ಅಪ್ಲಿಕೇಶನ್‌ನಲ್ಲಿ ಉಚಿತವಾಗಿ ಪೂರ್ಣ ವೀಡಿಯೊವನ್ನು ವೀಕ್ಷಿಸಿ

ಬೆಂಗಳೂರು: ಪರಿಸರ ಸ್ನೇಹಿ ಎಲ್ಮೋ ಇ- ಸ್ಕೂಟರ್ ಮಾರುಕಟ್ಟೆಗೆ ಲಗ್ಗೆ

ಬೆಂಗಳೂರು: ಮೇಕ್ ಇನ್ ಇಂಡಿಯಾ ಧ್ಯೇಯ ವಾಕ್ಯದೊಂದಿಗೆ ನಿರ್ಮಿಸಲಾದ ಪರಿಸರ ಸ್ನೇಹಿ ಎಲ್ಮೋ ಇ- ಸ್ಕೂಟರ್‌ಗೆ ಸಂಸದ ತೇಜಸ್ವಿಸೂರ್ಯ ಅವರು ಇಂದು ಬೆಂಗಳೂರಿನಲ್ಲಿ ಚಾಲನೆ ನೀಡಿದರು.

ಇಂದಿನಿಂದ ಮಾರುಕಟ್ಟೆಗೆ ಅಪೆಕ್ಟ್ ಮೋಟರ್ಸ್ ಸಂಸ್ಥೆಯ ಎಲ್ಮೋ ಇ- ಸ್ಕೂಟರ್( ಎಲೆಕ್ಟ್ರಿಕ್ ವೆಹಿಕಲ್) ಲಗ್ಗೆ ಇಟ್ಟಿದೆ. ನಗರದ ಖಾಸಗಿ ಹೋಟೆಲ್‌ನಲ್ಲಿ ನಡೆದ ಸರಳ ಸಮಾರಂಭದಲ್ಲಿ ಎಲೆಕ್ಟ್ರಿಕ್ ಬೈಕ್‌ಗಳನ್ನು ಲಾಂಚ್ ಮಾಡಲಾಯಿತು. ಪರಿಸರ ಸ್ನೇಹಿ ಹಾಗೂ ವಾಹನ ಸವಾರರ ಸುರಕ್ಷತೆಯನ್ನು ಗಮನದಲ್ಲಿ ಇಟ್ಟುಕೊಂಡು ಮಾರುಕಟ್ಟೆಗೆ ಎಲೆಕ್ಟ್ರಿಕ್ ದ್ವೀಚಕ್ರ ವಾಹನ ಬಿಡುಗಡೆ ಮಾಡಲಾಗಿದೆ. ಬೆಂಗಳೂರು ಸೇರಿದಂತೆ ಹಲವು ಜಿಲ್ಲೆಗಳಲ್ಲಿ ಶೋ ರೂಂ ತೆರೆಯಲು ಮುಂದಾಗಿದೆ. ಇನ್ನೂ ಆನ್‌ಲೈನ್‌ನಲ್ಲಿ ಬುಕ್ಕಿಂಗ್ ಮಾಡಿದ ಬೈಕ್‌ನ ದರದಲ್ಲಿ ಐದು ಸಾವಿರ ರೂ. ಅನ್ನು ಸೇನೆಯ ರಿಲೀಫ್ ಫಂಡ್‌ಗೆ ನೀಡಲು ಸಂಸ್ಥೆ ನಿರ್ಧರಿಸಿದೆ.

Edited By : Nagesh Gaonkar
PublicNext

PublicNext

19/05/2022 10:19 am

Cinque Terre

30.94 K

Cinque Terre

1