ಬೆಂಗಳೂರು: ಹೀಗೆ ಶಾಲ್ ಹೊತ್ತು ಗೌರವ ಸಮರ್ಪಣೆ ಪಡೆದುಕೊಳ್ಳುತ್ತಿರುವ ಇವರ ಹೆಸರು ಗೋಪಾಲ್. ಮೂಲತಃ ಆನೇಕಲ್ ತಾಲೂಕಿನ ಸೊಪ್ಪಹಳ್ಳಿ ಗ್ರಾಮದ ನಿವಾಸಿ. ಇನ್ನು ವೃತ್ತಿಯಲ್ಲಿ ದೈಹಿಕ ಶಿಕ್ಷಣ ಶಿಕ್ಷಕರಾಗಿ ಸೇವೆ ಸಲ್ಲಿಸಿದ್ದು, ಸಮಾಜಕ್ಕೆ ತಮ್ಮದೇ ಆದ ಕೊಡುಗೆಯನ್ನು ಕೊಟ್ಟಿದ್ದಾರೆ.
ಇಂಟರೆಸ್ಟಿಂಗ್ ವಿಚಾರ ಅಂದ್ರೆ ಭಾರತೀಯ ಒಲಿಂಪಿಕ್ ಸಂಸ್ಥೆ ಮತ್ತು ಭಾರತೀಯ ಕ್ರೀಡಾ ಪ್ರಾಧಿಕಾರದಿಂದ ಗುಜರಾತ್‌ನಲ್ಲಿ ನಡೆಯಲಿರುವ ರಾಷ್ಟ್ರೀಯ ಕಬ್ಬಡಿ ಕ್ರೀಡಾಕೂಟ ಕರ್ನಾಟಕದ ಭಾಗದಿಂದ ತೀರ್ಪುಗಾರರಾಗಿ (ಅಂಪೈರ್) ದೈಹಿಕ ಶಿಕ್ಷಣ ಶಿಕ್ಷಕ ಗೋಪಾಲ್ ಆಯ್ಕೆಯಾಗಿದ್ದಾರೆ. ಹಾಗಾಗಿ ಇನ್ನಷ್ಟು ಆನೇಕಲ್‌ಗೆ ಗೌರವ ತಂದುಕೊಟ್ಟಿದ್ದಾರೆ.
ಇನ್ನು ಆಮೆಚರ್ ಕಬಡ್ಡಿ ಫೆಡರೇಶನ್ ಆಫ್ ಇಂಡಿಯಾ ದೇವರಾಜ್ ಚತುರ್ವೇದಿ ಸಹಾಯಕ ಕಾರ್ಯದರ್ಶಿ ಗೋಪಾಲರವರನ್ನ ಆಯ್ಕೆ ಮಾಡಿಕೊಂಡಿದೆ. ಇನ್ನು ಗೋಪಾಲರಿಗೆ ನ್ಯಾಷನಲ್ ಆಕ್ಟಿವ್ ಪತ್ರಕರ್ತರ ಸಂಘದಿಂದ ಸನ್ಮಾನ ಮಾಡಿ ಗೌರವಿಸಲಾಯಿತು.
ಒಟ್ಟಿನಲ್ಲಿ ಕರ್ನಾಟಕದ ಭಾಗದಿಂದ ಆನೇಕಲ್ ತಾಲೂಕಿನ ದೈಹಿಕ ಶಿಕ್ಷಕರಾಗಿ ಕೆಲಸ ನಿರ್ವಹಿಸುತ್ತಿದ್ದ ಗೋಪಾಲ್‌ರನ್ನ ಆಯ್ಕೆ ಮಾಡಿರುವುದು ಹೆಮ್ಮೆಯ ವಿಷಯ. ಕರ್ನಾಟಕಕ್ಕೆ ಇನ್ನಷ್ಟು ಗೌರವ ತಂದುಕೊಡ್ಲಿ ಅನ್ನೋದೇ ನಮ್ಮ ಆಶಯ.
ಹರೀಶ್ ಗೌತಮನಂದ ಪಬ್ಲಿಕ್ ನೆಕ್ಸ್ಟ್ ಆನೇಕಲ್
PublicNext
22/09/2022 10:52 pm