ಅಪ್ಲಿಕೇಶನ್‌ನಲ್ಲಿ ಉಚಿತವಾಗಿ ಪೂರ್ಣ ವೀಡಿಯೊವನ್ನು ವೀಕ್ಷಿಸಿ

ಬೆಂಗಳೂರು: ಪ್ರಿಯಾಂಕ ಖರ್ಗೆಗೆ ಸಿಟಿ ರವಿ ಟಾಂಗ್

ಬೆಂಗಳೂರು: ಕಲ್ಯಾಣ ಕರ್ನಾಟಕ ಅಭಿವೃದ್ಧಿಗೆ ಹಣಕಾಸಿನಲ್ಲಿ 40% ಕಮಿಷನ್ ಜೊಲ್ಲು ಸುರಿಸುತ್ತಿದ್ದಾರೆ ಎನ್ನುವ ಪ್ರಿಯಾಂಕ ಖರ್ಗೆ ಹೇಳಿಕೆಗೆ ಬಿಜೆಪಿ ರಾಷ್ಟ್ರೀಯ ಪ್ರಧಾನ ಕಾರ್ಯದರ್ಶಿ ಶಾಸಕ ಸಿಟಿ ರವಿ ಟಾಂಗ್ ಕೊಟ್ಟಿದ್ದಾರೆ.

ಪ್ರಿಯಾಂಕ ಖರ್ಗೆಯವರಿಗೆ ತನ್ನ ಕಾಲದಲ್ಲಿ ಆಗಿದ್ರೆ ಇನ್ನೂ ಜಾಸ್ತಿ ಕಮಿಷನ್ ಸಿಗಬಹುದಿತ್ತೇನೋ ಅಂತ ಜೊಲ್ಲು ಸುರಿಸಿದ್ರು ಅನಿಸುತ್ತೆ. 40 -50 ವರ್ಷದಿಂದ ಯಾವ ಪ್ರಮಾಣದಲ್ಲಿ ಜೊಲ್ಲು ಸುರಿಸಿರಬಹುದು ಎಂಬುದು ಎಲ್ಲರಿಗೂ ಗೊತ್ತಾಗುತ್ತಿದೆ ಎಂದರು.

ಕಾಂಗ್ರೆಸ್‌ನ ಭಾರತ್ ಜೋಡೋ ಯಾತ್ರೆ ವಿಚಾರವಾಗಿ ಮಾತನಾಡಿದ ಅವರು, ಇದು ಭಾರತೀಯತೆಯನ್ನ ಜೋಡಿಸೋ ಉದ್ದೇಶ ಅಲ್ಲ. ಹಿಂದೂ ಮತ್ತು ಹಿಂದುತ್ವದ ಬಗ್ಗೆ ದ್ವೇಷದ ಭಾಷಣ ಮಾಡೋದು. ಚುನಾವಣಾ ಸಮಯದಲ್ಲಿ ನಾನು ಹಿಂದೂ ಎಂದು ಹೇಳುವುದು ಎಂದು ಕಿಚಾಯಿಸಿದರು.

ಸಚಿವ ಎಸ್‌ಟಿ ಸೋಮಶೇಖರ್ ವಿರುದ್ಧ ತನಿಖೆಗೆ ಲೋಕಾಯುಕ್ತವು ಸಿಎಂ ಬೊಮ್ಮಾಯಿ ಅನುಮತಿ ಕೇಳಿರೋ ವಿಚಾರವಾಗಿ ಕೇಳಿದ್ದಕ್ಕೆ ಅದಕ್ಕೆ ಸಂಬಂಧಪಟ್ಟಂತೆ ಸರಿಯಾದ ಮಾಹಿತಿ ಇಲ್ಲ. ಮಾಹಿತಿ ಸಿಕ್ಕ ನಂತರ ಮಾತನಾಡುತ್ತೇನೆ ಎಂದು ನುಣಿಚಿಕೊಂಡ್ರು.

Edited By : Vijay Kumar
Kshetra Samachara

Kshetra Samachara

19/09/2022 09:29 pm

Cinque Terre

1.06 K

Cinque Terre

0

ಸಂಬಂಧಿತ ಸುದ್ದಿ