ಅಪ್ಲಿಕೇಶನ್‌ನಲ್ಲಿ ಉಚಿತವಾಗಿ ಪೂರ್ಣ ವೀಡಿಯೊವನ್ನು ವೀಕ್ಷಿಸಿ

ಬೆಂಗಳೂರು: ದಸರಾ ಹಬ್ಬದ ಮೊದಲ ದಿನ ಎಲ್ಲೆಡೆ ಪಟ್ಟದಬೊಂಬೆ ಪ್ರದರ್ಶನ

ಹೊಸಕೋಟೆ:- ರಾಜ್ಯದೆಲ್ಲೆಡೆ ದಸರಾ ಸಂಭ್ರಮ ಶುರುವಾಗಿದೆ. ಈ ದಸರಾದ ಪರ್ವಕಾಲದಲ್ಲಿ ಮನೆಮನೆಗಳಲ್ಲಿ ಬೊಂಬೆಗಳನ್ನು ಕೂರಿಸಿ ಪೂಜೆ ಮಾಡುವ ಪದ್ಧತಿ ಅನಾದಿಕಾಲದಿಂದಲೂ ನಡೆದುಕೊಂಡು ಬಂದಿದೆ. ದಸರಾ ಮಹತ್ವಗಳಲ್ಲಿ ಮುಖ್ಯವಾಗಿ ಮಕ್ಕಳಲ್ಲಿ ಶಿಕ್ಷಣದ ಬಗ್ಗೆ ಆಸಕ್ತಿ, ಕಣ್ಣಿಗೆ ಆನಂದ ನೀಡುವ ಮೂಲಕ ಇಂದ್ರಿಯ ತೃಪ್ತಿ ನೀಡುವುದು. ನಂತರ ಜೀವನದ ನಿರ್ವಹಣೆಯನ್ನು ಬೊಂಬೆ ಸಾಂಕೇತಿಕವಾಗಿ ಪ್ರತಿಬಿಂಬಿಸುತ್ತವೆ.

ಇಂದು ಕರ್ನಾಟಕದ ಗಡಿ ಬೆಂಗಳೂರು ಗ್ರಾಮಾಂತರ ಜಿಲ್ಲೆಯ ಹೊಸಕೋಟೆ ತಾಲೂಕಿನ ಸಿದ್ಧನಪುರ ಗ್ರಾಮದ ರಘು ರವರ ಮನೆಯಲ್ಲಿ ವಿವಿಧ ಬಗೆ ಬಗೆಯ ಪಟ್ಟದ ಬೊಂಬೆಗಳನ್ನು ಇಟ್ಟು ಪೂಜೆ ಸಲ್ಲಿಸಾಯಿತು. ಶ್ರೀರಾಮಾಯಣ, ಈಶ್ವರನ ಕುಟುಂಬ, ಋಷಿಮುನಿಗಳ ತಪಸ್ಸು, ರಾಮಕ್ಷ್ಮಣ ಸೀತೆ ಹನುಮ, ಬ್ರಹ್ಮವಿಷ್ಣು ಮಹೇಶ್ವರ, ಮಹಾಭಾರತದ ಕಥೆಗಳನ್ನು ಪ್ರತಿಬಿಂಬಿಸುವ ಬೊಂಬೆಗಳು ಅತ್ಯಂತ ಹೆಚ್ಚು ಆಕರ್ಷಣೆ ಆಗಿದ್ದವು.

ಸುರೇಶ್ ಬಾಬು..ಪಬ್ಲಿಕ್ ನೆಕ್ಸ್ಟ್ ಹೊಸಕೋಟೆ.

Edited By : Nagesh Gaonkar
PublicNext

PublicNext

27/09/2022 09:45 am

Cinque Terre

28.03 K

Cinque Terre

0

ಸಂಬಂಧಿತ ಸುದ್ದಿ