ಆನೇಕಲ್: ರೈತರನ್ನು ಪ್ರೋತ್ಸಾಹಿಸುವ ಸಲುವಾಗಿ ಹಾಗೂ ಹೈನುಗಾರಿಕೆ ಪ್ರಗತಿಗಾಗಿ ವ್ಯವಸಾಯ ಸೇವಾ ಸಹಕಾರ ಸಂಘ ವತಿಯಿಂದ ಅನೇಕ ಕಾರ್ಯಕ್ರಮಗಳನ್ನು ಜಾರಿಗೆ ತಂದಿದ್ದು ರೈತರು ಸೌಲತ್ತುಗಳನ್ನು ಪೂರ್ಣ ಪ್ರಮಾಣದಲ್ಲಿ ಸದ್ಬಳಕೆ ಮಾಡಿಕೊಂಡು ಆರ್ಥಿಕವಾಗಿ ಸಬಲರಾಗಬೇಕು ಎಂದು ಬಮೂಲ್ ನಿರ್ದೇಶಕ ಆಂಜಿನಪ್ಪ ಮಾಹಿತಿ ನೀಡಿದರು.
ಆನೇಕಲ್ ತಾಲೂಕಿನ ಕರ್ಪೂರ ಗ್ರಾಮ ಪಂಚಾಯಿತಿ ವ್ಯಾಪ್ತಿಯ ಬೆಸ್ತಮಾನಹಳ್ಳಿ ಹಾಲು ಉತ್ಪಾದಕರ ಸಹಕಾರ ಸಂಘ ವತಿಯಿಂದ ಹಮ್ಮಿಕೊಂಡಿದ್ದ ಹೈನುಗಾರಿಕೆ ಪ್ರಗತಿಗಾಗಿ ಚೆಕ್ ವಿತರಣೆ ಕಾರ್ಯಕ್ರಮದಲ್ಲಿ ಮಾತನಾಡಿದ ಅವರು , ರೈತರಿಗೆ ಪ್ರೋತ್ಸಾಹಿಸುವ ಸಲುವಾಗಿ ಶೂನ್ಯ ಬಡ್ಡಿ ದರದಲ್ಲಿ ಸಾಲ ನೀಡಲಾಗುತ್ತಿದೆ ಬಿಡಿಸಿಸಿ ಬ್ಯಾಂಕ್ ನಿಂದ 38 ಜನ ಫಲಾನುಭವಿ ರೈತರಿಗೆ ಕೆಸಿಸಿ ಶೂನ್ಯ ಬಡ್ಡಿದರದಲ್ಲಿ 9,ಲಕ್ಷ 40 ಸಾವಿರ ಹಣ ರೈತರಿಗೆ ನೀಡಲಾಗುತಿದ್ದು ಮುಂದಿನ ದಿನಗಳಲ್ಲಿ 151 ಸಂಘಗಳ ಪೈಕಿ ಬಿಡಿಸಿಸಿ ಬ್ಯಾಂಕ್ ವತಿಯಿಂದ ಕೆಸಿಸಿ ಸಾಲ ಎಲ್ಲಾ ಶಾಖೆಗಳಲ್ಲಿ ಪ್ರಾರಂಭವಾಗಿದೆ ಇದನ್ನ ಉಪಯೋಗ ಮಾಡಿಕೊಳ್ಳುವಂತೆ ಮನವಿ ಮಾಡಿಕೊಂಡರು.
ಇನ್ನು ಮಾಯಸಂದ್ರ ಪ್ರಾಥಮಿಕ ಕೃಷಿ ಪತ್ತಿನ ಸಹಕಾರ ಸಂಘದ ಅಧ್ಯಕ್ಷ ರಾಮಕೃಷ್ಣ ಮಾತನಾಡಿ ರೈತರ ಅನುಕೂಲಕ್ಕಾಗಿ ಹೈನುಗಾರಿಕೆ ಸಾಲವನ್ನು ಪ್ರಾರಂಭ ಮಾಡಿದ್ದೇವೆ ತಲಾ ಒಬ್ಬರಿಗೆ 30 ಸಾವಿರದಿಂದ 40 ಸಾವಿರ ವರೆಗೆ ಶೂನ್ಯದಲ್ಲಿ ದರದಲ್ಲಿ ಸಾಲ ನೀಡಲಾಗಿದ್ದು. ಶ್ರೀಶಕ್ತಿ ಸಾಲ ಅಂಗಡಿ ಸಾಲ ಕಟ್ಟಡ ಸಾಲ ಸೇರಿದಂತೆ ಉತ್ತಮ ರೀತಿಯಲ್ಲಿ ಕಾರ್ಯ ನಿರ್ವಹಿಸುತ್ತಿದೆ ಎಂದು ತಿಳಿಸಿದರು. ಕಾರ್ಯಕ್ರಮದಲ್ಲಿ ಬಮೂಲ್ ನಿರ್ದೇಶಕರು ಬಿಜಿ ಆಂಜನಪ್ಪ ಜಿಲ್ಲಾಧ್ಯಕ್ಷರು ಸೋಮಶೇಖರ್ ಹಾಗೂ ಕೆಸಿಸಿ ಅಧ್ಯಕ್ಷರು ರಾಮಕೃಷ್ಣ, ರೈತರು ,ಹಾಲು ಉತ್ಪಾದಕರ ಸಂಘದ ಸದಸ್ಯರು ಭಾಗಿಯಾಗಿದ್ದರು.
Kshetra Samachara
27/02/2022 08:46 pm