ಬೆಂಗಳೂರು : ಪಿಎಫ್ ಐ ಬ್ಯಾನ್ ನಿರೀಕ್ಷಿತವಾದದ್ದು ಎಂದು ಸಿಎಂ ಬಸವರಾಜ್ ಬೊಮ್ಮಾಯಿ ಹೇಳಿದ್ದಾರೆ. ಪಿಎಫ್ ಐ ತನ್ನ ಚಟುವಟೆಕೆಯನ್ನ ಮೇಲಿಂದ ಮೇಲೆ ವಿದ್ವಂಸಕ ಕೃತ್ಯಗಳನ್ನ ದೇಶಾದ್ಯಂತ ಮಾಡಿದೆ.kfd ,ಸಿಮಿ ಎಲ್ಲಾ ರೂಪಾಂತರದ ಫಲಶೃತಿ ಪಿಎಫ್ ಐ.ಅವರಿಗೆ ಈ ದೇಶದ ಕಾನೂನಿನ ಮೇಲೆ ಗೌರವವಿಲ್ಲ.ಹಲವಾರು ಕೇಸ್ ಗಳಲ್ಲಿ ಅವರು ಭಾಗಿಯಾಗಿದ್ದಾರೆ.
ಈ ಸಂಘಟನೆ ಬ್ಯಾನ್ ಆಗಬೇಕು ಎಂದು ಎಲ್ಲರೂ ಆಗ್ರಹ ಮಾಡುತ್ತಿದ್ದೇವು ಅದಕ್ಕೆ ಉತ್ತರ ಸಿಕ್ಕಿದೆ.ವಿಪಕ್ಷಗಳು ಸಹ ಯಾವಾಗ ಬ್ಯಾನ್ ಮಾಡ್ತೀರಾ ಅಂತ ಕೇಳುತ್ತಿದ್ದರು ಮೋದಿ ,ಅಮಿತ್ ಶಾ ನೇತೃತ್ವದಲ್ಲಿ ಇದಕ್ಕೆ ಉತ್ತರ ಸಿಕ್ಕಿದೆ ಎಂದು ಸಿಎಂ ಬಸವರಾಜ್ ಬೊಮ್ಮಾಯಿ ಪ್ರತಿಕ್ರಿಯಿಸಿದ್ದಾರೆ.
PublicNext
28/09/2022 11:53 am