ಬೆಂಗಳೂರು: ನವಕರ್ನಾಟಕ ನಿರ್ಮಾಣದ ಆಶಯದಿಂದ ಸ್ಟಾರ್ಟ್-ಅಪ್‌ಗಳಿಗೆ ಪ್ರೋತ್ಸಾಹ ನೀಡಲಾಗುವುದು ಎಂದು ಮುಖ್ಯಮಂತ್ರಿ ಬಸವರಾಜ ಬೊಮ್ಮಾಯಿ ತಿಳಿಸಿದ್ದಾರೆ.
ಖಾಸಗಿ ಇಂಗ್ಲೀಷ್ ದಿನಪತ್ರಿಕೆಯಿಂದ ನಿನ್ನೆ (ಶನಿವಾರ) ಆಯೋಜಿಸಿದ್ದ START-UP AWARDS 2022ರಲ್ಲಿ ಪಾಲ್ಗೊಂಡು ಮಾತನಾಡಿದ ಸಿಎಂ, ರಾಜ್ಯದಲ್ಲಿ ಸ್ಟಾರ್ಟ್ಅಪ್‌ಗಳ ಸ್ಥಾಪನೆ ಹಾಗೂ ಅಭಿವೃದ್ಧಿಗೆ ಪೂರಕ ವಾತಾವರಣ ಸೃಷ್ಟಿಸಲಾಗುವುದು. ನವಭಾರತಕ್ಕಾಗಿ ನವಕರ್ನಾಟಕ ಧ್ಯೇಯದಡಿ ಯೋಜನಾಬದ್ಧ ಪರಿಸರ ನಿರ್ಮಾಣವಾಗಬೇಕಿದೆ. ಡಿಜಿಟಲ್ ತಂತ್ರಜ್ಞಾನದ ಸಹಾಯದಿಂದ 6 ಹೊಸ ಐಐಟಿ ಮಟ್ಟದ ಕಾಲೇಜುಗಳನ್ನು, ಡಿಜಿಟಲ್ ಯುನಿವರ್ಸಿಟಿಗಳನ್ನು ಕರ್ನಾಟಕದಲ್ಲಿ ನಿರ್ಮಿಸಲಾಗುವುದು. ಬೆಂಗಳೂರಿನಲ್ಲಿ ಅಂತರರಾಷ್ಟ್ರೀಯ ಮಟ್ಟದ ಸಂಶೋಧನಾ ಕೇಂದ್ರಗಳಿವೆ. ಸೆಮಿಕಂಡಕ್ಟರ್ ಪ್ಲಾಂಟ್‌ಗಳು ಬರಲಿವೆ ಎಂದರು.
ಸ್ಟಾರ್ಟ್-ಅಪ್‌ಗಳಿಗೆ ಅವಕಾಶ:
100 ಸ್ಟಾರ್ಟ್-ಅಪ್‌ಗಳು ಇಂದು 17,000 ಸ್ಟಾರ್ಟ್-ಅಪ್‌ಗಳಾಗಿವೆ. ಇದು ಇಂದಿನ ಯುವ ಪೀಳಿಗೆ ಶ್ರಮದ ಫಲ. ಯುವ ಜನತೆಲಿ ಬಹಳ ಶಕ್ತಿ ಇದೆ. ಸ್ಟಾರ್ಟ್-ಅಪ್‌ಗಳ ಉಗಮಕ್ಕೆ ಸೂಕ್ತ ವೇದಿಕೆ ಮತ್ತು ಪ್ರೋತ್ಸಾಹದ ಅವಶ್ಯಕತೆ ಇದೆ. ದೇಶದ ಪ್ರಥಮ ಐ.ಟಿ ಕಂಪನಿ ಬೆಂಗಳೂರಿನಲ್ಲಿ ಪ್ರಾರಂಭವಾಯಿತು. ಬೆಂಗಳೂರಿನಲ್ಲಿ ಅಪಾರ ಪ್ರತಿಭೆ ಮಾನವ ಸಂಪನ್ಮೂಲ, ಅವಿಷ್ಕಾರ, ಸಂಶೋಧನೆ ಅವಕಾಶವಿದೆ.
ಒಬ್ಬ ವ್ಯಕ್ತಿ ಅಥವಾ ವ್ಯಕ್ತಿಗಳ ಗುಂಪು ಆಧುನಿಕ ತಂತ್ರಜ್ಞಾನ, ವೈಜ್ಞಾನಿಕತೆಯ ಸಹಾಯದಿಂದ ಸ್ಥಾಪಿಸುವ ಉದ್ದಿಮೆಯೇ ಸ್ಟಾರ್ಟ್-ಅಪ್‌ಗಳು.
ಪ್ರಧಾನಿ ಮೋದಿ ಅವರ ನವ ಭಾರತ ನಿರ್ಮಾಣದ ಆಶಯದಿಂದ ಸ್ಟಾರ್ಟ್ ಅಪ್‌ಗಳಿಗೆ ಪ್ರೋತ್ಸಾಹ ನೀಡುತ್ತಿದ್ದಾರೆ. ಅದಕ್ಕೆ ಪೂರಕ ವಾತಾವರಣ ಸೃಷ್ಟಿಸಿದ್ದಾರೆ. ಬಹಳಷ್ಟು ಸ್ಟಾರ್ಟ್-ಅಪ್‌ಗಳು ಈಗ ಯೂನಿಕಾರ್ನ್‌ಗಳಾಗಿ ಪರಿವರ್ತಿತವಾಗುತ್ತಿವೆ ಎಂದು ತಿಳಿಸಿದರು.
-ಸುರೇಶ್ ಬಾಬು ಪಬ್ಲಿಕ್ ನೆಕ್ಸ್ಟ್ ಬೆಂಗಳೂರು
Kshetra Samachara
13/03/2022 11:06 am