ಬೆಂಗಳೂರು : ಕತ್ತಿ ಹಿಡಿದು ನಿಂತ ಸಿದ್ದರಾಮಯ್ಯ ಪೋಸ್ಟರ್ ನ್ನ ಆರ್ ಅಶೋಕ್ ನಿನ್ನೆ ಬಿಡುಗಡೆ ಮಾಡಿದರಿಂದ ಇಂದು ಕಂದಾಯ ಸಚಿವ ಆರ್.ಅಶೋಕ್ ಗೆ ಕಾಂಗ್ರೆಸ್ ತಿರುಗೇಟು ನೀಡಿದೆ.ಟಿಪ್ಪು ಸುಲ್ತಾನ್ ವೇಷಭೂಷಣ ಧರಿಸಿದ ಸಚಿವ ಆರ್.ಅಶೋಕ್ ಪೋಸ್ಟರ್ ನ್ನ ಕಾಂಗ್ರೆಸ್ ಬಿಡುಗಡೆ ಮಾಡಿದೆ.ಟ್ವಿಟರ್ ಮೂಲಕ ಬಿಜೆಪಿ ನಾಯಕರ ಇನ್ನಷ್ಟು ಪೋಸ್ಟರ್ ನ್ನ ಕೈಪಡೆ ಬಿಡುಗಡೆ ಮಾಡಲಿದೆ.ಹಿಂದೆ ಬಿಜೆಪಿ ಸರ್ಕಾರ ಅವಧಿಯಲ್ಲಿ ಟಿಪ್ಪು ಜಯಂತಿ ಆಚಾರಣೆಯ ವೇಳೆ ಟಿಪ್ಪು ವೇಷಭೂಷಣ ಬಿಜೆಪಿ ನಾಯಕರು ಧರಸಿದರು.ಆದ್ರೆ ಇದೀಗ ಬಿಜೆಪಿ ನಾಯಕರ ಹಳೆ ಪೋಸ್ಟರ್ ನ್ನ ಕಾಂಗ್ರೆಸ್ ಮತ್ತೆ ರಿ ಲಾಂಚ್ ಮಾಡಿದೆ.
ಮಾಜಿ ಸಿಎಂ ಬಿಎಸ್ ಯಡಿಯೂರಪ್ಪ, ಜಗದೀಶ್ ಶೆಟ್ಟರ್, ಸಿಪಿ ಯೋಗೇಶ್ವರ್, ಶ್ರೀರಾಮಲು ಸೇರಿದಂತೆ ಹಲವು ನಾಯಕರು ಟಿಪ್ಪು ವೇಷಭೂಷಣ ಧರಿಸಿದ ಪೋಸ್ಟರ್ ನ್ನ ಕಾಂಗ್ರೆಸ್ ರಿ ಲಾಂಚ್ ಮಾಡಿರುವುದು ಎಟ್ಟಿಗೆ ಎದಿರೇಟು ಕೊಟ್ಟಂತಿದೆ.
PublicNext
04/10/2022 02:06 pm