ಅಂದಿನ ಉಸ್ತುವಾರಿ ವೇಣುಗೋಪಲ್ ಯಾವುದೇ ಕಾರಣಕ್ಕೂ ಕೇಸ್ ವಾಪಸ್ ಪಡೆಯೋ ಪ್ರಶ್ನೆಯೇ ಇಲ್ಲ ಅಂತ ಹೇಳಿದ್ರು. ಈಗ ಸಿದ್ದರಾಮಯ್ಯ ನಾವೇ ಹೇಳಿದ್ದು ಬ್ಯಾನ್ ಮಾಡೋಕೆ ಅಂತ ಹೇಳ್ತಿದ್ದಾರೆ. ಕುಟ್ಟಪ್ಪ, ರುದ್ರೇಶ್, ಮಡಿವಾಳ ಇವರ ಹತ್ಯೆ ಬಳಿಕ ಕೇಸ್ ಹಾಕಲು ಹಿಂಜರಿದರು. ಇದೆಲ್ಲವನ್ನೂ ನೋಡಿದ್ರೆ ಕಾಂಗ್ರೆಸ್ ಸೂತಕದ ಮನೆಯಾಗಿದೆ.
ಅವರ ಮನೆಯವರನ್ನ ಬ್ಯಾನ್ ಮಾಡಲಾಗಿದೆ. ಕೊಡಗು, ಮೈಸೂರು, ಮಂಗಳೂರಿನಲ್ಲಿ ಇವರಿಗೆ ವಿದೇಶಿ ಟ್ರೈನಿಂಗ್ ನೀಡಲಾಗಿದೆ. ಬೈಕಲ್ಲಿ ಹೋಗುವಾಗ ಹೇಗೆ ಕತ್ತು ಕಡಿಯಬೇಕು ,ಕೆ.ಜಿ ಹಳ್ಳಿ, ಡಿ.ಜೆ ಹಳ್ಳಿ ಗಲಭೆ ಹೇಗೆ ಮಾಡಬೇಕು,ಕೇರಳ ನಿವೃತ್ತ ಪೊಲೀಸರು ಬಂದು ಹೇಗೆ ಕೇಸ್ ಆಗದ ರೀತಿ ಹತ್ಯೆ ಮಾಡಬೇಕು ಅಂತ ಟ್ರೈನಿಂಗ್ ನೀಡಿರೋ ಬಗ್ಗೆ ವರದಿಯಾಗಿದೆ. ಹೀಗಿರುವಾಗ ಸಿದ್ದರಾಮಯ್ಯ ನಾವೇ ಹೇಳಿದ್ದು, ಅದಕ್ಕೆ ಬ್ಯಾನ್ ಮಾಡಿದೆ ಅಂತ ಹೇಳಿಕೊಳ್ತಾರೆ. ಅವರಿಗೆ ನಾಚಿಕೆಯಾಗಬೇಕು, ಕೂಡಲೇ ಕ್ಷಮೆ ಕೇಳಬೇಕು ಅಂತ ಆರ್ ಅಶೋಕ್ ಒತ್ತಾಯಿಸಿದಾರೆ.
PublicNext
03/10/2022 01:17 pm