ಬೆಂಗಳೂರು: ಇಡೀ ದೇಶದಲ್ಲಿ ಕಾಂಗ್ರೆಸ್ ನಡೆಸಲು ಯಾವುದೇ ಹಣಕಾಸು ಇಲ್ಲ. ಅದಕ್ಕಾಗಿ, ಕರ್ನಾಟಕ ಎಟಿಎಂ ಮಾಡಲು ಕಾಂಗ್ರೆಸ್ ಕರ್ನಾಟಕಕ್ಕೆ ಬಂದಿದ್ದಾರೆ ಎಂದು ಕಂದಾಯ ಸಚಿವ ಆರ್.ಅಶೋಕ್ ತಿಳಿಸಿದರು.
ವಸಂತ ನಗರದಲ್ಲಿ ಸುದ್ದಿಗಾರರೊಂದಿಗೆ ಮಾತನಾಡಿದ ಅವರು, ರಾಹುಲ್ ಗಾಂಧಿ ಅವರು ಕರ್ನಾಟಕಕ್ಕೆ ಪಾದಾರ್ಪಣೆ ಮಾಡಿರೊಂದು ಎಟಿಎಂ ಮಾಡಿಕೊಳ್ಳಲು. ಹೀಗಾಗಿ, ಜನರು ಬಹಳ ಎಚ್ಚರಿಕೆಯಿಂದ ಇರಬೇಕು ಎಂದರು.
ಕಾಂಗ್ರೆಸ್ ರಕ್ತದಲ್ಲೇ ಭಾರತವನ್ನು ಚೂರು ಚೂರು ಮಾಡುವ ಪ್ರವೃತ್ತಿಯಿದೆ ಕಾಂಗ್ರೆಸ್ ಭಾರತ್ ಜೋಡೋ ಅಲ್ಲ, ತೋಡೋ ಇದು. ಮುಸ್ಲಿಂ ಲೀಗ್ ಇತ್ತು ಅದರ ಬಿ ಟೀಮ್ ಇದು. ಪಿಎಫ್ಐ ಬ್ಯಾನ್ ಆಗಿದೆ. ಅದನ್ನು ಸಿದ್ದರಾಮಯ್ಯ ಸಮರ್ಥ ಮಾಡಿಕೊಳ್ತಿಲ್ಲ, ಸಮರ್ಥ ಮಾಡುವ ಬದಲು ಆರ್‌ಎಸ್‌ಎಸ್ ಬಗ್ಗೆ ಮಾತನಾಡುತ್ತಾರೆ. ಮುಸ್ಲಿಂನ ಬಿ ಟೀಮ್ ಆಗಿ ಕೆಲಸ ಮಾಡುವ ಕೆಲಸ ಕಾಂಗ್ರೆಸ್ ಮಾಡುತ್ತಿದ್ದಾರೆ. ಕಾಂಗ್ರೆಸ್ ಮೂಲೆ ಗುಂಪಾಗಿರುವುದಕ್ಕೆ ಪಾದಯಾತ್ರೆ ಮಾಡುತ್ತಿದ್ದಾರೆ ಎಂದರು.
PublicNext
02/10/2022 11:59 am