ಅಪ್ಲಿಕೇಶನ್‌ನಲ್ಲಿ ಉಚಿತವಾಗಿ ಪೂರ್ಣ ವೀಡಿಯೊವನ್ನು ವೀಕ್ಷಿಸಿ

ಬೆಂಗಳೂರು: ಫಿಎಫ್ಐ, ಎಸ್ಡಿಪಿಐ ಮೇಲೆ ಮೆಗಾ ರೇಡ್; ಅರೆಸ್ಟ್ ಆದ ಪಿಎಫ್ಐ ಕಾರ್ಯಕರ್ತರೆಲ್ಲಾ ಬೆಂಗಳೂರಿಗೆ ಶಿಫ್ಟ್

ಇಂದು ಬೆಳ್ಳಂಬೆಳಗ್ಗೆ ಕಾನೂನು ಬಾಹಿರ ಚಟುವಟಿಕೆಗಳಲ್ಲಿ ತೊಡಗಿರುವ ಪಿಎಫ್ಐ ಕಚೇರಿ ಹಾಗೂ ನಾಯಕರ ಮನೆ ಮೇಲೆ ಎನ್ಐಎ ಅಧಿಕಾರಿಗಳು ದಾಳಿ ಮಾಡಿದ್ದಾರೆ. ಮತ್ತೊಂದೆಡೆ ಅದೇ ಪಿಎಫ್ಐ ಕಾರ್ಯಕರ್ತರ ವಿರುದ್ಧ ದಾಖಲಾಗಿದ್ದ ಎಫ್ಐಆರ್ ಆಧಾರದ ಮೇಲೆ ಸಿಸಿಬಿ ಹಾಗೂ ಬೆಂಗಳೂರಿನ ಪೂರ್ವ ವಿಭಾಗ ಪೊಲೀಸ್ರು ರಾಜ್ಯದ ವಿವಿಧ ಜಿಲ್ಲೆಗಳಲ್ಲಿ ಮೆಗಾ ರೇಡ್ ಮಾಡಿ ಭಯೋತ್ಪಾದನ ಕೃತ್ಯಗಳಲ್ಲಿ ತೊಡಗಿದ್ದ ಬರೋಬ್ಬರಿ 19 ಮಂದಿಯನ್ನ ಬಂಧಿಸಿದ್ದಾರೆ. ಆ ಆಪರೇಷನ್ ಹೇಗಿತ್ತು. ಬಂಧಿತರು ಯಾವ ರೀತಿ ವಿಧ್ವಂಸಕ ಕೃತ್ಯವೆಸಗಲು ಪ್ಲ್ಯಾನ್ ಮಾಡ್ತಿದ್ರು ಅನ್ನೋ ಸ್ಫೋಟಕ ಮಾಹಿತಿ ಇಲ್ಲಿದೆ.

ಸಮಾಜದಲ್ಲಿ ಶಾಂತಿ ಸುವ್ಯವಸ್ಥೆ ಹದಗೆಡಿಸಿ, ಭಯೋತ್ಪಾದನ ಕೃತ್ಯವೆಸಗಲು ಸಿದ್ಧತೆ ನಡೆಸ್ತಿದ್ದ ಶಂಕಿತ ಉಗ್ರರು ಶಿವಮೊಗ್ಗ ಹಾಗೂ ಮಂಗಳೂರಿನಲ್ಲಿ ಬಂಧನವಾಗ್ತಿದ್ದಂತೆ ಬೆಂಗಳೂರಿನಲ್ಲಿ ಕೆ.ಜಿ. ಹಳ್ಳಿ ಪೊಲೀಸ್ ಠಾಣೆಯಲ್ಲಿ ದಾಖಲಾಗಿದ್ದ ಪ್ರಕರಣಕ್ಕೆ ಸಂಬಂಧಿಸಿದಂತೆ ಬೆಂಗಳೂರಿನ ಪೂರ್ವ ವಿಭಾಗ ಪೊಲೀಸ್ರು ಹಾಗೂ ಸಿಸಿಬಿ ಪೊಲೀಸ್ರು ಜಂಟಿ ಕಾರ್ಯಾಚರಣೆ ನಡೆಸಿ ದೇಶ ದ್ರೋಹ ಹಾಗೂ ಭಯೋತ್ಪಾದನ ಕೃತ್ಯಗಳಿಗೆ ಸಂಚು ರೂಪಿಸ್ತಿದ್ದ 19 ಆರೋಪಿಗಳನ್ನ ಬಂಧಿಸಿದ್ದಾರೆ.

