ಆಟೋ ಸೇವೆಗೆ ಸಂಬಂಧಿಸಿದಂತೆ ಸಾರಿಗೆ ಇಲಾಖೆಯದ್ದು ಒಂದು ರೂಲ್ಸ್ ಆದ್ರೆ, ಆಟೋಗಳದ್ದೇ ಮತ್ತೊಂದು ರೂಲ್ಸ್! ಸಾರಿಗೆ ಇಲಾಖೆ ನಿಗದಿ ಮಾಡಿರುವ ದರದ ಬದಲಾಗಿ ಆಟೋಗಳು ಬೇಕಾಬಿಟ್ಟಿ ಹಣ ವಸೂಲಿಗೆ ಇಳಿದಿದ್ವು. ಅಂತಹ ಆಟೋಗಳ ಸಂಚಾರಕ್ಕೆ ಈಗ ಸಾರಿಗೆ ಇಲಾಖೆ ಬ್ರೇಕ್ ಹಾಕಿದೆ.
ಸಾರ್ವಜನಿಕರಿಂದ ಬೇಕಾಬಿಟ್ಟಿ ಹಣ ವಸೂಲಿ ಮಾಡ್ತಾಯಿದ್ದಂತಹ ಆ್ಯಪ್ ಆಧಾರಿತ ಆಟೋ ಸಂಚಾರಕ್ಕೆ ಸಾರಿಗೆ ಇಲಾಖೆ ಬ್ರೇಕ್ ಹಾಕಿದೆ. ಓಲಾ, ಉಬರ್, ರಾಪಿಡೋ ಸೇರಿದಂತೆ ಹಲವು ಆ್ಯಪ್ ಮೂಲಕ ಆಟೋಗಳು ಸಂಚಾರ ಸೇವೆ ನೀಡ್ತಾಯಿದ್ವು. ಆದ್ರೆ ಸಾರಿಗೆ ಇಲಾಖೆ ನಿಗದಿ ಮಾಡಿದ್ದ ದರಕ್ಕಿಂತ ಮೂರ್ನಾಲ್ಕು ಪಟ್ಟು ಹೆಚ್ಚಿನ ಹಣ ವಸೂಲಿ ಮಾಡ್ತಾಯಿದ್ದ ಹಿನ್ನಲೆ ಸಾರಿಗೆ ಇಲಾಖೆಗೆ ಸಾರ್ವಜನಿಕರಿಂದ ದೂರುಗಳು ಬಂದಿದ್ವು. ಹೀಗಾಗಿ ಆ್ಯಪ್ ಆಟೋ ಸಂಚಾರವನ್ನು ಕೂಡಲೇ ಸ್ಥಗಿತಗೊಳಿಸುವಂತೆ ಓಲಾ, ಉಬರ್, ರಾಪಿಡೋ ಕಂಪನಿಗಳಿಗೆ ಸಾರಿಗೆ ಇಲಾಖೆ ಸೂಚನೆ ನೀಡಿದೆ.
ರಾಜ್ಯಾದ್ಯಂತ ಅನ್ವಯವಾಗುವಂತೆ ಆಟೋ ಸಂಚಾರಕ್ಕೆ ಮೊದಲ ಎರಡು ಕಿಲೋಮೀಟರ್ ಗೆ ಮಿನಿಮಮ್ ಚಾರ್ಜ್ 30 ರೂ. ನಂತರದ ಪ್ರತಿ ಒಂದು ಕಿಲೋಮೀಟರ್ ಗೆ ತಲಾ 15 ರೂಪಾಯಿ ದರವನ್ನು ಸಾರಿಗೆ ಇಲಾಖೆ ನಿಗದಿ ಮಾಡಿದೆ. ಆದ್ರೆ, ಆ್ಯಪ್ ಆಟೋಗಳು 100 ರೂ. ದರ ಫಿಕ್ಸ್ ಮಾಡಿ ಪ್ರಯಾಣಿಕರಿಂದ ಹೆಚ್ಚಿನ ಹಣ ವಸೂಲಿ ಮಾಡ್ತಾಯಿದ್ವು. ಹೀಗಾಗಿ ಆ್ಯಪ್ ಆಟೋಗಳನ್ನು ಕೂಡಲೇ ಸ್ಥಗಿತಗೊಳಿಸುವಂತೆ ಹಾಗೂ ಆಟೋ ದರ ನಿಗದಿ ಸಂಬಂಧ ಮೂರು ದಿನಗಳ ಒಳಗಾಗಿ ವರದಿ ನೀಡುವಂತೆ ಓಲಾ ಉಬರ್ ಕಂಪನಿಗೆ ಸಾರಿಗೆ ಇಲಾಖೆ ಸೂಚಿಸಿದೆ.
ಒಟ್ಟಿನಲ್ಲಿ ಒಂದು ಕಾಲದಲ್ಲಿ ಜನಸ್ನೇಹಿ ಅಂತಾ ಕರೆಸಿಕೊಳ್ತಾಯಿದ್ದ ಆಟೋಗಳು, ಜನರಿಂದ ವಸೂಲಿಗೆ ಇಳಿದಿರುವುದು ವಿಪರ್ಯಾಸವೇ ಸರಿ. ಹೀಗಾಗಿ ಈ ರೀತಿ ಅನಧಿಕೃತ ಸಂಚಾರ ವ್ಯವಸ್ಥೆ ವಿರುದ್ಧ ಸಾರಿಗೆ ಇಲಾಖೆ ಕ್ರಮ ಕೈಗೊಂಡಿರುವುದು ಸಾರ್ವಜನಿಕರಿಗೆ ಕೊಂಚ ಸಮಾಧಾನ ತಂದಿದೆ.
- ರಂಜಿತಾ ಸುನಿಲ್, ಪಬ್ಲಿಕ್ ನೆಕ್ಸ್ಟ್ ಬೆಂಗಳೂರು
PublicNext
08/10/2022 03:15 pm