ಬೆಂಗಳೂರು: ರಾಜ್ಯ ರಾಜಧಾನಿಯ ಜನರ ಸಂಚಾರವನ್ನು ಮತ್ತಷ್ಟು ಸುಗಮ ಮಾಡಲು ಮತ್ತು ಟ್ರಾಫಿಕ್ ಸಂಕಟದಿಂದ ಪಾರು ಮಾಡಲು ಬೆಂಗಳೂರು ಮೆಟ್ರೋ ಮೂರನೇ ಹಂತದ ಡಿಪಿಆರ್ ಸಜ್ಜಾಗಿದೆ. ಈಗಾಗಲೇ ಇದು ಸರಕಾರಕ್ಕೆ ಸಲ್ಲಿಕೆಯಾಗಿದೆ.
ಮೆಟ್ರೋ ನಿಗಮ ಎರಡನೇ ಹಂತದ ಸುರಂಗ ಮಾರ್ಗ ಹಾಗೂ ಎಲಿವೆಟೆಡ್ ಕಾಮಗಾರಿ ಜೊತೆ ಜೊತೆಗೆ ಮೂರನೇ ಹಂತದ ಮೆಟ್ರೋ ಡೀಟೆಲ್ ಪ್ರಾಜೆಕ್ಟ್ ರಿಪೋರ್ಟ್ನ್ನು ಸಿದ್ದಪಡಿಸಿ ಅನುಮೋದನೆಗಾಗಿ ರಾಜ್ಯ ಸರ್ಕಾರಕ್ಕೆ ಸಲ್ಲಿಕೆ ಮಾಡಿದೆ. ಮೆಟ್ರೋ ನಿಗಮ ನೀಡಿರುವ ಡಿಪಿಆರ್‌ಗೆ ರಾಜ್ಯ ಸರ್ಕಾರದಿಂದ ಅನುಮತಿ ಸಿಕ್ಕಿದ ನಂತರ ಕೇಂದ್ರದ ಮಿನಿಸ್ಟ್ರಿ ಆಫ್ ಹೌಸಿಂಗ್ ಅಫೇರ್ಸ್‌ಗೆ ಕಳುಹಿಸಲಾಗುತ್ತದೆ. ಈ ಪ್ರಸ್ತಾವನೆಗೆ ಕೇಂದ್ರ ಸರ್ಕಾರವೂ ಗ್ರೀನ್ ಸಿಗ್ನಲ್ ಕೊಟ್ರೆ ಮೆಟ್ರೋ ನಿಗಮ ಮೂರನೇ ಹಂತದ ಮೆಟ್ರೋ ಕಾಮಗಾರಿಯನ್ನ ಕೈಗೆತ್ತಿಗೊಳ್ಳಲಿದೆ.
ಮೆಟ್ರೊ ಮೂರನೇ ಹಂತದಲ್ಲಿವೆ 2 ಕಾರಿಡಾರ್ಗಳು 1. ಮೊದಲನೇ ಕಾರಿಡಾರ್ ಜೆಪಿ ನಗರ 4th ಫೇಸ್ ನಿಂದ – ಹೆಬ್ಬಾಳದವರೆಗೆ ಒಟ್ಟು 32 ಕಿಲೊಮೀಟರ್ ಉದ್ದವಿದ್ದು, ರಾಜಕುಮಾರ್ ಸಮಾಧಿ, ಯಶವಂತಪುರ , ನ್ಯೂ ಬಿಇಎಲ್ ಸರ್ಕಲ್ ಮಾರ್ಗವಾಗಿ ಹೆಬ್ಬಾಳ ಸೇರಲಿದ್ದು ಒಟ್ಟು 22 ನಿಲ್ದಾಣಗಳನ್ನ ಹೊಂದಿದೆ. ಇನ್ನು ಮೊದಲನೇ ಕಾರಿಡಾರ್ ನಲ್ಲಿ ಮೈಸೂರು ರಸ್ತೆಯಲ್ಲಿ ಇಂಟರ್ಚೇಂಜ್ ನಿಲ್ದಾಣ ಬರಲಿದೆ.
PublicNext
25/09/2022 11:30 am