ಪಿಎಫ್ಐ ಕಾರ್ಯಕರ್ತರಿಗೆ ಭಯೋತ್ಪಾದಕ ಕೃತ್ಯವೆಸಗಲು ತರಬೇತಿ ನೀಡಲಾಗ್ತಿದೆ ಅನ್ನೋ ಮಾಹಿತಿ ಸಿಕ್ಕಿತ್ತು. ಆ ಮಾಹಿತಿ ಆಧಾರದ ಮೇಲೆ ಕೆ.ಜಿ. ಹಳ್ಳಿ ಪೊಲೀಸ್ ಠಾಣೆಯಲ್ಲಿ ಎಫ್ಐಆರ್ ದಾಖಲಿಸಿಕೊಂಡಿದ್ದ ಪೊಲೀಸ್ರು ಆರೋಪಿಗಳ ಬಂಧನಕ್ಕೆ ಶೋಧ ಮುಂದುವರೆಸಿದ್ರು. ಪ್ರಕರಣದಲ್ಲಿ ಪ್ರಮುಖವಾಗಿ ಕೇಳಿ ಬಂದಿದ್ದ ಆರೋಪಿಗಳಾದ ನಾಸಿರ್ ಹಾಗೂ ಮನ್ಸೂರ್ ನನ್ನ ವಶಕ್ಕೆ ಪಡೆದ ಕೆ.ಜಿ. ಹಳ್ಳಿ ಪೊಲೀಸ್ರು ಆರೋಪಿಗಳನ್ನ ತೀವ್ರ ವಿಚಾರಣೆಗೊಳಪಡಿಸಿದ್ರು. ವಿಚಾರಣೆ ವೇಳೆ ಆರೋಪಿಗಳ ನೆಟ್ ವರ್ಕ್ ಕೇವಲ ಬೆಂಗಳೂರು ಮಾತ್ರವಲ್ಲದೇ ರಾಜ್ಯವ್ಯಾಪಿ ಇದೆ ಅನ್ನೋ ಸ್ಫೋಟಕ ಮಾಹಿತಿ ಆರೋಪಿಗಳ ಬಾಯಿಂದ ಹೊರ ಬಿದ್ದಿತ್ತು. ಕೂಡಲೇ ಎಮರ್ಜೆನ್ಸಿ ಮೀಟಿಂಗ್ ನಡೆಸಿದ ಪೊಲೀಸ್ರು ರಾಜ್ಯದಲ್ಲಿ ವಿಧ್ವಂಸಕ ಕೃತ್ಯಗಳನ್ನ ನಡೆಸಲು ಸದ್ದಿಲ್ಲದೇ ಸಿದ್ದತೆ ನಡೆಸ್ತಿದ್ದ ಪಿಎಫ್ಐ ಮೆಂಬರ್ ಗಳ ಫ್ಲ್ಯಾನ್ ನ ಹತ್ತಿಕ್ಕಲೇಬೇಕೆಂದು ದಾಳಿ ನಡೆಸಲು ತೀರ್ಮಾನಿಸಿದ್ರು.

