ಆನೇಕಲ್: ಗುತ್ತಿಗೆ ಆಧಾರದ ಮೇಲೆ ಕೆಲಸ ನಿರ್ವಹಿಸುತ್ತಿದ್ದ ನೌಕರರನ್ನು ಏಕಾಏಕಿ ಕಂಪನಿಯಿಂದ ವಜಾ ಮಾಡಿದ ಹಿನ್ನೆಲೆ ಇಂದು ಕಂಪನಿಯ ಮುಂದೆ ಗುತ್ತಿಗೆ ಆಧಾರದ ನೌಕರರು ಪ್ರತಿಭಟನೆ ನಡೆಸಿದರು.
ಆನೇಕಲ್ ತಾಲೂಕಿನ ಇಂಡ್ಲವಾಡಿ ಕ್ರಾಸ್ ಬಳಿ ಇರುವ ಸ್ಟ್ರೈಡ್ಸ್ ಫಾರ್ಮ್ ಕಂಪನಿಯಲ್ಲಿ ನಡೆಯುತ್ತಿರುವ ಮಹಿಳೆಯರ ಮೇಲೆ ದೌರ್ಜನ್ಯ ಮತ್ತು ಕಿರುಕುಳವನ್ನು ಕಡಿವಾಣ ಹಾಕುವ ನಿಟ್ಟಿನಲ್ಲಿ ಸಂಘಟನೆಯನ್ನು ಹುಟ್ಟು ಹಾಕಿತ್ತು. ಈ ಹಿನ್ನೆಲೆಯಲ್ಲಿ ಹೊಸದಾಗಿ ಬಂದಿರುವ ಸುಗ್ಮಾ ಎಂಟರ್ಪ್ರೈಸಸ್ ಕಾಂಟ್ರಾಕ್ಟ್ ಆಡಳಿತ ಮಂಡಳಿ ಗುತ್ತಿಗೆ ಆಧಾರದ ಮೇಲೆ ಕೆಲಸ ಮಾಡುತ್ತಿದ್ದ ನೂರಾರು ನೌಕರರನ್ನು ಕೆಲಸದಿಂದ ವಜಾ ಮಾಡಿದ್ದಾರೆ.
ಇನ್ನು ಈ ಕಂಪನಿಯಲ್ಲಿ ಬರುವ ಕೆಲಸಗಾರರಿಗೆ ಹಾಗೂ ಹೆಣ್ಣು ಮಕ್ಕಳಿಗೆ ಯಾವುದೇ ರಕ್ಷಣೆ ಇಲ್ಲ ಪಿಎಫ್ ಪಡೆಯಲು ಸಹ ಐದಾರು ಸಾವಿರ ಹಣವನ್ನು ಲಂಚ ಕೇಳಿದ್ದ ಆರೋಪ ಸಹ ಕೇಳಿ ಬಂದಿದೆ.
ಇನ್ನೂ ಈ ಹಿಂದೆ ಮಹಿಳೆಯೊಬ್ಬರು ಅನುಮಾನಸ್ಪದ ರೀತಿ ಸಾವನಪ್ಪಿದ್ಲು ಈ ಕೇಸ್‌ನ್ನ ಮುಚ್ಚಿ ಹಾಕಿರೋದು ಸಹ ಬೆಳಕಿಗೆ ಬಂದಿದೆ. ಈ ಬಗ್ಗೆ ಕೂಲಂಕುಶವಾಗಿ ತನಿಖೆ ನಡೆಸಿದರೆ ಸತ್ಯ ಗೊತ್ತಾಗುತ್ತೆಂದು ಮಾಧ್ಯಮಗಳಿಗೆ ಪ್ರತಿಭಟನಾಕಾರರು ತಿಳಿಸಿದರು.
Kshetra Samachara
12/09/2022 08:53 pm