ವೃದ್ಧೆಯೊಬ್ಬರ ಅಂತ್ಯಸಂಸ್ಕಾರಕ್ಕೆ ತೆರಳಿದ್ದವರ ಮೇಲೆ ಹೆಜ್ಜೇನು ದಾಳಿ ಮಾಡಿದ ಘಟನೆ ತ್ಯಾಮಗೊಂಡ್ಲು ಹೋಬಳಿಯ ದೊಡ್ಡಚನ್ನವಳ್ಳಿ ಗ್ರಾಮದಲ್ಲಿ ನಡೆದಿದೆ. ಈ ದುರ್ಘಟನೆಯಲ್ಲಿ ವೃದ್ಧರೊಬ್ಬರು ಮೃತಪಟ್ಟಿದ್ದು, ಸುಮಾರು 30ಕ್ಕೂ ಅಧಿಕ ಜನರು ಹೆಜ್ಜೇನು ಕಡಿತಕ್ಕೊಳಗಾಗಿದ್ದಾರೆ.
ದೊಡ್ಡಚನ್ನವಳ್ಳಿ ಗ್ರಾಮದ ರಾಮಯ್ಯ 80 ಮೃತ ವೃದ್ಧ. ಇದೇ ಗ್ರಾಮದ ಸಿದ್ದಮ್ಮ ಎಂಬುವರು ಕಳೆದ ರಾತ್ರಿ ಮೃತರಾಗಿದ್ದು, ಮರುದಿನ ಬೆಳಿಗ್ಗೆ ಸಿದ್ದಮ್ಮನ ಅಂತ್ಯಸಂಸ್ಕಾರ ಮಾಡಲು ಅವರ ಹೊಲದ ಬಳಿ ತೆರಳಿದ್ದಾಗ ಹೆಜ್ಜೇನುಗಳು ದಾಳಿ ಮಾಡಿದ್ದವು. ಅಂತ್ಯಸಂಸ್ಕಾರದಲ್ಲಿ ಭಾಗಿಯಾಗಿದ್ದ ಸುಮಾರು 30ಕ್ಕೂ ಹೆಚ್ಚು ಜನರ ಮೇಲೆ ಹೆಜ್ಜೇನು ದಾಳಿ ನಡೆಸಿದ್ದು, ದಾಳಿಗೊಳಗಾದವರು ತ್ಯಾಮಗೊಂಡ್ಲು ಸರ್ಕಾರಿ ಆಸ್ಪತ್ರೆ, ನೆಲಮಂಗಲ ಸಾರ್ವಜನಿಕ ಆಸ್ಪತ್ರೆ, ತುಮಕೂರು ಜಿಲ್ಲಾಸ್ಪತ್ರೆಯಲ್ಲಿ ಚಿಕಿತ್ಸೆ ಪಡೆಯುತ್ತಿದ್ದಾರೆ ಎನ್ನಲಾಗಿದೆ.
ಸುಮಿತ್ರ, ಪಬ್ಲಿಕ್ ನೆಕ್ಸ್ಟ್, ನೆಲಮಂಗಲ
PublicNext
30/09/2022 12:23 pm