ಅದೇ ರೀತಿ ತಡರಾತ್ರಿಯೇ ರಾಜ್ಯದ ಯಾವ ಯಾವ ಪ್ಲೇಸ್ ಗಳಲ್ಲಿ ರೇಡ್ ಮಾಡ್ಬೇಕು ಅಂತ ತೀರ್ಮಾನಿಸಿ ಹೊರಟ ಖಾಕಿ ಪಡೆ, ಬೆಳಗಾಗೋದ್ರಲ್ಲಿ ಬೆಂಗಳೂರು, ಶಿವಮೊಗ್ಗ, ಮೈಸೂರು, ಕಲಬುರ್ಗಿಯಲ್ಲಿ ಕಾರ್ಯಾಚರಣೆ ನಡೆಸಿ, ದೇಶದ್ರೋಹ ಕೆಲಸಗಳಲ್ಲಿ ಮಗ್ನರಾಗಿದ್ದ 19 ಮಂದಿ ಪಿಎಫ್ಐ ಸಂಘಟನೆ ಸದಸ್ಯರನ್ನ ಬಂಧಿಸಿದ್ದಾರೆ.

ಬಂಧಿತರ ಪೈಕಿ ಬೆಂಗಳೂರಿನಲ್ಲಿ ಸೆರೆ ಸಿಕ್ಕಿರೋ ಮನ್ಸೂರ್ ಹಾಗೂ ನಾಸಿರ್ ರಾಜ್ಯದಲ್ಲಿ ಶಾಂತಿ ಸುವ್ಯವಸ್ಥೆ ಹಾಳು ಮಾಡಿ, ವಿಧ್ವಂಸಕ ಕೃತ್ಯಗಳನ್ನೆಸಗಬೇಕೆಂದು ಪ್ಲಾನ್ ಮಾಡಿದ್ರು. ಅದಕ್ಕೆಂದೇ ಯುವಕರನ್ನ ಪಿಎಫ್ಐ ಸಂಘಟನೆಗೆ ನೇಮಕಾತಿ ಮಾಡಿಕೊಳ್ಳೋದು, ಅವ್ರಿಗೆ ರಾಜ್ಯದ ವಿವಿಧ ಭಾಗಗಳಲ್ಲಿ ಟ್ರೈನಿಂಗ್ ನೀಡುವ ಕೆಲ್ಸ ಮಾಡಲಾಗ್ತಿತ್ತು.

ಸದ್ಯ ಬೆಂಗಳೂರಿನಲ್ಲಿ ಬಂಧಿತರಾಗಿರೋ ಮನ್ಸೂರ್ ನನ್ನ ಅಜ್ಞಾತ ಸ್ಥಳದಲ್ಲಿ ವಿಚಾರಣೆ ನಡೆಸಲಾಗ್ತಿದೆ. ಮತ್ತೊಂದೆಡೆ ಶಿವಮೊಗ್ಗ, ಮೈಸೂರು, ಕಲಬುರ್ಗಿ ಹಾಗೂ ಹುಬ್ಬಳಿಯಲ್ಲಿ ದೇಶದ್ರೋಹ ಆರೋಪದ ಅಡಿಯಲ್ಲಿ ಬಂಧಿಸಿರೋ ಆರೋಪಿಗಳನ್ನ ಬೆಂಗಳೂರಿಗೆ ಕರೆತರಲಾಗುತ್ತಿದ್ದು, ನ್ಯಾಯಾಲಯದ ಮುಂದೆ ಹಾಜರು ಪಡಿಸಿ ವಶಕ್ಕೆ ತೆಗೆದುಕೊಳ್ಳಲು ಪೊಲೀಸರು ತೀರ್ಮಾನಿಸಿದ್ದಾರೆ.

ಆರೋಪಿಗಳನ್ನ ವಶಕ್ಕೆ ಪಡೆದ ಬಳಿಕ ಮತ್ತಷ್ಟು ಸ್ಪೋಟಕ ಮಾಹಿತಿ ಜೊತೆಗೆ ಮತ್ತಷ್ಟು ಆರೋಪಿಗಳು ಸೆರೆಯಾಗಲಿದ್ದಾರೆ ಎಂದು ತಿಳಿದು ಬಂದಿದೆ.

Edited By :
PublicNext

PublicNext

22/09/2022 08:49 pm

Cinque Terre

45.98 K

Cinque Terre

129

ಸಂಬಂಧಿತ ಸುದ್ದಿ