ಬೆಂಗಳೂರಿನ ಸಂಗೊಳ್ಳಿರಾಯಣ್ಣ ರೈಲ್ವೆ ನಿಲ್ದಾಣ ಈಗ ಕೇವಲ ರೈಲ್ವೆ ನಿಲ್ದಾಣವಾಗಿಲ್ಲ. ಈಗ ರೈಲ್ವೆ ನಿಲ್ದಾಣದಲ್ಲಿ ಇಳಕಲ್ ಸೀರೆ ಮಳಿಗೆ ತೆರೆಯಲಾಗಿದೆ. ಬಗೆ ಬಗೆಯ ಇಳಕಲ್ ಸೀರೆ ಮಹಿಳೆಯರನ್ನ ಕಣ್ಮನ ಸೆಳೆಯುತ್ತಿವೆ.
ಸುಮಾರು 800 ರೂಪಾಯಿಯಿಂದ 2,000 ವರೆಗೆ ಇಳಿಕಲ್ ಸೀರೆ ಇದ್ದು, ಒಂದು ಉತ್ಪನ್ನ ಒಂದು ಮಳಿಗೆ ಅನ್ನುವ ಯೋಜನೆ ಅಡಿ ಈ ಒಂದು ಇಳಕಲ್ ಮಳಿಗೆಯ ಅಂಗಡಿಯನ್ನ ನಡೆಸಲು ರೈಲ್ವೆ ಇಲಾಖೆ ಅನುಮತಿ ನೀಡಿದೆ.
ಹೀಗಾಗಿ ಬೇರೆ ಬೇರೆ ಊರುಗಳಿಂದ ಬರುವ ಜನರು ಸೀರೆ ಕಡೆ ಒಲವು ತೋರುತ್ತಿದ್ದಾರೆ. ಬಗೆ ಬಗೆಯ ಸೀರೆಗಳನ್ನ ಕೊಳ್ಳುತ್ತಿದ್ದಾರೆ. ರೈಲ್ವೆ ನಿಲ್ದಾಣದಲ್ಲಿ ವಿನೂತವಾಗಿ ಪ್ರಾರಂಭಿಸಿರುವ ಇಳಕಲ್ ಸೀರೆ ಮಳಿಗೆಗೆ ಜನರಿಂದ ಭರ್ಜರಿ ರೆಸ್ಪಾನ್ಸ್ ಸಿಗುತ್ತಿದೆ.
PublicNext
16/07/2022 03:55 pm