ಅಪ್ಲಿಕೇಶನ್‌ನಲ್ಲಿ ಉಚಿತವಾಗಿ ಪೂರ್ಣ ವೀಡಿಯೊವನ್ನು ವೀಕ್ಷಿಸಿ

ಬೆಂಗಳೂರು: ಬಿಜೆಪಿ ವಿರುದ್ಧ ದಿನೇಶ್​​​ ಗುಂಡೂರಾವ್​​​ ವಾಗ್ದಾಳಿ

ಬೆಂಗಳೂರು: ಎಐಸಿಸಿ ಮಾಜಿ ಅಧ್ಯಕ್ಷ ರಾಹುಲ್ ಗಾಂಧಿ ಮೇಲಿರುವಷ್ಟು ಭಯ ಬಿಜೆಪಿ ನಾಯಕರಿಗೆ ಬೇರೆ ಯಾರ ಮೇಲೂ ಇಲ್ಲ ಎಂದು

ಕೆಪಿಸಿಸಿ ಮಾಜಿ ಅಧ್ಯಕ್ಷ ದಿನೇಶ್ ಗುಂಡೂರಾವ್ ಹೇಳಿದ್ದಾರೆ. ಟ್ವೀಟ್ ಮಾಡಿರುವ ಅವರು, ರಾಹುಲ್ ಗಾಂಧಿಯವರನ್ನು ಕೆಟ್ಟದಾಗಿ ಬಿಂಬಿಸಲು ಬಿಜೆಪಿ ಕೋಟ್ಯಂತರ ಹಣ ವ್ಯಯಿಸುತ್ತಿರುವುದು ಅಕ್ಷರಶಃ ಸತ್ಯ. ಬಹುಶಃ ಬಿಜೆಪಿಯವರಿಗೆ ರಾಹುಲ್ ಗಾಂಧಿಯವರ ಮೇಲಿರುವ ಭಯ ಇನ್ಯಾರ ಮೇಲೂ ಇಲ್ಲ. ಆ ಭಯದಿಂದಲೇ, ಅವರ ಬಗ್ಗೆ ತಪ್ಪು ಅಭಿಪ್ರಾಯ ಮೂಡಿಸುವ ಕೆಲಸ ಬಿಜೆಪಿಯ ಟ್ರೋಲ್ ಪೇಜ್‌ಗಳು, ಫೇಕ್ ಫ್ಯಾಕ್ಟರಿಗಳು ಮಾಡುತ್ತಿವೆ ಎಂದು ಅಭಿಪ್ರಾಯಪಟ್ಟಿದ್ದಾರೆ. ರಾಹುಲ್ ಗಾಂಧಿಯವರಷ್ಟು ನಿರಂತರ ಅಪಮಾನ ಹಾಗೂ ಸುಳ್ಳು ಆರೋಪಗಳಿಗೆ ಗುರಿಯಾದವರಿಲ್ಲ.

ನೇರವಾದ ಮರಕ್ಕೆ ಕೊಡಲಿ ಪೆಟ್ಟು ಜಾಸ್ತಿ ಎಂಬಂತೆ, ರಾಹುಲ್‌ರವರ ನೇರವಂತಿಕೆ ಹಾಗೂ ಎಲ್ಲರನ್ನೂ ಒಳಗೊಳ್ಳುವಿಕೆಯ ಪ್ರೀತಿಯ ವ್ಯಕ್ತಿತ್ವ ಬಿಜೆಪಿಯವರ ನಿದ್ದೆಗೆಡಿಸಿದೆ. ದ್ವೇಷಕಾರುವ ಬಿಜೆಪಿಯವರಿಗೆ ಪ್ರೀತಿಯ ರಾಯಭಾರಿ ಆಗಿರುವ ರಾಹುಲ್ ಕಂಡರೆ ಹೆದರಿಕೆ ಸಹಜ ಎಂದು ಹೇಳಿದ್ದಾರೆ. ಬಿಜೆಪಿಯವರು ತಮ್ಮ ವಿರುದ್ದ ಎಷ್ಟೇ ಅಪಪ್ರಚಾರ ಮಾಡಿದರೂ, ಅದೆಷ್ಟೇ ಅಪಹಾಸ್ಯ ಮಾಡಿದರೂ ರಾಹುಲ್​​ ಗಾಂಧಿಯವರು ಎದೆಗುಂದಿಲ್ಲ ಎಂದು ತಿಳಿಸಿದ್ದರು.

Edited By : Nagaraj Tulugeri
PublicNext

PublicNext

10/10/2022 10:05 pm

Cinque Terre

24.51 K

Cinque Terre

3

ಸಂಬಂಧಿತ ಸುದ್ದಿ