ವರದಿ - ಗಣೇಶ್ ಹೆಗಡೆ
ಬೆಂಗಳೂರು: ಸಿಲಿಕಾನ್ ಸಿಟಿಯಲ್ಲಿ ಕಡಲೇಕಾಯಿ ಪರಿಷೆ ಎಷ್ಟು ಫೇಮಸ್ಸೋ, ನಾವೀಗ ತೋರಿಸೋ ಮೇಳ ಕೂಡ ಅಷ್ಟೇ ಫೇಮಸ್ ಆಗಿದೆ. ಈ ಮೇಳ ಶುರುವಾಗೋದನ್ನೇ ಸಿಲಿಕಾನ್ ಸಿಟಿಯ ಫುಡ್ ಬ್ಲಾಗರ್‌ಗಳು, ಆಹಾರ ಪ್ರಿಯರು ಕಾಯ್ತಿರ್ತಾರೆ.
ಹೌದು. ಹಲವಾರು ದಶಕಗಳ ಇತಿಹಾಸವಿರೋ ಕಡಲೆಕಾಯಿ ಪರಿಷೆ ಆರಂಭವಾಗೋಕೆ ಐತಿಹಾಸಿಕ ಕಾರಣವಿದ್ರೆ, ಈ ಮೇಳ ಶುರುವಾಗೋದಕ್ಕೆ ಮಾನವೀಯತೆಯೇ ಪ್ರಮುಖ ಕಾರಣವಾಗಿದೆ. 2000 ಇಸವಿಗೂ ಮುನ್ನ ನಗರದ ವಿವಿ ಪುರಂಗೆ ನೂರಾರು ರೈತರು ವರ್ಷವಿಡೀ ಕಷ್ಟಪಟ್ಟು ಬೆಳೆದ ಅವರೇ ಕಾಯಿಯನ್ನು ತರ್ತಿದ್ರು. ಮೂರ್ನಾಲ್ಕು ದಿನಗಳಾದ್ರೂ ನಿರೀಕ್ಷೆಗೆ ತಕ್ಕಂತೆ ಮಾರಾಟವಾಗದೇ ಇದ್ದಾಗ, ಬೇಸರದಿಂದ ಉಳಿದ ಅವರೇ ಬೇಳೆಯನ್ನು ಅಲ್ಲೇ ಬಿಟ್ಟು ಹೋಗಿದ್ರು. ಇದನ್ನು ನೋಡಿ ಮನಸ್ಸಿಗೆ ಹಚ್ಚಿಕೊಂಡಿದ್ದ ವಾಸವಿ ಕಾಂಡಿಮೆಂಟ್ಸ್‌ನ ರೂವಾರಿಗಳಾದ ಗೀತಾ ಹಾಗು ಶಿವಕುಮಾರ್ ದಂಪತಿ, ರೈತರ ಹಿತದೃಷ್ಟಿಯಿಂದ 2000 ಇಸವಿಯಲ್ಲಿ ಅವರೇ ಮೇಳ ಆರಂಭಿಸಿದ್ರು. ರೈತರಿಂದ ನೇರವಾಗಿ ಖರೀದಿ ಮಾಡಿ ಅವರೆಯಲ್ಲಿ ಭಿನ್ನ ವಿಭಿನ್ನ ಖಾದ್ಯಗಳನ್ನು ತಯಾರಿಸಲು ಆರಂಭಿಸಿದ್ರು.
ಅವರೆ ಉಪ್ಪಿಟ್ಟು, ಅವರೆ ದೋಸೆ, ಅವರೆ ಐಸ್ ಕ್ರೀಂ, ಅವರೆ ನಿಪ್ಪಟ್ಟು, ಅವರೆ ಪಾಯಸ ಹೀಗೆ ದೊಡ್ಡ ಲಿಸ್ಟೇ ಮುಂದುವರೆಯುತ್ತೆ. ಇನ್ನು, ಇಂದಿನಿಂದ 30 ನೇ ತಾರೀಖಿನವರೆಗೂ ಈ ಅವರೇ ಮೇಳೆ ನಡೆಯತ್ತದೆ.
ಈ ವರ್ಷವೂ ಕೋವಿಡ್ ಇರೋದ್ರಿಂದ ಸಿಂಪಲ್ ಆಗಿಯೇ ಮೇಳವನ್ನು ಆಯೋಜಿಸಲಾಗಿದೆ. ಗ್ರಾಹಕರ ಹಿತದೃಷ್ಟಯಿಂದ ಕೋವಿಡ್ ಮುನ್ನೆಚ್ಚರಿಕಾ ಕ್ರಮಗಳನ್ನೂ ವಹಿಸಲಾಗಿದೆ. ಅಂಗಡಿಯ ಆರಂಭದಲ್ಲೇ ಸ್ಯಾನಿಟೈಸೇಶನ್ ಟನಲ್ ಸಿದ್ಧಪಡಿಸಲಾಗಿದೆ. ಇಲ್ಲಿನ ವಿಭಿನ್ನ ಖಾದ್ಯಗಳನ್ನು ಸವಿಯಬೇಕಂದ್ರೆ ಗ್ರಾಹಕರು ವಿವಿಪುರಂನಲ್ಲಿರೋ ಫುಡ್ ಸ್ಟ್ರೀಟ್‌ಗೆ ತಪ್ಪದೇ ಭೇಟಿ ಕೊಡಬಹುದು.
PublicNext
25/01/2022 03:23 pm