ಅಪ್ಲಿಕೇಶನ್‌ನಲ್ಲಿ ಉಚಿತವಾಗಿ ಪೂರ್ಣ ವೀಡಿಯೊವನ್ನು ವೀಕ್ಷಿಸಿ

ಬೆಂಗಳೂರು: ಕಸ ವಿಲೇವಾರಿಗೆ ಜಾಗ ಮಂಜೂರುಗಾಗಿ ಪ್ರತಿಭಟನೆ

ಆನೇಕಲ್ : ಕಸ ವಿಲೇವಾರಿ ಮಾಡಲು ಜಾಗ ಮಂಜೂರು ಮಾಡಿಕೊಡುವಂತೆ ಆಗ್ರಹಿಸಿ ಇಂದು ಆನೇಕಲ್ ತಾಲೂಕು ಕಚೇರಿ ಮುಂಭಾಗ ಅತ್ತಿಬೆಲೆ ಪುರಸಭಾ ಸದಸ್ಯರು ಬೃಹತ್ ಪ್ರತಿಭಟನೆಯನ್ನು ನಡೆಸಿದರು.

ಕಳೆದ 5 ವರ್ಷಗಳಿಂದ ಅತ್ತಿಬೆಲೆ ಪುರಸಭಾ ವ್ಯಾಪ್ತಿಯಲ್ಲಿ ಕಸ ವಿಲೇವಾರಿಗೆ ಜಾಗ ಮಾಡಿಕೊಡುವಂತೆ ಜಿಲ್ಲಾಧಿಕಾರಿಗಳು ಹಾಗೂ ತಾಲೂಕು ದಂಡಾಧಿಕಾರಿಗಳ ಗಮನಕ್ಕೆ ತಂದರೂ ಯಾವುದೇ ಪ್ರಯೋಜನವಾಗಿಲ್ಲ ಎಂದು ಪುರಸಭಾ ಸದಸ್ಯರು ಆಕ್ರೋಶವನ್ನು ಹೊರಹಾಕಿದ್ದಾರೆ. ಸದ್ಯ ಅತ್ತಿಬೆಲೆ ಪುರಸಭಾ ವ್ಯಾಪ್ತಿಯಲ್ಲಿ ಕಳೆದ 10 ದಿನಗಳಿಂದ ಕಸ ವಿಲೇವಾರಿ ಮಾಡಿಲ್ಲ.

ಹೀಗಾಗಿ ಸಾರ್ವಜನಿಕರು ಪುರಸಭೆ ಸದಸ್ಯರು ತರಾಟೆಗೆ ತೆಗೆದುಕೊಳ್ಳುತ್ತಿದ್ದಾರೆ ಎಂದು ಕಿಡಿ ಕಾರಿದರು. ಇನ್ನು ಒಂದು ತಿಂಗಳಲ್ಲಿ ಕಸ ಹಾಕಲು ಜಾಗ ಮಂಜೂರು ಮಾಡದಿದ್ದರೆ ಆನೇಕಲ್ ತಾಲೂಕು ಕಚೇರಿ ಮುಂಭಾಗವೇ ಕಸವನ್ನ ಅತ್ತಿಬೆಲೆಯ ಕಸವನ್ನ ತಂದು ವಿಲೇವಾರಿ ಮಾಡಲಾಗುವುದು ಎಂದು ಅತ್ತಿಬೆಲೆ ಪುರಸಭಾ ಸದಸ್ಯರು ಕಂದಾಯ ಇಲಾಖೆಯ ಅಧಿಕಾರಿಗಳಿಗೆ ಎಚ್ಚರಿಕೆಯನ್ನು ನೀಡಿದ್ದಾರೆ..

Edited By : Shivu K
Kshetra Samachara

Kshetra Samachara

12/09/2022 08:34 pm

Cinque Terre

1.99 K

Cinque Terre

0

ಸಂಬಂಧಿತ ಸುದ್ದಿ