ಅಪ್ಲಿಕೇಶನ್‌ನಲ್ಲಿ ಉಚಿತವಾಗಿ ಪೂರ್ಣ ವೀಡಿಯೊವನ್ನು ವೀಕ್ಷಿಸಿ

ಬೆಂಗಳೂರು: ಪತ್ರಕರ್ತ ವೀರಭದ್ರ ಸ್ವಾಮಿ ಮೇಲೆ ಹಲ್ಲೆ; ಬಿಜೆಪಿ ಕಾರ್ಯಕರ್ತರ ಖಂಡನೆ

ಆನೇಕಲ್‌ನಲ್ಲಿ ಪತ್ರಕರ್ತ ವೀರಭದ್ರ ಸ್ವಾಮಿ ಮೇಲೆ ನಡೆದ ಹಲ್ಲೆ ಪ್ರಕರಣಕ್ಕೆ ಸಂಬಂಧಪಟ್ಟಂತೆ ಹಲ್ಲೆ ಖಂಡಿಸಿ ರಾಜ್ಯ ಒಕ್ಕಲಿಗರ ಸಂಘದ ಅಧ್ಯಕ್ಷ ಮುನಿರಾಜು ಗೌಡ ಮಾತನಾಡಿ ಪ್ರಜಾಪ್ರಭುತ್ವದ ನಾಲ್ಕನೇ ಅಂಗ ಪತ್ರಿಕೋದ್ಯಮ ಅದಕ್ಕೆ ಅಪಮಾನ ಮಾಡಿರೋದು ನಿಜಕ್ಕೂ ದುರಂತ. ಸಮಾಜದ ಅನ್ಯಾಯಗಳನ್ನು ಎತ್ತಿಡಿದು ಪತ್ರಿಕಾ ರಂಗ ತಪ್ಪು ಆದ ಸಂದರ್ಭದಲ್ಲಿ ಕುಳಿತು ಮಾತನಾಡಬೇಕು ಹೊರತು ಹಲ್ಲೆ ಮಾಡಿದ್ದು ಸರಿಯಲ್ಲ. ಇದನ್ನು ನಾನು ಖಂಡಿಸುತ್ತೇನೆ ಎಂದರು.

ನ್ಯಾಷನಲ್ ಆಕ್ಟೀವ್ ರಿಪೊರ್ಟರ್ಸ್ ಅಸೊಶಿಯೇಶನ್‌ನ ಅಧ್ಯಕ್ಷ ಸುರೇಂದ್ರ ಹಾಗೂ ಆನೇಕಲ್ ತಾಲ್ಲೂಕಿನ ನ್ಯಾಷನಲ್ ಆಕ್ಟೀವ್ ಪತ್ರಕರ್ತ ಸಂಘದ ಅಧ್ಯಕ್ಷ ಆನಂದ್ ಕುಮಾರ್ ಉಪಾಧ್ಯಕ್ಷ ತೆಲಗರಹಳ್ಳಿ ಗಣೇಶ್ ಹಾಗು ಪಬ್ಲಿಕ್ ನೆಕ್ಸ್ಟ್ ವರದಿಗಾರ ಹರೀಶ್, ಗೋಪಿ, ಸೋಮಶೇಖರ್, ಸಂದೇಶ ಟಿವಿ ರವಿ ಹಾಗು ಇನ್ನಿತರ ಸಂಘದ ಪದಾಧಿಕಾರಿಗಳು ಪತ್ರಕರ್ತನ ಬೆನ್ನೆಲುಬಾಗಿ ನಿಂತು ಹಲ್ಲೆ ಮಾಡಿದ ಬಾಬುರೆಡ್ಡಿಯ ಮೇಲೆ ಜಿಗಣಿ ಪೊಲೀಸ್ ಠಾಣೆ ಹಾಗು ಆನೇಕಲ್ ಪೊಲೀಸ್ ಠಾಣೆಯಲ್ಲಿ ಪ್ರಕರಣವನ್ನ ದಾಖಲಿಸಲಾಗಿದೆ .

Edited By :
PublicNext

PublicNext

03/10/2022 06:37 pm

Cinque Terre

22.5 K

Cinque Terre

0

ಸಂಬಂಧಿತ ಸುದ್ದಿ