ಬಿಬಿಎಂಪಿ ದುರಾಡಳಿತ ಮತ್ತು ನಿರ್ಲಕ್ಷ್ಯತನ ಬಗ್ಗೆ ಸಾಕಷ್ಟು ಕೇಳಿದ್ದೇವೆ, ನೋಡಿದ್ದೇವೆ. ಅದೇ ರೀತಿ ಕಳೆದ 3 ತಿಂಗಳ ಹಿಂದೆ ರಾಜಕಾಲುವೆಯಲ್ಲಿ ಹೂಳೆತ್ತುವ ಕಾರ್ಯಕ್ಕೆ ಇಳಿದಿದ್ದ ಬಿಬಿಎಂಪಿ ತಮ್ಮ ಕೆಲಸದ ಬಳಿಕ ಚಪ್ಪಡಿಗಳನ್ನು ಹಾಕದೇ ಮಾಡಿದ ಎಡವಟ್ಟಿಗೆ ಯುವಕನೋರ್ವ ಬಲಿಯಾಗಿದ್ದಾನೆ. ಯುವಕ ತೆರೆದ ಕಾಲುವೆಗೆ ಬಿದ್ದ ದೃಶ್ಯ ಸಿಸಿ ಕ್ಯಾರಾದಲ್ಲಿ ಸೆರೆಯಾಗಿದೆ.
ಈ ದೃಶ್ಯವನೊಮ್ಮೆ ಸರಿಯಾಗಿ ನೋಡಿ, ಕಾಲುವೆ ಪಕ್ಕದಲ್ಲಿ ನೆಡೆದು ಬರುತ್ತಿದ್ದ ಯುವಕ ಇದ್ದಕ್ಕಿದ್ಹಾಗೆ ತೆರೆದ ರಾಜಕಾಲುವೆಗೆ ಬೀಳ್ತಾನೆ ಅಂತ. ಎಸ್, ಈ ಘಟನೆ ನಡೆದದ್ದು, ಬೆಂಗಳೂರಿನ ಟಿ.ದಾಸರಹಳ್ಳಿ ಬಿಬಿಎಂಪಿ ವಲಯದ ರುಕ್ಮಿಣಿನಗರ ಮುಖ್ಯರಸ್ತೆಯಲ್ಲಿ.
ಹೌದು.. ತೆರೆದ ರಾಜಕಾಲುವೆಗೆ ಕಾಲು ಜಾರಿ ಬಿದ್ದು ಚಿತ್ರದುರ್ಗ ಜಿಲ್ಲೆ ಕಂಬಾಳು ಗ್ರಾಮದ ವೆಂಕಟೇಶ್ 31 ಎಂಬಾತ ಸಾವನ್ನಪ್ಪಿದ್ದಾನೆ. ಕಳೆದ 3 ತಿಂಗಳ ಹಿಂದೆ ರಾಜಕಾಲುವೆಯಲ್ಲಿ ಹೂಳೆತ್ತವ ಕಾರ್ಯಕ್ಕೆ ಮುಂದಾಗ ರಾಜಕಾಲುವೆ ಚಪ್ಪಡಿಗಳನ್ನು ತೆಗೆಯಲಾಗಿತ್ತು. ಕಾಮಗಾರಿ ಮುಗಿದ ಬಳಿಕ ಚಪ್ಪಡಿಗಳನ್ನು ಹಾಕದೇ ಬಿಬಿಎಂಪಿ ನಿರ್ಲಕ್ಷ್ಯ ತೋರಿದ್ರಿಂದ ಈ ಅವಘಡ ಸಂಭವಿಸಿದೆ ಎನ್ನಲಾಗಿದೆ.
ಈ ಸಂಬಂಧ ಮೃತ ವೆಂಕಟೇಶ್ ಕುಟುಂಬಕ್ಕೆ ಪರಿಹಾರ ನೀಡಬೇಕೆಂದು ಆಗ್ರಹಿಸಿ ಮೃತನ ಕುಟುಂಬಸ್ಥರು, ಆಮ್ ಆದ್ಮಿ ಪಕ್ಷದ ಕಾರ್ಯಕರ್ತರು ದಾಸರಹಳ್ಳಿ ವಲಯ ಬಿಬಿಎಂಪಿ ಕಛೇರಿ ಎದುರು ಶವವಿಟ್ಟು ಪ್ರತಿಭಟನೆ ನೆಡೆಸುದ್ರು.
ಇಷ್ಟೆಲ್ಲಾ ಆದ್ರೂ ಬಿಬಿಎಂಪಿ ಅಧಿಕಾರಿಗಳಾಗಲಿ, ಸ್ಥಳೀಯ ಶಾಸಕರಾಗಲಿ ವಿಷಯ ತಿಳಿದ್ರೂ ಸ್ಥಳಕ್ಕೆ ಆಗಮಿಸದೇ ನಿರ್ಲಕ್ಷ್ಯ ತೋರುತ್ತಿದ್ದಾರೆ. ಎಡವಟ್ಟಿಗೆ ಬಿಬಿಎಂಪಿ ಮೂಲಕವೇ ಪರಿಹಾರ ನೀಡಬೇಕೆಂದು ಆಗ್ರಹಿಸಿದರು. ಇದರ ಬೆನ್ನಲ್ಲೇ ಬೀಸೋ ದೊಣ್ಣೆಯಿಂದ ತಪ್ಪಿಸಿಕೊಂಡ್ರೆ ಸಾಕು ಅಂತ ಬಿಬಿಎಂಪಿ ಅಧಿಕಾರಿಗಳು ಮೃತನ ಅಂತ್ಯಸಂಸ್ಕಾರಕ್ಕೆ ಅಂತ ಮೃತನ ಕುಟುಂಬಸ್ಥರಿಗೆ 10 ಸಾವಿರ ಪರಿಹಾರಕೊಟ್ಟು ಕೈ ತೊಳೆದುಕೊಂಡಿದ್ದಾರೆ.
ಒಟ್ಟಾರೆ ಬಿಬಿಎಂಪಿ ಎಡವಟ್ಟಿಗೆ, ಕರ್ತವ್ಯ ನಿರ್ಲಕ್ಷ್ಯಕ್ಕೆ ಇದುವರೆಗೂ ಸಾಕಷ್ಟು ಸಾವು ನೋವುಗಳು ಸಂಭವಿಸಿದ್ರು, ಎಚ್ಚೆತ್ತುಕೊಳ್ಳದ ಬಿಬಿಎಂಪಿಗೆ ಇನ್ನೆಷ್ಟು ಬಲಿಬೇಕು ಎನ್ನುವಂತಾಗಿದೆ..
PublicNext
29/09/2022 02:47 pm