ಅಪ್ಲಿಕೇಶನ್‌ನಲ್ಲಿ ಉಚಿತವಾಗಿ ಪೂರ್ಣ ವೀಡಿಯೊವನ್ನು ವೀಕ್ಷಿಸಿ

ಕಾಂಗ್ರೆಸ್ ಬಿಜೆಪಿ ಪಾಳಯದಲ್ಲಿ ಹೆಚ್ಚಾಯ್ತು ಸೋಷಿಯಲ್ ಮೀಡಿಯಾ ವಾರ್!

ಬೆಂಗಳೂರು- ರಾಜ್ಯ ರಾಜಕೀಯದಲ್ಲಿ‌ ಸದ್ಯ ಸೋಷಿಯಲ್ ಮೀಡಿಯಾ ವಾರ್ ಹೆಚ್ಚಾಗಿದೆ. ರಾಜ್ಯ ಸರ್ಕಾರದ ವಿರುದ್ದ ಕಾಂಗ್ರೆಸ್ ನಾಯಕರು ಪೋಸ್ಟರ್ ವಾರ್ ಅಭಿಯಾನ ಶುರುವಾಗಿದೆ. ಇದಕ್ಕೆ ಕೌಂಟರ್ ಕೊಡಲು ಬಿಜೆಪಿ ನಾಯಕರು ಸೋಷಿಯಲ್ ಮೀಡಿಯಾ ವಾರ್ ಶುರುಮಾಡಿದ್ದಾರೆ. ಆದ್ರೆ ಜನಕ್ಕೆ ತಲುಪಲು ಯಶಸ್ವಿಯಾಗಿದ್ದಾರಾ ಅನ್ನೋದೆ ಚರ್ಚೆ ಶುರುವಾಗಿದೆ.‌

ಕಾಂಗ್ರೆಸ್ ಹಾಗೂ ಬಿಜೆಪಿ ನಡುವೆ ಪೇ ಸಿಎಂ ಪೋಸ್ಟರ್‌ ಅಭಿಯಾನಕ್ಕೆ ದಿನಕೊಂದು ಟ್ವೀಟ್ಸ್‌ ಸಿಗುತಿದೆ.ಏಟಿಗೆ ಎದುರೇಟು ಕೋಡುವ ಈ ವಾರ್‌ ನಲ್ಲಿ ಯಾರು ಗೆಲ್ತಾರೆ ಯಾರು ಸೋಲ್ತಾರೆ ಅನ್ನೋದು ಇನ್ನು ಫೈನಲ್‌ ಆಗಿಲ್ಲ.ಕಾಂಗ್ರೆಸ್‌ ಪಡೆ ಆರಂಭಿಸಿರುವ ಈ ಪೇ ಸಿಎಂ ಯುದ್ಧಕ್ಕೆ ಬಿಜೆಪಿ ಕೂಡ ಸರಿಸುಮಾರಾಗಿ ಟಕ್ಕರ ಕೊಡ್ತಿದೆ.

ಆದ್ರೆ ಕೈ ಪಡೆಯ ಸೋಷಿಯಲ್‌ ಮೀಡಿಯಾ ಟೀಂ ಮುಂದೆ ಕಮಲ ಕಲಿಗಳ ಹವಾ ಕಮ್ಮಿ ಆಗಿರುವ ಹಾಗೆ ಕಾಣ್ತಿದೆ.ಕಾಂಗ್ರೆಸ್‌ ಕೌಂಟರ್‌ ಗೆ ಎದುರೇಟು ಕೊಡಲು ಬಿಜೆಪಿ ಸೋಷಿಯಲ್‌ ಮೀಡಿಯಾ ಟೀಮ್‌ ಆಗುತ್ತಿಲ್ಲ. ವಿಪಕ್ಷ ಆರಂಭಿಸಿದ ಕ್ಯೂಆರ್‌ ಕೋಡ್‌ ರಹೀತ ಪೇಸಿಎಂ ಪೋಸ್ಟರ್‌ ಮುಂದೆ ಆಡಳಿತ ಪಕ್ಷದ ಸೋಷಿಯಲ್‌ ಮೀಡಿಯಾ ಟೀಮ್‌ ವೀಕ್‌ ಆಗುರುವುದಂತ್ತು ನಿಜ ಅನ್ನೋದು ಮೇಲ್ನೋಟಕ್ಕೆ ಸಾಬೀತಾಗ್ತಿದೆ.

