ಅಪ್ಲಿಕೇಶನ್‌ನಲ್ಲಿ ಉಚಿತವಾಗಿ ಪೂರ್ಣ ವೀಡಿಯೊವನ್ನು ವೀಕ್ಷಿಸಿ

ಬೆಂಗಳೂರು: ನಂದಿನಿ ಉತ್ಪನ್ನಗಳ ದರ ಪರಿಷ್ಕರಣೆ; ಮೊಸರು, ಮಜ್ಜಿಗೆ ದರ ಎಷ್ಟು.?- ಇಲ್ಲಿದೆ ಮಾಹಿತಿ

ವರದಿ: ಗಣೇಶ್ ಹೆಗಡೆ

ಬೆಂಗಳೂರು: ಇಂದಿನಿಂದ ಆಹಾರ ಪದಾರ್ಥಗಳಿಗೂ ಶೇ.5ರಷ್ಟು ಜಿಎಸ್​ಟಿ ತೆರಿಗೆ ಅನ್ವಯವಾಗಲಿದ್ದು, ನಂದಿನಿ ಮೊಸರು, ಮಜ್ಜಿಗೆ, ಲಸ್ಸಿ ದರ ಏರಿಕೆಯಾಗಿದೆ. ಜಿಎಸ್​ಟಿ ಎಫೆಕ್ಟ್ ಹಿನ್ನೆಲೆ ಈಗಾಗಲೇ ಬೆಲೆ ಏರಿಕೆಗಳಿಂದ ಸುಸ್ತಾಗಿರುವ ಗ್ರಾಹಕರ ಜೇಬಿಗೆ ಇಂದಿನಿಂದ ಇನ್ನಷ್ಟು ಕತ್ತರಿ ಬೀಳಲಿದೆ. ಈ ಸಂಬಂಧ ಕೆಎಂಎಫ್ ಪತ್ರಿಕಾ ಪ್ರಕಟಣೆ ಹೊರಡಿಸಿದ್ದು, ನಂದಿನಿ ಮೊಸರು, ಮಜ್ಜಿಗೆ ಮತ್ತು ಲಸ್ಸಿ ಪೊಟ್ಟಣಗಳ ಮೇಲಿನ‌‌ ಪರಿಷ್ಕೃತ ದರವನ್ನು ಪ್ರಕಟಿಸಿದೆ.

ಮೊಸರು ಮತ್ತು ಮಜ್ಜಿಗೆ ಪೊಟ್ಟಣಗಳ ಮೇಲೆ ಈಗಾಗಲೇ ಹಳೇ ದರ ಮುದ್ರಿತವಾಗಿದ್ದು, ಮುದ್ರಿತ ದರಗಳ ಪ್ಯಾಕಿಂಗ್ ಸಾಮಗ್ರಿಗಳ ದಾಸ್ತಾನು ಮುಗಿಯುವವರಗೆ ಇಂಕ್‌ ಜೆಟ್ ಮೂಲಕ ಪರಿಷ್ಕೃತ ದರಗಳನ್ನು ಪೊಟ್ಟಣಗಳ ಮೇಲೆ ಮುದ್ರಿಸಿ ಮಾರುಕಟ್ಟೆಗೆ ಸರಬರಾಜು ಮಾಡಲಾಗುತ್ತಿದೆ ಎಂದು ಕೆಎಂಎಫ್ ತಿಳಿಸಿದೆ.

200 ಗ್ರಾಂ ಮೊಸರು (ಸ್ಯಾಚೆ ಪ್ಯಾಕ್): ಹಿಂದಿನ ದರ 10 ರೂ., ಹೊಸ ದರ 12 ರೂ.

500 ಗ್ರಾಂ ಮೊಸರು: ಹಿಂದಿನ ದರ 22 ರೂ., ಹೊಸ ದರ 24 ರೂ.

1 ಲೀಟರ್ ಮೊಸರು: ಹಿಂದಿನ ದರ 43 ರೂ., ಹೊಸ ದರ 46 ರೂ.

ಮಜ್ಜಿಗೆ 200 ಮಿಲಿ (ಸ್ಯಾಚೆ ಪ್ಯಾಕ್): ಹಿಂದಿನ ದರ 7 ರೂ., ಹೊಸ ದರ 8 ರೂ

ಟೆಟ್ರಾ ಪ್ಯಾಕ್: ಹಿಂದಿನ‌ ದರ 10 ರೂ., ಹೊಸ ದರ 11 ರೂ

ಪೆಟ್ ಬಾಟಲ್: ಹಿಂದಿನ ದರ 12 ರೂ., ಹೊಸ ದರ 13 ರೂ.

ಲಸ್ಸಿ 200 ಮಿಲಿ (ಸ್ಯಾಚೆ ಪ್ಯಾಕ್), ಹಿಂದಿನ ದರ 10 ರೂ., ಹೊಸ ದರ 11 ರೂ.

ಟೆಟ್ರಾ ಪ್ಯಾಕ್ ಸಾದ: ಹಿಂದಿನ‌ ದರ 20 ರೂ., ಹೊಸ ದರ 21 ರೂ.

ಪೆಟ್ ಬಾಟಲ್ ಸಾದ: ಹಿಂದಿನ ದರ 15 ರೂ., ಹೊಸ ದರ 16 ರೂ.

ಪೆಟ್ ಬಾಟಲ್ ಮ್ಯಾಂಗೋ: ಹಿಂದಿನ ದರ 20 ರೂ., ಹೊಸ ದರ 21 ರೂ.

Edited By : Vijay Kumar
PublicNext

PublicNext

18/07/2022 11:11 am

Cinque Terre

8.09 K

Cinque Terre

2

ಸಂಬಂಧಿತ ಸುದ್ದಿ