ಅಪ್ಲಿಕೇಶನ್‌ನಲ್ಲಿ ಉಚಿತವಾಗಿ ಪೂರ್ಣ ವೀಡಿಯೊವನ್ನು ವೀಕ್ಷಿಸಿ

ಬೆಂಗಳೂರು: ಪೌರಾಡಳಿತ ಸಚಿವ ಎಂಟಿಬಿ ನಾಗರಾಜ್ ಜಿಲ್ಲೆಯಲ್ಲಿ ಬಿಜೆಪಿ ಸದಸ್ಯರಿಗೆ ಅಪಮಾನ

ಬೆಂಗಳೂರು: ಅಂತರಾಷ್ಟ್ರೀಯ ವಿಮಾನ ನಿಲ್ದಾಣ ಖ್ಯಾತಿಯ ದೇವನಹಳ್ಳಿ ಅಂತರಾಷ್ಟ್ರೀಯ ಮಟ್ಟದಲ್ಲಿ ಅಭಿವೃದ್ಧಿ ಆಗುತ್ತಿಲ್ಲ. ಇದಕ್ಕೆ ಕಾರಣ ರಾಜಕೀಯ ಪಕ್ಷಗಳ ಪುರಸಭಾ ಸದಸ್ಯರ ಬಲಾಬಲ. ಬೆಂಗಳೂರು ಗ್ರಾಮಾಂತರ ಜಿಲ್ಲೆ ದೇವನಹಳ್ಳಿಯ 23 ಸಂಖ್ಯಾಬಲದ ಪುರಸಭೆಯಲ್ಲಿ ಯಾರಿಗೂ ಸ್ಪಷ್ಟಬಹುಮತ ಸಿಕ್ಕಿಲ್ಲ. ಇದರಿಂದ ಕಾಂಗ್ರೆಸ್ ಪಕ್ಷದ 10ಜನ ಸದಸ್ಯರು ಮತ್ತು ಜೆಡಿಎಸ್ ಪಕ್ಷದ 7ಜನ ಸದಸ್ಯರು ಸೇರಿ ಸಮ್ಮಿಶ್ರವಾಗಿ ಅಧ್ಯಕ್ಷ ಮತ್ತು ಉಪಾಧ್ಯಕ್ಷ ಗಾದೆಗಳನ್ನು ಹಂಚಿಕೊಂಡು ಆಡಳಿತ ನಡೆಸುತ್ತಿವೆ. ಇನ್ನು 3ಜನ ಸದಸ್ಯರು ಪಕ್ಷೇತರರಾದರೆ ಇನ್ನು ಕೇವಲ ಮೂರು ಜನ ಸದಸ್ಯರಿರುವ ಬಿಜೆಪಿ ಸದಸ್ಯರು ಆಟಕ್ಕುಂಟು ಲೆಕ್ಕಕ್ಕಿಲ್ಲ ಎಂಬಂತಾಗಿದೆ.

ದೇವನಹಳ್ಳಿ ಪುರಸಭೆ ಮುಖ್ಯಾಧಿಕಾರಿ ಎ.ಎಚ್ ನಾಗರಾಜ್ ಜೆಡಿಎಸ್ ಮತ್ತು ಕಾಂಗ್ರೆಸ್ ಪಕ್ಷದ ಸದಸ್ಯರಿಗೆ ಸಹಕರಿಸುತ್ತಾರೆ. ಬಿಜೆಪಿ ಸದಸ್ಯರನ್ನು ಯಾವ ಕೆಲಸದಲ್ಲು ಪರಿಗಣಿಸಲ್ಲ. ನೈರ್ಮಲ್ಯ, ಕುಡಿಯುವ ನೀರು ಸೇರಿದಂತೆ ಯಾವ ಕೆಲಸ ಆಗಬೇಕೆಂದು ಕೇಳಿದರು, ಅಧ್ಯಕ್ಷರನ್ನು ಕೇಳಿ, ಕಾಂಗ್ರೆಸ್ ಪಕ್ಷದವರನ್ನು ಕೇಳಿ ಅಂತ ಹಾರಿಕೆ ಉತ್ತರ ನೀಡ್ತಾರೆ. ಎಂಬ ಆರೋಪಿಸಿದ್ದಾರೆ. ಈ ಬಗ್ಗೆ ಮುಖ್ಯಾಧಿಕಾರಿ ನಾಗರಾಜ್‌ರವರೆ ಬಿಜೆಪಿ ಸದಸ್ಯರೆ ಸರಿಯಾಗಿ ಮೀಟಿಂಗ್, ಸಭೆ, ಕೆಲಸಗಳಿಗೆ ಬರಲ್ಲ ಎಂದು ಪ್ರತ್ಯುತ್ತರ ನೀಡಿದ್ದಾರೆ.

ಪೌರಾಡಳಿತ ಸಚಿವ ಎಂಟಿಬಿ ನಾಗರಾಜ್ ಅವರ ಸ್ವಂತ ಜಿಲ್ಲೆಯಲ್ಲಿ ಪುರಸಭೆಯ ಬಿಜೆಪಿ ಬೆಂಬಲಿತ ಸದಸ್ಯರಿಗೆ ಬೆಲೆಯಿಲ್ಲ ಎನ್ನುವುದಾದರೆ ಅಂತಾರಾಷ್ಟ್ರೀಯ ಖ್ಯಾತಿಯ ದೇವನಹಳ್ಳಿಯ ಅಭಿವೃದ್ಧಿ ಹೇಗೆ ಸಾದ್ಯ ಎಂಬ ಮಾತು ಕೇಳಿ ಬರ್ತಿವೆ. ಈ ಬಗ್ಗೆ ಎಂಟಿಬಿ. ನಾಗರಾಜ್ ಅವರು ಇತ್ತ ಗಮನ ಹರಿಸಬೇಕಿದೆ.

ಸುರೇಶ್ ಬಾಬು ಪಬ್ಲಿಕ್ ನೆಕ್ಸ್ಟ್ ದೇವನಹಳ್ಳಿ.

Edited By : Manjunath H D
PublicNext

PublicNext

11/10/2022 08:55 pm

Cinque Terre

33.86 K

Cinque Terre

0

ಸಂಬಂಧಿತ ಸುದ್ದಿ