ಅಪ್ಲಿಕೇಶನ್‌ನಲ್ಲಿ ಉಚಿತವಾಗಿ ಪೂರ್ಣ ವೀಡಿಯೊವನ್ನು ವೀಕ್ಷಿಸಿ

ರಾಜ್ಯದಲ್ಲಿ ಹೊಸ ವರ್ಷಾಚರಣೆಗಾಗಿ 900 ಕೋಟಿಗೂ ಅಧಿಕ ಮೌಲ್ಯದ ಮದ್ಯ ಸೇಲ್!

ವರದಿ: ಗಣೇಶ್ ಹೆಗಡೆ

ಬೆಂಗಳೂರು: ಒಮಿಕ್ರಾನ್ ಭೀತಿ ಹಾಗು ನೈಟ್ ಕರ್ಪ್ಯೂ ಇದ್ದರೂ ಕೂಡಾ ರಾಜ್ಯದಲ್ಲಿ ಮದ್ಯ ಮಾರಾಟ ಬಹಳ ಜೋರಾಗಿದೆ. ಮದ್ಯಪ್ರಿಯ ಮಂದಿ ಹೊಸ ವರ್ಷದ ಸಂಭ್ರಮಾಚರಣೆಗಾಗಿ ಮುಂಚಿತವಾಗಿ ಮದ್ಯ ಖರೀದಿಸಿದ್ದರು ಎಂಬುದು ತಿಳಿದುಬಂದಿದೆ. ಮೂಲಗಳ ಪ್ರಕಾರ ಕಳೆದ ಎರಡು ವರ್ಷಕ್ಕಿಂತ ಹೆಚ್ಚಾದ ವಹಿವಾಟು ಕಳೆದ ಡಿಸೆಂಬರ್ ವಾರಾಂತ್ಯದಲ್ಲಿ ನಡೆದಿದೆ.

ಸರಿ ಸುಮಾರು 975 ಕೋಟಿ ರೂ. ನಷ್ಟು ಮದ್ಯ ಮಾರಾಟ ಆಗಿದೆ. ಪರಿಣಾಮ ರಾಜ್ಯ ಸರ್ಕಾರದ ಬೊಕ್ಕಸಕ್ಕೆ ಕಳೆದ ಎಂಟು ದಿನದಲ್ಲಿ 573.75 ಕೋಟಿ ರೂ. ಆದಾಯ ಬಂದಿದೆ.

ನೈಟ್ ಕರ್ಪ್ಯೂ ಹಾಗೂ ಕೊವೀಡ್ ಪ್ರಕರಣ ಹೆಚ್ಚಾಗುತ್ತಿರುವ ಹಿನ್ನೆಲೆ ಯಲ್ಲಿ ಪಾರ್ಟಿಗಳು ಕಡಿಮೆ ಆಗಿತ್ತು. ಅದರಿಂದ ಮದ್ಯ ಮಾರಾಟಕ್ಕೆ ಹೊಡೆತ ಆಗಲಿದೆ ಎಂಬ ಚರ್ಚೆಗಳು ಶುರುವಾಗಿತ್ತು. ಆದರೆ ಈ ಲೆಕ್ಕ ನೋಡಿದಾಗ ಕುಡಿಯುವವರ ಸಂಖ್ಯೆಯಲ್ಲಿ ಯಾವುದೇ ಕಡಿಮೆ ಆಗಿಲ್ಲ.

Edited By : Nagaraj Tulugeri
PublicNext

PublicNext

01/01/2022 06:03 pm

Cinque Terre

28.58 K

Cinque Terre

6

ಸಂಬಂಧಿತ ಸುದ್ದಿ