ಬೆಂಗಳೂರು: ಪೇ ಸಿಎಂ ಕ್ಯೂಆರ್ ಕೋಡ್ ಪೋಸ್ಟರ್ ಸದನದಲ್ಲಿ ಚರ್ಚೆಯಾಗ್ತಿರೋ ಬೆನ್ನಲ್ಲೇ ಎಎಪಿ ಕೂಡ ಒಂದು ಕ್ಯೂ ಆರ್ ಕೋಡ್ ಮಾದರಿ ಪೋಸ್ಟರ್ ರಿಲೀಸ್ ಮಾಡಿದೆ. ಬಿಜೆಪಿ, ಕಾಂಗ್ರೆಸ್, ಜೆಡಿಎಸ್ ಪಕ್ಷಗಳಿಗೆ ಟಕ್ಕರ್ ಕೊಡುವ ರೀತಿ ಪೋಸ್ಟರ್ ಬಿಡುಗಡೆ ಮಾಡಿದೆ.
ಸಿಎಂ ಬಸವರಾಜ ಬೊಮ್ಮಾಯಿ ಪೇಸಿಎಂ ಕ್ಯೂಆರ್ ಹಾಗೂ ಪೇ ಎಕ್ಸ್ ಸಿಎಂ ಕ್ಯೂಆರ್ ಕೋಡ್ ಜೊತೆಗೆ ಜೆಡಿಎಸ್ ಚಿಹ್ನೆ ನೂ ಕ್ಯೂಆರ್ ಕೋಡ್ ಅನ್ನು ಸೇರಿಸಿ ಪೇ ಸಿಎಂ, ಪೇ ಎಕ್ಸ್ ಸಿಎಂ ಅಲ್ಲ ಇದು ಪೇ ಟೀಂ ಅಂತ ಸಾಮಾಜಿಕ ಜಾಲತಾಣದಲ್ಲಿ ಪೋಸ್ಟರ್ ಬಿಟ್ಟಿದ್ದು, ಜೆಡಿಎಸ್ 10%, ಕಾಂಗ್ರೆಸ್ 20% ಹಾಗೂ ಬಿಜೆಪಿ 40% ಲೂಟಿ ಮಾಡಿದೆ. ಮೂರೂ ಪಕ್ಷಗಳ ಟೀಂ ರಾಜ್ಯವನ್ನು ಲೂಟಿ ಮಾಡಿದೆ. ಇದರಿಂದ ಜನಸಾಮಾನ್ಯರಿಗೆ ಉಳಿದಿದ್ದು ಮೂರು ನಾಮ ಎಂದು ಆಮ್ ಆದ್ಮಿ ಪಾರ್ಟಿಯು ವ್ಯಂಗ್ಯವಾಡಿದೆ.
PublicNext
22/09/2022 07:04 pm