ಬೆಂಗಳೂರು: ಹೋಟೆಲ್‌ಗಳಂತೆ ಕಲ್ಯಾಣ ಮಂಟಪಗಳಿಗೂ 50:50 ನಿಯಮ ಮಾಡಿ. ಕಲ್ಯಾಣ ಮಂಟಪಗಳ ಗಾತ್ರಕ್ಕೆ ಅನುಗುಣವಾಗಿ ಅವಕಾಶ ನೀಡಿ. ಮದುವೆಗೆ 100 ಜನರ ಮಿತಿ ಆದೇಶ ವಾಪಸ್ ಪಡೆಯಿರಿ. ಇದರಿಂದ ದೊಡ್ಡ ದೊಡ್ಡ ಕಲ್ಯಾಣ ಮಂಟಪಗಳಿಗೆ ನಷ್ಟವಾಗ್ತಿದೆ. ಸರ್ಕಾರದ 100 ಜನರ ಮಿತಿ ಆದೇಶದಿಂದ ಶೇ. 75 ರಷ್ಟು ನಷ್ಟ ಆಗುತ್ತದೆ. ಮದುವೆಗಳಿಗೆ ಯಾರೂ ಕಲ್ಯಾಣ ಮಂಟಪ ಬುಕ್ ಮಾಡುತ್ತಿಲ್ಲ ಎಂದು ಕಲ್ಯಾಣ ಮಂಟಪ ಮಾಲೀಕರ ಸಂಘದಿಂದ ಮನವಿ ನಾಳೆ (ಜನವರಿ 17) ಸರ್ಕಾರಕ್ಕೆ ಮನವಿ ಮಾಡಲಿದೆ.
ಈಗ ಮದುವೆಗಳ ಸೀಸನ್ ಆರಂಭವಾಗಿದೆ. 3-4 ತಿಂಗಳು ಮುಗಿದರೆ ಮತ್ತೆ ಯಾರೂ ಬುಕ್ ಮಾಡಲ್ಲ. ದಯವಿಟ್ಟು ಶೇಕಡ 50:50 ರೂಲ್ಸ್‌ಗೆ ಅವಕಾಶ ನೀಡಿ ಎಂದು ಮ್ಯಾರೇಜ್ ಹಾಲ್ಸ್ ವೆಲ್‌ಫೇರ್ ಅಸೋಸಿಯೇಷನ್ ಅಧ್ಯಕ್ಷ ರಮೇಶ್ ರೆಡ್ಡಿ ರಾಜ್ಯ ಸರ್ಕಾರವನ್ನು ಕೇಳಿಕೊಂಡಿದ್ದಾರೆ. ಮುಖ್ಯಮಂತ್ರಿ ಬಸವರಾಜ ಬೊಮ್ಮಾಯಿ ಹೋಂ ಕ್ವಾರಂಟೈನ್‌ನಲ್ಲಿ ಇರುವ ಹಿನ್ನೆಲೆ ಆರೋಗ್ಯ ಸಚಿವ ಡಾ.ಕೆ. ಸುಧಾಕರ್‌ಗೆ ಮನವಿ ಸಾಧ್ಯತೆ ಇದೆ ಎಂದು ಹೇಳಲಾಗಿದೆ.
PublicNext
16/01/2022 08:06 pm