", "articleSection": "Politics,Law and Order", "image": { "@type": "ImageObject", "url": "https://prod.cdn.publicnext.com/s3fs-public/418299-1736611123-hone.jpeg", "height": 710, "width": 1242 }, "datePublished": "2020-09-10T08:59:00+05:30", "dateModified": "2020-09-10T08:59:37+05:30", "author": { "@type": "Person", "name": "SharathRaju" }, "editor": { "@type": "Person", "name": "Ashok.Mullalli" }, "publisher": { "@type": "Organization", "name": "PublicNext", "logo": { "@type": "ImageObject", "url": "//live-publicnext.s3.ap-south-1.amazonaws.com/publicnextsite/assets/img/landing/Logo.png", "width": 97, "height": 45 } }, "description": "ಬೆಂಗಳೂರು: ವಿಧಾನ ಪರಿಷತ್ ಸದಸ್ಯ ಸಿ.ಟಿ. ರವಿಯವರಿಗೆ ಬೆದರಿಕೆ ಪತ್ರ ಬರೆದವರ ಬಂಧನಕ್ಕೆ ವಿಧಾನ ಪರಿಷತ್ ಸದಸ್ಯ ರವಿ ಕುಮಾರ್ ಆಗ್ರಹಿಸಿದ್ದಾರೆ....Read more" } ", "keywords": "Bangalore Crime, Karnataka Serial Killings, Rowdyism, Terrorism, Ravi Kumar MLA, Bengaluru News, Karnataka Politics, Crime in Karnataka, Indian National Congress, Karnataka Election Updates ,Bangalore,Bangalore-Rural,Politics,Law-and-Order", "url": "https://publicnext.com/article/nid/Bangalore/Bangalore-Rural/Politics/Law-and-Order" }
ಬೆಂಗಳೂರು: ವಿಧಾನ ಪರಿಷತ್ ಸದಸ್ಯ ಸಿ.ಟಿ. ರವಿಯವರಿಗೆ ಬೆದರಿಕೆ ಪತ್ರ ಬರೆದವರ ಬಂಧನಕ್ಕೆ ವಿಧಾನ ಪರಿಷತ್ ಸದಸ್ಯ ರವಿ ಕುಮಾರ್ ಆಗ್ರಹಿಸಿದ್ದಾರೆ. ಈ ಕುರಿತಂತೆ ಬೆಂಗಳೂರಿನ ಮಲ್ಲೇಶ್ವರಂ ಕಚೇರಿಯಲ್ಲಿ ಮಾತನಾಡಿದ ಅವರು, ಕರ್ನಾಟಕ ರಾಜ್ಯ ಬೆದರಿಕೆಗೆ ಹೆದರಿಕೆಗೆ, ಸರಣಿ ಸಾವುಗಳಿಗೆ, ಗೂಂಡಾಗಿರಿಗೆ ಹಾಗೂ ಭಯೋತ್ಪಾದನೆಗೆ ಹೆಸರಾಗ್ತಿದೆ.
ಇದಕ್ಕೆ ಉದಾಹರಣೆ ಎಂಬಂತೆ ಸಿ.ಟಿ.ರವಿಯವರಿಗೆ ಒಂದು ಅನಾಮಧೇಯ ಬೆದರಿಕೆ ಪತ್ರ ಬರೆದಿದ್ದಾರೆ. ಬೆಳಗಾವಿಯ ಹಾಲಿ ಸಚಿವೆಯ ಪಾದ ಮುಟ್ಟಿ ಕ್ಷಮೆ ಕೇಳಿ ಎಂದು ಬೆದರಿಕೆ ಪತ್ರ ಕಳುಹಿಸಿದ್ದಾರೆ. ಈಗಾಗಲೇ ಸಿ.ಟಿ. ರವಿ ಮೇಲೆ ಹಲ್ಲೆ ನಡೆಸಲಾಗಿದೆ. ಈಗ ಬೆದರಿಕೆ ಹಾಕಿದ್ದು ಹೊಸದೇನಲ್ಲ.
ಸರ್ಕಾರ ಎಚ್ಚೆತ್ತುಕೊಳ್ಳದಿರುವುದು ದುರದೃಷ್ಟಕರ ಸಂಗತಿ. ಸರ್ಕಾರಕ್ಕೆ ಆಗ್ರಹ ಮಾಡುತ್ತೇನೆ... ಕೂಡಲೇ ಸಿ.ಟಿ. ರವಿಯವರಿಗೆ ಭದ್ರತೆ ಕೊಡಬೇಕು. ಅಕಸ್ಮಾತ್ ಸಿ.ಟಿ. ರವಿಯವರಿಗೆ ಏನೇ ಆದರೂ ಸರ್ಕಾರವೇ ಹೊಣೆ ಆಗಲಿದೆ ಎಂದು ಎಚ್ಚರಿಸಿದ್ರು. ಬೆಳಗಾವಿ ಘಟನೆ ಬಗ್ಗೆ ರಾಜ್ಯ ಸರ್ಕಾರ ಗಂಭೀರವಾಗಿ ತೆಗೆದುಕೊಳ್ಳುತ್ತಿಲ್ಲ. ಈ ಸರ್ಕಾರ ಭಯೋತ್ಪಾದಕರಿಗೆ, ಬೆದರಿಕೆ ಹಾಕುವವರಿಗೆ ಬೆಂಬಲವಾಗಿ ನಿಂತಿದೆ. ನಾವು ನಮ್ಮ ಅಧ್ಯಕ್ಷರು ಹಾಗೂ ವಿಪಕ್ಷ ನಾಯಕರ ಜೊತೆಗೆ ಮುಂದಿನ ಹೋರಾಟದ ಬಗ್ಗೆ ಚರ್ಚೆ ಮಾಡುತ್ತೇವೆ. ಬೆದರಿಕೆ ಪತ್ರ ಬರೆದವರನ್ನ ಕೂಡಲೇ ಬಂಧಿಸಬೇಕು ಎಂದು ಎನ್. ರವಿಕುಮಾರ್ ಒತ್ತಾಯಿಸಿದರು.
PublicNext
11/01/2025 09:29 pm