ಬೆಂಗಳೂರು: ಕೊರೋನಾದಿಂದಾಗಿ ಕಳೆದ ಎರಡು ವರ್ಷ ಹೋಟೆಲ್ ಉದ್ಯಮಕ್ಕೆ ಬಹಳಷ್ಟು ನಷ್ಟ ಆಗಿದೆ. ಈಗ ಯಾವುದೇ ಅನಗತ್ಯವಾದ ಭಯ ಹುಟ್ಟಿಸುವಂತಹ ಕೆಲಸ ಮಾಡಬಾರದು. ಅನಗತ್ಯ ಕಾನೂನುಗಳನ್ನು ಹೇರಿ ತೊಂದರೆ ಮಾಡುವುದು ಒಳ್ಳೆಯದಲ್ಲ ಅಂತ ಬೆಂಗಳೂರು ಹೋಟೆಲ್ ಅಸೋಸಿಯೇಷನ್ ಅಧ್ಯಕ್ಷ ಪಿಸಿ ರಾವ್ ಹೇಳಿದ್ದಾರೆ.
ಈಗೀಗ ಹೊಟೇಲ್ ಉದ್ಯಮ ಚೇತರಿಕೆ ಕಾಣ್ತಿದೆ. ಹಾಗಾಗಿ ಅವೈಜ್ಞಾನಿಕ ರೂಲ್ಸ್ ತರಬಾರದು. ಜನರಿಗೆ ಜಾಗೃತಿ ಮೂಡಿಸಿ, ಮಾಸ್ಕ್ ಕಡ್ಡಾಯ ಮಾಡಿ, ವೈದ್ಯಕೀಯ ಸೌಲಭ್ಯ ಹೆಚ್ಚಿಸಿ. ಆದ್ರೆ ಜನರಿಗೆ ಭಯ ಹುಟ್ಟಿಸಬೇಡಿ ಎಂದಿದ್ದಾರೆ. ಹಾಗೇ 50% ರೂಲ್ಸ್ ಮತ್ತೆ ನೈಟ್ ಕರ್ಫ್ಯೂ ಎಂಬ ಮಾತು ಕೇಳಿ ಬರುತ್ತಾ ಇದೆ. ಈಗ ಅದು ಅವಶ್ಯಕತೆ ಇಲ್ಲ. ಕೊರೋನಾ ಅಷ್ಟೊಂದು ಹಬ್ಬಿಲ್ಲ. ಸರ್ಕಾರ ಯಾವ ರೀತಿ ರೂಲ್ಸ್ ಮಾಡುತ್ತೋ ಅದನ್ನ ನೋಡಿಕೊಂಡು ನಾವು ಸರ್ಕಾರಕ್ಕೆ ಮನವಿ ಮಾಡ್ತೇವೆ ಎಂದು ಪಿಸಿ ರಾವ್ ಪಬ್ಲಿಕ್‌ನೆಕ್ಸ್ಟ್ ಗೆ ಮಾಹಿತಿ ನೀಡಿದ್ದಾರೆ..
ರಂಜಿತಾ ಸುನಿಲ್, ಮೆಟ್ರೋ ಬ್ಯೂರೊ, ಪಬ್ಲಿಕ್‌ನೆಕ್ಸ್ಟ್
PublicNext
27/04/2022 03:59 pm