ ವಸ್ತು ಬೆಲೆ ಏರಿಕೆಯಿಂದ ಹೋಟೆಲ್ ಮಾಲೀಕರೂ ತಿಂಡಿ, ಊಟ, ಟೀ- ಕಾಫಿ ಬೆಲೆಗಳಲ್ಲಿ ಏರಿಕೆ ಮಾಡಿದ್ದಾರೆ.
ಅಡುಗೆ ಎಣ್ಣೆ, ಟೀ & ಕಾಫಿ ಪುಡಿ, ಎಲ್ಪಿಜಿ ಗ್ಯಾಸ್ ದರ ಹೆಚ್ಚಳ ಹಿನ್ನೆಲೆಯಲ್ಲಿ ಹೋಟೆಲ್ ಗಳಲ್ಲಿ ಊಟ, ಉಪಾಹಾರ ದರ ಶೇ.10ರಷ್ಟು ಹೆಚ್ಚಿಸಲಾಗಿದೆ. ಅಗತ್ಯ ವಸ್ತು ಬೆಲೆಯೇರಿಕೆಯಿಂದಾಗಿ ಈ ಹೆಚ್ಚಳ ಮಾಡಲಾಗಿದೆ ಎಂದು ಹೋಟೆಲ್ ಮಾಲೀಕರ ಸಂಘದ ಅಧ್ಯಕ್ಷ ಪಿ.ಸಿ.ರಾವ್ ತಿಳಿಸಿದ್ದಾರೆ. ಗ್ರಾಹಕರ ಹಿತದೃಷ್ಟಿ ಗಮನದಲ್ಲಿಟ್ಟುಕೊಂಡೇ ಶೇ.10ರಷ್ಟು ಮಾತ್ರ ಬೆಲೆ ಹೆಚ್ಚಳ ಮಾಡಲಾಗಿದೆ. ಈ ಬಗ್ಗೆ ಬೆಂಗಳೂರು ಹೋಟೆಲ್ ಮಾಲೀಕರ ಸಂಘದ ಸಭೆಯಲ್ಲಿ ನಿರ್ಧರಿಸಲಾಯಿತು ಎಂದರು.
ಅಡುಗೆ ಎಣ್ಣೆ, ಕಾಫಿ ಪುಡಿ, ಗ್ಯಾಸ್ ಮುಂತಾದ ಆಗತ್ಯ ವಸ್ತು ಬೆಲೆ ದಿನದಿಂದ ದಿನಕ್ಕೆ ಹೆಚ್ಚುತ್ತಿರುವುದು ಹೋಟೆಲು ಮಾಲೀಕರಿಗೆ ನುಂಗಲಾರದ ತುತ್ತಾಗಿದೆ. ಆದರೆ, ಇದೇ ಸಂದರ್ಭ ಬೆಲೆ ಏರಿಕೆಯೂ ಅನಿವಾರ್ಯ ಎಂದು ಹೇಳಿದರು.
PublicNext
04/04/2022 09:11 pm