ಅಪ್ಲಿಕೇಶನ್‌ನಲ್ಲಿ ಉಚಿತವಾಗಿ ಪೂರ್ಣ ವೀಡಿಯೊವನ್ನು ವೀಕ್ಷಿಸಿ

ಬೆಂಗಳೂರು : ಭಾರತ ಐಕ್ಯತಾ ಯಾತ್ರೆಯಿಂದ ಸರ್ಕಾರಕ್ಕೆ ನಡುಕ - ರಾಮಲಿಂಗಾರೆಡ್ಡಿ

ಸಂವಿಧಾನದ ನಾಲ್ಕನೇ ಅಂಗ ಎಂದು ಪರಿಗಣಿಸಲಾದ ಮಾಧ್ಯಮದ ಭಾಗವಾದ ಕೆಲವು ಪತ್ರಿಕೆಗಳು ವಸ್ತು ನಿಷ್ಠವಾದ ವರದಿಯನ್ನು ಪ್ರಕಟಣೆ ಮಾಡುವುದನ್ನು ಬಿಟ್ಟು ತಮ್ಮ ಸ್ವಯಂ ಸಾಧನೆಗಾಗಿ ಬಿಜೆಪಿ ನೀಡಿದ ಜಾಹೀರಾತನ್ನು ಯಥಾವತ್ತಾಗಿ ಕಣ್ಣು ಮುಚ್ಚಿ ಇಂದು ಪ್ರಕಟಿಸಿರುವುದು ದುರದೃಷ್ಟಕರ ಎಂದು ಕೆಪಿಸಿಸಿ ಕಾರ್ಯಾಧ್ಯಕ್ಷ ರಾಮಲಿಂಗಾರೆಡ್ಡಿ ಹೇಳಿದ್ದಾರೆ.

ಕರ್ನಾಟಕದಲ್ಲಿ ರಾಹುಲ್ ಗಾಂಧಿ ನೇತೃತ್ವದಲ್ಲಿ ನಡೆಯುತ್ತಿರುವ ಭಾರತ ಐಕ್ಯತಾ ಯಾತ್ರೆಗೆ ಭಾರೀ ಜನಬೆಂಬಲ ವ್ಯಕ್ತವಾಗಿರುವ ಹಿನ್ನೆಲೆಯಲ್ಲಿ ಇಂದು ರಾಜ್ಯದ ಕೆಲವು ದಿನಪತ್ರಿಕೆಗಳ ಮುಖಪುಟದಲ್ಲಿ ರಾಜ್ಯ ಬಿಜೆಪಿ ಜಾಹೀರಾತು ನೀಡಿದ್ದು, ಅದರಲ್ಲಿ ಕೆಲವು ಸುಳ್ಳು ಸುದ್ದಿಗಳು ಕೂಡ ಪ್ರಕಟವಾಗಿವೆ.

ಈ ಹಿನ್ನೆಲೆಯಲ್ಲಿ ಸಾಮಾಜಿಕ ಜಾಲತಾಣಗಳಲ್ಲಿ ಪ್ರತಿಕ್ರಿಯೆ ನೀಡಿರುವ ರಾಮಲಿಂಗಾರೆಡ್ಡಿ, ಸತ್ಯವಿಲ್ಲದ ಇಂತಹ ಅತಿರಂಜಿತ ಜಾಹೀರಾತುಗಳನ್ನು ಪ್ರಕಟಿಸುವ ಬದಲು ಮೊದಲಿನಂತೆ ವಿಶ್ವಾಸಾರ್ಹತೆಯನ್ನು ಪತ್ರಿಕೆಗಳು ಕಾಪಾಡಿಕೊಂಡು ಜನತೆಗೆ ನೈಜ್ಯ ವಿಷಯಗಳನ್ನು ತಿಳಿಸಬೇಕು ಎಂದು ಸಲಹೆ ನೀಡಿದ್ದಾರೆ.

ಭಾರತ ಐಕ್ಯತಾ ಯಾತ್ರೆಯಿಂದ ಸರ್ಕಾರಕ್ಕೆ ನಡುಕ ಶುರುವಾಗಿದೆ ಎಂಬುದಕ್ಕೆ ಇಂತಹ ಜಾಹೀರಾತುಗಳೇ ಸಾಕ್ಷಿ ಎಂದಿದ್ದಾರೆ.

Edited By :
PublicNext

PublicNext

07/10/2022 02:55 pm

Cinque Terre

24.68 K

Cinque Terre

2

ಸಂಬಂಧಿತ ಸುದ್ದಿ