ಬೆಂಗಳೂರು: ವೀಕೆಂಡ್ ಕರ್ಫ್ಯೂ, ನೈಟ್ ಕರ್ಫ್ಯೂಗೆ ಭಾರಿ ವಿರೋಧ ವ್ಯಕ್ತವಾಗಿದೆ. ಹೋಟೆಲ್, ರೆಸ್ಟೋರೆಂಟ್, ಚೌಟ್ರಿ ಮಾಲೀಕರ ಸಂಘ, ಬಾರ್ ಮಾಲೀಕರಿಂದ ವೀಕೆಂಡ್ ಕರ್ಫ್ಯೂಗೆ ವಿರೋಧ ವ್ಯಕ್ತವಾಗಿದೆ. ಈ ಬಗ್ಗೆ ಬೆಂಗಳೂರಿನ ಗಾಯತ್ರಿ ವಿಹಾರದಲ್ಲಿ ಸಭೆ ನಡೆಸಿದ್ದಾರೆ. ವಿಕೇಂಡ್ ಕರ್ಫ್ಯೂ ವೇಳೆ ಶೇ.50 ರಷ್ಟು ಅವಕಾಶ ಕೊಡಬೇಕು. ಹೋಟೆಲ್ಗಳಿಗೆ ಶೇ.50 ಅವಕಾಶ ಕೊಡಬೇಕು.
ನಾವೇಲ್ಲರೂ ಒಕ್ಕೊರಲಿನಿಂದ ಒತ್ತಾಯ ಮಾಡ್ತೀವಿ. ನೈಟ್ ಕರ್ಫ್ಯೂ ಹಾಗೂ ವಿಕೇಂಡ್ ಕರ್ಫ್ಯೂ ಬಗ್ಗೆ ನಾವು ಆರಂಭದಿಂದಲೂ ವಿರೋಧಿಸುತ್ತಲೇ ಬಂದಿದ್ದೇವೆ. ಸರ್ಕಾರಕ್ಕೆ ಹಲವು ಬಾರೀ ಮನವಿ ಮಾಡಿದ್ರೂ ನಮ್ಮ ಸಮಸ್ಯೆ ಈಡೇರಿಲ್ಲ ಎಂದು ಸಭೆಯಲ್ಲಿ ನಗರದ ಸಂಘಟನೆಗಳ ಪದಾಧಿಕಾರಿಗಳು, ಉದ್ಯಮಿಗಳು ಭಾಗಿಯಾಗಿ ಚರ್ಚೆ ನಡೆಸಿದ್ದಾರೆ.
ಹಲವು ಬಾರಿ ಮನವಿ ಮಾಡಿದ್ರೂ ಸರ್ಕಾರ ಸ್ಪಂದಿಸದ ಹಿನ್ನೆಲೆ ವೀಕೆಂಡ್ ಕರ್ಫ್ಯೂ ವಿರುದ್ಧ ಹೋಟೆಲ್ ಮಾಲೀಕರ ಸಂಘ ಕಿಡಿಕಾರಿದೆ. ವೀಕೆಂಡ್ ಕರ್ಫ್ಯೂ ವೇಳೆ ಹೋಟೆಲ್ ಓಪನ್ ಮಾಡೇ ಮಾಡ್ತೇವೆ. ಎಲ್ಲರಿಗೂ ಒಂದು ನ್ಯಾಯ ನಮಗೊಂದು ನ್ಯಾಯನಾ ಎಂದು ಕಿಡಿಕಾರಿದ್ದಾರೆ. ನಮಗೆ ಯಾವಾಗಲೂ ಅನ್ಯಾಯ ಮಾಡುತ್ತಿದ್ದೀರಾ ಎಂದು ಗರಂ ಆಗಿದ್ದಾರೆ. ಈ ವಾರದ ವೀಕೆಂಡ್ ಕರ್ಫ್ಯೂ ಬಳಿಕ ತೀರ್ಮಾನ ಧಿಕ್ಕರಿಸ್ತೇವೆ. ನೈಟ್ಕರ್ಫ್ಯೂ, ವೀಕೆಂಡ್ ಕರ್ಫ್ಯೂ ಸಡಿಲಿಸುವಂತೆ ಮನವಿ ಮಾಡುತ್ತೇವೆ ಎಂದು ಸರ್ಕಾರಕ್ಕೆ ಹೋಟೆಲ್, ಬಾರ್ ಮಾಲೀಕರು ಗಡುವು ಕೊಟ್ಟಿದೆ.
Kshetra Samachara
14/01/2022 05:33 pm