ಆನೇಕಲ್ : ಹಣ್ಣು ಮತ್ತು ತರಕಾರಿ ಅಂಗಡಿ ಉದ್ಘಾಟನೆ ಮುಂಚಿತವಾಗಿ ರಾತೋರಾತ್ರಿ ಕಿಡಿಗೇಡಿಗಳು ಕಸವನ್ನೆಲ್ಲ ತಂದು ಅಂಗಡಿ ಮುಂದೆ ವಿಲೇವಾರಿ ಮಾಡಿರುವ ಘಟನೆ ಬೆಂಗಳೂರು ಹೊರವಲಯದ ಆನೇಕಲ್ ತಾಲೂಕಿನ ಹೆಬ್ಬಗೋಡಿ ನಗರಸಭೆ ವ್ಯಾಪ್ತಿಯ ಗೊಲ್ಲಹಳ್ಳಿ ಬಾಲಾಜಿ ರಸ್ತೆಯಲ್ಲಿ ನಡೆದಿದೆ..
ಇನ್ನು, ಹಣ್ಣು ಮತ್ತು ತರಕಾರಿ ಅಂಗಡಿಯನ್ನು ಉದ್ಘಾಟನೆ ಮಾಡಲು ರಾಜಪ್ಪ ಮತ್ತು ಸ್ನೇಹಿತರು, ಕುಟುಂಬಸ್ಥರು ಎಲ್ಲಾ ಸಿದ್ಧತೆ ಮಾಡಿಕೊಂಡಿದ್ದರು. ರಾತೋರಾತ್ರಿ ಕಿಡಿಗೇಡಿಗಳು ಕಸವನ್ನೆಲ್ಲ ತಂದು ಅಂಗಡಿ ಮುಂದೆ ಕಸ ವಿಲೇವಾರಿ ಮಾಡಿ ಪರಾರಿಯಾಗಿದ್ದಾರೆ.
ಇನ್ನು, ಈ ಬಗ್ಗೆ ಅಂಗಡಿ ಮಾಲೀಕ ರಾಜಪ್ಪ ಹೇಳುವ ಪ್ರಕಾರ ನಗರಸಭೆಯಲ್ಲಿ ಕೆಲಸ ಮಾಡುವ ಪೌರಕಾರ್ಮಿಕನೊಬ್ಬ ಟ್ರ್ಯಾಕ್ಟರ್ ಮೂಲಕ ಕಸವನ್ನು ತಂದು ಸುರಿದು ಹೋಗಿರುವುದಾಗಿ ಸಿಸಿ ಟಿವಿಯಲ್ಲಿ ಸೆರೆಯಾಗಿದೆ. ಅಲ್ಲದೆ, ಪೌರಕಾರ್ಮಿಕರ ಚಾಲಕನನ್ನು ವಿಚಾರಿಸಿದಾಗ ಸುಧಾ ಪ್ರಭಾಕರ್ ರೆಡ್ಡಿ ಹೇಳಿದ್ದು ಅಂತ ಹೇಳಿದ್ರಂತೆ.
ಹೀಗಾಗಿ ಹಣ್ಣು ಮತ್ತು ತರಕಾರಿ ಮಾಲೀಕ ರಾಜಪ್ಪ
ಮಾಜಿ ತಾಲೂಕು ಪಂಚಾಯಿತಿ ಅಧ್ಯಕ್ಷ ಪ್ರಭಾಕರ್ ರೆಡ್ಡಿ ಮೇಲೆ ಗಂಭೀರ ಅರೋಪ ಮಾಡುತ್ತಿದ್ದಾರೆ. ಅಲ್ಲದೆ, ಈ ಭಾಗದಲ್ಲಿ ಪ್ರಭಾವಿ ನಾಯಕ ಸಹ. ಈ ಹಿಂದೆ ಸ್ನೇಹಿತರ ನಡುವೆ ಗಲಾಟೆಯಾದಾಗ ಪ್ರಭಾಕರ್ ರೆಡ್ಡಿ ಗಾಳಿಯಲ್ಲಿ ಗುಂಡು ಸಹ ಹಾರಿಸಿದ್ದಾನಂತೆ! ಈ ಬಗ್ಗೆ ಹೆಬ್ಬಗೋಡಿ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆಯಂತೆ.
ಹೀಗಾಗಿ ಈ ಜಾಗವನ್ನು ಯಾವುದೇ ಕಾರಣಕ್ಕೂ ರಸ್ತೆ ಬದಿಯಲ್ಲಿ ದಲಿತರಿಗೆ ಅಂಗಡಿ ಕೊಡಬಾರದು ಎಂಬ ಕಾರಣಕ್ಕೆ ಸವರ್ಣೀಯರು ಈ ರೀತಿ ಮಾಡಿರುವುದಾಗಿ ಮಾಲೀಕ ರಾಜಪ್ಪ ಆರೋಪ ಮಾಡಿದ್ರು.
ಇನ್ನು, ಈ ಬಗ್ಗೆ ಪಬ್ಲಿಕ್ ನೆಕ್ಸ್ಟ್ ವರದಿಗಾರ, ಮಾಜಿ ತಾಲೂಕು ಪಂಚಾಯಿತಿ ಅಧ್ಯಕ್ಷ ಪ್ರಭಾಕರ್ ರೆಡ್ಡಿಗೆ ಕರೆ ಮಾಡಿ ಪ್ರಶ್ನೆ ಮಾಡಿದಾಗ, ನನಗೂ ಅದಕ್ಕೂ ಸಂಬಂಧ ಇಲ್ಲ. ಅದು ತಕರಾರು ಜಮೀನು ಆಗಿದ್ದು ಎಂದು ಕರೆಯನ್ನು ಕಟ್ ಮಾಡಿದರು.
ಇನ್ನು, ಈ ಬಗ್ಗೆ ಹೆಬ್ಬಗೋಡಿ ನಗರಸಭೆ ಆಯುಕ್ತೆ ಶ್ವೇತಾ ಮಾತನಾಡಿ, ನನ್ನ ಗಮನಕ್ಕೆ ಬಂದಿಲ್ಲ. ಮಾಹಿತಿ ಕಲೆಹಾಕಿ ಅಧಿಕಾರಿಗಳಿಗೆ ಸೂಚನೆ ನೀಡಿದ್ದೇನೆ. ತಪ್ಪಿತಸ್ಥರ ವಿರುದ್ಧ ಕಾನೂನು ಕ್ರಮ ಕೈಗೊಳ್ತೀನಿ ಅಂತ ಭರವಸೆ ನೀಡಿದ್ರು.
-ಹರೀಶ್ ಗೌತಮನಂದ, ಪಬ್ಲಿಕ್ ನೆಕ್ಸ್ಟ್ ಆನೇಕಲ್
PublicNext
02/10/2022 04:52 pm