ಅಪ್ಲಿಕೇಶನ್‌ನಲ್ಲಿ ಉಚಿತವಾಗಿ ಪೂರ್ಣ ವೀಡಿಯೊವನ್ನು ವೀಕ್ಷಿಸಿ

ಬೆಂಗಳೂರು: ಬೆಂಕಿ ನಂದಿಸಬೇಕಿದ್ದ ಅಗ್ನಿಶಾಮಕ ಸಿಬ್ಬಂದಿ ವಸೂಲಿಗಿಳಿದ: ಆಮೇಲೇನಾಯ್ತು?

ಬೆಂಗಳೂರು ನಗರ ಜಿಲ್ಲೆ ಕೊಡಿಗೇಹಳ್ಳಿ ಪೊಲೀಸ್ ಠಾಣೆ ವ್ಯಾಪ್ತಿಯಲ್ಲಿ ಅಗ್ನಿಶಾಮಕ ದಳದ ಸಿಬ್ಬಂದಿ ಆನಂದ್ ಎಂಬಾತ ಸಿಸಿಬಿ ಎಸಿಪಿ ರೀನಾ ಸುವರ್ಣ ರವರ ಹೆಸರೇಳಿಕೊಂಡು ಸ್ಪಾ ಒಂದರಿಂದ ಇಪ್ಪತ್ತು ಸಾವಿರ‌ ನಗದು ದೋಚಿರುವ ಪ್ರಕರಣ ತಡವಾಗಿ ಬೆಳಕಿಗೆ ಬಂದಿದೆ. ಸದ್ಯ ಅಥಣಿ ಅಗ್ನಿಶಾಮಕ ಠಾಣೆಯ ಸಿಬ್ಬಂದಿ ಆನಂದ್ ಎಂಬಾತ ಕೊಡಿಗೇಹಳ್ಳಿ ಪೊಲೀಸ್ ಠಾಣೆ ವ್ಯಾಪ್ತಿಯ ಸಾರಾ ಸ್ಪಾ ಮತ್ತು ಸೆಲೂನ್‌ಗೆ ತೆರಳಿ, 25000ಕ್ಕೆ ಡಿಮ್ಯಾಂಡ್ ಮಾಡಿದ್ದ. ಅಷ್ಟಕ್ಕೆ ಒಪ್ಪದಿದ್ದಾಗ ಸ್ಪಾ ಮ್ಯಾನೇಜರ್ ಬಳಿ 20000 ಹಣ ಪಡೆದಿದ್ದಾನೆ.

ಸಿಸಿಬಿ ಎಸಿಪಿ ರೀನಾ ಸುವರ್ಣ ಅವರ ಹೆಸರೇಳಿದ ಕೂಡಲೇ ಸ್ಪಾದವರು ಭಯಗೊಂಡಿದ್ದಾರೆ. ನೀವು ಪ್ರತಿ ತಿಂಗಳು 25000 ಮಾಮೂಲಿ ಕೊಡಬೇಕು. ಇಲ್ಲವಾದರೆ ನಿಮ್ಮ ಸೆಲೂನ್ ಮೇಲೆ ದಾಳಿಮಾಡಿಸುತ್ತೇನೆ ಎಂದು ಹೆದರಿಸಿದ್ದ. ಮೊದಲು ದುಡ್ಡು ಕೊಟ್ಟು ನಂತರ ಸ್ಪಾದವರು ತಡವಾಗಿ ಪೊಲೀಸ್ ಠಾಣೆಯಲ್ಲಿ ದೂರು ದಾಖಲಿಸಿದ್ದಾರೆ.

ಈ ಹಿಂದೆ ಹಲವು ಕಡೆ ಆನಂದ್ ಇದೇ ರೀತಿ ಜನರಿಗೆ ಮೋಸ ಮಾಡಿರೋದು ಗೊತ್ತಾಗಿದೆ. ಈ ಮೊದಲು ಪೀಣ್ಯ ಅಗ್ನಿಶಾಮಕದಳ ಸಿಬ್ಬಂದಿಯಾಗಿದ್ದ ಆನಂದ. ನಂತರ ಇದೇ ರೀತಿ ದಂಧೆ ಮಾಡಿ ಸಸ್ಪೆಂಡ್ ಆಗಿದ್ದವನು ಮತ್ತೆ ಇದೀಗ ತನ್ನ ಹಳೆ ಚಾಳಿ, ದಂಧೆ ಮುಂದುವರೆಸಿದ್ದಾನೆ. ತಪ್ಪಿತಸ್ಥ ಈತನ ಮೇಲೆ ಅಗ್ನಿಶಾಮಕ ಇಲಾಖೆ ಕಠಿಣ ಕ್ರಮ ಜರುಗಿಸಬೇಕಿದೆ.

ಸುರೇಶ್ ಬಾಬು ಪಬ್ಲಿಕ್ ನೆಕ್ಸ್ಟ್ ಯಲಹಂಕ.

Edited By :
PublicNext

PublicNext

27/09/2022 06:02 pm

Cinque Terre

24.51 K

Cinque Terre

0

ಸಂಬಂಧಿತ ಸುದ್ದಿ