ಸದ್ಯ ಪೇ ಸಿಎಮ್ ಪೋಸ್ಟರ್ ಅಸ್ತ್ರವನ್ನಾಗಿ ಮಾಡಿಕೊಂಡಿದೆ ಕಾಂಗ್ರೆಸ್ ಸೋಶಿಯಲ್ ಮೀಡಿಯಾ ಟೀಮ್.ಕಾಂಗ್ರೆಸ್ ಕೊಟ್ಟ ಕೌಂಟರ್ ನಿಂದ ಬಿಜೆಪಿಗೆ ಬಿಗ್ ಶಾಕ್ ಉಂಟಾಗಿರುವುದಂತ್ತು ನಿಜ.ರಾಜ್ಯ ಬಿಜೆಪಿ ಇಂದ ಬಿಜೆಪಿ ಹೈಕಮಾಂಡ್‌ ವರೆಗೂ ಈ ಪೇಸಿಎಂ ಮ್ಯಾಟರ್‌ ಹೋಗಿದೆ ಅಂತೆ.ಇನ್ನು ಪೇ ಸಿಎಂ ಪೋಸ್ಟರ್ ಗೆಕೌಂಟರ್ ಕೊಡಲು ಬಿಜೆಪಿ ಸೋಷಿಯಲ್‌ ಮೀಡಿಯಾ ಟೀಮ್ ಸರ್ಕಸ್ ನಡೆಸ್ತಿದೆ.ಇದ್ದರಿಂದ ಕಾಂಗ್ರೆಸ್ ಹಾಗೂ ಬಿಜೆಪಿ ಪೋಸ್ಟರ್ ಜಟಾಪಟಿ ಮುಂದುವರೆದಿದೆ.

ಇಷ್ಟು ದಿನ ಬಿಜೆಪಿಯ ಸೋಷಿಯಲ್ ಮೀಡಿಯಾ ಟೀಮ್ ಯಶಸ್ವಿಯಾಗಿ ಕೆಲಸ ಮಾಡುತ್ತಿತ್ತು.ಆದ್ರೆ ಯಾವಾಗ ಕಾಂಗ್ರೆಸ್‌ ರಾತ್ರೋ ರಾತ್ರಿ 40% ಕಮಿಷನ್‌ ವಿಚಾರವಾಗಿ ಪೇ ಸಿಎಂ ಪೋಸ್ಟರ್‌ ಬೀಡುಗಡೆ ಮಾಡಿತ್ತೋ ಆವಾಗ್ಲೆ ಬಿಜೆಪಿ ಸೋಷಿಲ್‌ ಮೀಡಿಯಾ ಟೀಂ ಗೆ ಬಿಗ್‌ ಶಾಕ್‌ ಉಂಟಾಗಿದೆ. ಇಷ್ಟು ದಿನ ಬರೀ ಸರ್ಕಾರದ ಸಾಧನೆ ಹಾಗೂ ಯೋಜನೆಗಳನ್ನು ಹೊಗಳಿಕೆಗಷ್ಟೇ ಸೀಮಿತವಾಗಿತ್ತು ಕಮಲ ಕಲಿಗಳ ಸೋಷಿಯಲ್‌ ಮೀಡಿಯಾ ತಂಡ ಪೇ ಸಿಎಂ ಪೋಸ್ಟರ್‌ ಗೆ ಕೌಂಟರ್‌ ಕೊಡಲು ಪರದಾಡುತ್ತಿದ್ದಾರೆ.

Edited By : PublicNext Desk
Kshetra Samachara

Kshetra Samachara

27/09/2022 08:59 pm

Cinque Terre

2.7 K

Cinque Terre

0

ಸಂಬಂಧಿತ ಸುದ್ದಿ