ಬೆಂಗಳೂರು: ವಿ.ಸೋಮಣ್ಣ ಯುವಕರನ್ನು ನಾಚಿಸುವಂತೆ ಕೆಲಸ ಮಾಡ್ತಾರೆ ಅಂತ ಮುಖ್ಯಮಂತ್ರಿ ಬಸವರಾಜ ಬೊಮ್ಮಾಯಿ ಅವರ ಕಾರ್ಯವೈಖರಿಯ ಬಗ್ಗೆ ಮೆಚ್ಚುಗೆ ವ್ಯಕ್ತಪಡಿಸಿದ್ದಾರೆ.
ಬೆಂಗಳೂರಿನ ರವೀಂದ್ರ ಕಲಾಕ್ಷೇತ್ರದಲ್ಲಿ ಆಯೋಜಿಸಲಾಗಿದ್ದ ವಿಶ್ವ ಹಿರಿಯ ನಾಗರೀಕರ ದಿನಾಚರಣೆ ಕಾರ್ಯಕ್ರಮವನ್ನು ಉದ್ಘಾಟಿಸಿ ವೇದಿಕೆ ಮೇಲೆ ಮಾತನಾಡಿದ ಅವರು, ವಿ.ಸೋಮಣ್ಣ ಅವರು ಯುವಕರನ್ನ ನಾಚಿಸುವಂತೆ ಕೆಲಸ ಮಾಡುತ್ತಿದ್ದಾರೆ ಎಂದರು.
ಇವತ್ತಿನವರೆಗೂ ಅವರ ವಯಸ್ಸು ಎಷ್ಟು ಅಂತಾ ಕಂಡುಹಿಡಿಯೋಕೆ ಆಗ್ತಿಲ್ಲ. ಕ್ರಿಯಾಶೀಲರಾಗಿ ಪಾದರಸದಂತೆ ಓಡಾಡ್ತಾರೆ. ಒಂದು ದಿನವೂ ವಿಶ್ರಾಂತಿಯನ್ನು ಪಡೆಯದೇ ಸದಾ ಕಾರ್ಯಪ್ರವೃತ್ತರಾಗಿರುತ್ತಾರೆ ಎಂದು ಮೆಚ್ಚುಗೆ ವ್ಯಕ್ತಪಡಿಸಿದ್ದಾರೆ.
Kshetra Samachara
01/10/2022 05:46 pm