ಅಪ್ಲಿಕೇಶನ್‌ನಲ್ಲಿ ಉಚಿತವಾಗಿ ಪೂರ್ಣ ವೀಡಿಯೊವನ್ನು ವೀಕ್ಷಿಸಿ

ಬೆಂಗಳೂರು: ಒತ್ತುವರಿ ತೆರವಿಗೆ ತೀವ್ರ ವಿರೋಧ; ಪೆಟ್ರೋಲ್ ಹಿಡಿದು ಅಧಿಕಾರಿಗಳಿಗೆ ಮಹಿಳೆ ತರಾಟೆ

ಇಂದು ಆಪರೇಷನ್ ರಾಜಕಾಲುವೆ ಚಾಪ್ಟರ್ -2 ಮುಂದುವರೆದಿದೆ. ಇ‌ನ್ನೂ ಕೆ.ಆರ್ ಪುರಂನಲ್ಲಿ ಜೆಸಿಬಿ ಘರ್ಜನೆ ಆರಂಭಗೊಳ್ಳುತ್ತಿದಂತೆ ಡೆಮಾಲಿಷ್ ಮಾಡಬಾರದು ಅಂತ ಪೆಟ್ರೋಲ್ ಕ್ಯಾನ್ ಹಿಡಿದು ಮಹಿಳೆಯೊಬ್ಬರು ಪ್ರತಿರೋಧ ವ್ಯಕ್ತಪಡಿಸಿದ ಪ್ರಸಂಗವು ನಡೆಯಿತು.

ಕೆ.ಆರ್ ಪುರಂನ ಗಾಯತ್ರಿ ಲೇಔಟ್‌ನಲ್ಲಿ ಪಾಲಿಕೆ ತೆರವಿಗೆ ಮುಂದಾಗಿದೆ. ಹೀಗಾಗಿ ನಾವು ಇಲ್ಲೇ ಹುಟ್ಟಿ ಬೆಳೆದಿದ್ದು, ನಾವು ಇಲ್ಲಿ ಮನೆ ತೆರವು ಮಾಡೋಕೆ ಬಿಡೋಲ್ಲ ಅಂತ ಮನೆ ಮಾಲೀಕರು ಹೇಳ್ತಿದ್ದಾರೆ. ನಮ್ಮ ಮನೆ ಕೆಡುವುತ್ತಾರೆ ಅಂದ್ರೆ ನಮಗೆ ಪರಿಹಾರಬೇಕು. ಬಿಬಿಎಂಪಿ ಕಣ್ಣಿಗೆ ಕಾಣೋದು ನಮ್ಮಂತವರ ಮನೆ ಮಾತ್ರಾನಾ? ಅಂತ ಮನೆ ಮಾಲೀಕರು ಕಣ್ಣೀರು ಹಾಕ್ತಿದ್ದಾರೆ. ಸಿಎಂ ಇಲ್ಲಿಗೆ ಬರಲೇಬೇಕು ಅಂತ ಮನೆಯ ಮಾಲೀಕ ಸುನೀಲ ಸಿಂಗ್ ಹಾಗೂ ಸೋನಾ ಸಿಂಗ್ ದಂಪತಿ ಆಗ್ರಹಿಸಿದ್ದಾರೆ.

ರಾಜಕಾಲುವೆ ಮೇಲೆ ಮನೆ ನಿರ್ಮಾಣ ಆಗಿದೆ ಅಂತ ಬಿಬಿಎಂಪಿ ಮಾರ್ಕ್ ಮಾಡಿದೆ. 2 ಮೀಟರ್ ಒತ್ತುವರಿ ಆಗಿದೆ ಅಂತ ಬಿಬಿಎಂಪಿ ಅಧಿಕಾರಿಗಳು ಮಾರ್ಕ್ ಮಾಡಿದ್ದಾರೆ. ಅಷ್ಟೇ ಅಲ್ಲದೆ ಕಾಂಪೌಂಡ್, ಮನೆ ಸೇರಿ 2 ಮೀಟರ್ ತೆರವು ಮಾಡೋಕೆ ಅಧಿಕಾರಿಗಳು ಮುಂದಾಗಿದ್ದಾರೆ. ಸಿಎಂ ಇಲ್ಲಿಗೆ ಬರಲೇಬೇಕು ಅಂತ ಮನೆ ಮಾಲೀಕರು ಹಠ ಹಿಡಿದಿದ್ದಾರೆ. ಮೈಮೇಲೆ ಪೆಟ್ರೋಲ್ ಸುರಿದುಕೊಂಡ ಮಹಿಳೆ ನಾವು ಮನೆಯನ್ನ ಲೋನ್ ಅಲ್ಲಿ ಕಟ್ಟಿದ್ದೇವೆ. ನನ್ನ ಮನೆಯನ್ನು ಯಾವುದೇ ಕಾರಣಕ್ಕೂ ಒಡೆಯೊಕೆ ಬಿಡಲ್ಲ ಎಂದು ಮಹಿಳೆ ಪೆಟ್ರೋಲ್ ಹಿಡಿದು ಹೈಡ್ರಾಮಾ ಮಾಡ್ತಿದ್ದಾಳೆ.

40 ಲಕ್ಷ ಲೋನ್ ಇದೆ. 20 ವರ್ಷದಿಂದ ಇಲ್ದೇ ಇರೋ ರಾಜಕಾಲುವೆ ಈಗೆಲ್ಲಿಂದ ಬಂತು? ನಾವೇನು ಪಾಕಿಸ್ತಾನದಿಂದ ಬಂದೀದ್ದಿವಾ.? ಕಂಪೌಂಡ್ ಒಡೆದು ಕೊಳ್ಳಿ, ಅದು ಬಿಟ್ಟು ಮನೆಗೆ ಯಾಕೆ ಡ್ಯಾಮೇಜ್ ಮಾಡ್ತೀರಾ ಎಂದು ಮಹಿಳೆ ಪ್ರಶ್ನಿಸಿ ಅಧಿಕಾರಿಗಳಿಗೆ ತಲೆ ಬೀಸಿ ಮಾಡಿದ್ದಾಳೆ.

Edited By :
PublicNext

PublicNext

12/10/2022 12:52 pm

Cinque Terre

30.78 K

Cinque Terre

2

ಸಂಬಂಧಿತ ಸುದ್ದಿ