ಬೆಂಗಳೂರು: ಬೊಮ್ಮಾಯಿ ಸರ್ಕಾರ ಅಡಿಯಿಂದ ಮುಡಿಯವರೆಗೆ ಭ್ರಷ್ಟಾಚಾರ ತುಂಬಿದೆ ಎಂದು ಕಾಂಗ್ರೆಸ್ ರಾಜ್ಯ ಉಸ್ತುವಾರಿ ರಣದೀಪ್ ಸುರ್ಜೆವಾಲ ಕಿಡಿಕಾರಿದ್ದಾರೆ. ಹತಾಶ ಸಿಎಂ, ಹತಾಶ ಸರ್ಕಾರ. ಜನರೇ ಈ ಸರ್ಕಾರದ ವಿರುದ್ದ ವೋಟ್ ಮಾಡಿ ಸರ್ಕಾರ ಕಿತ್ತೊಗೆಯುತ್ತಾರೆ. ಸಾಮಾನ್ಯ ಕಾಂಗ್ರೆಸ್ ಕಾರ್ಯಕರ್ತರನ್ನು ಅರೆಸ್ಟ್ ಮಾಡಲು ಹೋಗಿದ್ದಾರೆ. ಪೊಲೀಸರನ್ನು ಪೋಸ್ಟರ್ ತೆಗೆಯೋದಕ್ಕೆ ಬಳಸಿಕೊಳ್ತಿದ್ದಾರೆ. ಯಾಕೆ ಅದೇ ಪೊಲೀಸರನ್ನು ಭ್ರಷ್ಟರನ್ನು ಬಂಧಿಸಲು ಬಳಸುತ್ತಿಲ್ಲ? ಎಂದು ಕಿಡಿಕಾರಿದ್ದಾರೆ.
PublicNext
23/09/2022 11:37 am