ಅಪ್ಲಿಕೇಶನ್‌ನಲ್ಲಿ ಉಚಿತವಾಗಿ ಪೂರ್ಣ ವೀಡಿಯೊವನ್ನು ವೀಕ್ಷಿಸಿ

ಬೆಂಗಳೂರು: ಪ್ರಕ್ರಿಯಾ ಆಸ್ಪತ್ರೆಯಲ್ಲಿ ಆತ್ಮನಿರ್ಭರ ಸರ್ಜಿಕಲ್‌ ರೋಬೋಟ್‌ ಮೂಲಕ ಆಧುನಿಕ ಚಿಕಿತ್ಸೆ

ಬೆಂಗಳೂರು: ಭಾರತದ ಮೊದಲ ಸ್ವದೇಶಿ ರೋಬೋಟಿಕ್‌ ಶಸ್ತ್ರಚಿಕಿತ್ಸಾ ವ್ಯವಸ್ಥೆ ‘ಎಸ್‌ಎಸ್‌ಐ ಮಂತ್ರ’ಕ್ಕೆ ಪ್ರಕ್ರಿಯಾ ಆಸ್ಪತ್ರೆಯಲ್ಲಿ ಟಿ.ದಾಸರಹಳ್ಳಿ ಶಾಸಕ ಎಸ್‌. ಮುನಿರಾಜು ಚಾಲನೆ ನೀಡಿದರು. ಚಾಲನೆ ಬಳಿಕ ಸ್ಪರ್ಧಾತ್ಮಕ ಜಗತ್ತಿನಲ್ಲಿ ಆಸ್ಪತ್ರೆಗಳು ಸ್ವದೇಶಿ ತಂತ್ರಜ್ಞಾನಗಳನ್ನು ಬಳಸಿಕೊಳ್ಳಲು ಮುಂದಾಗಿರುವುದು ನಿಜಕ್ಕೂ ಶ್ಲಾಘನೀಯ. ಈ ಅತ್ಯಾಧುನಿಕ ತಂತ್ರಜ್ಞಾನಗಳು ಕಡಿಮೆ ವೆಚ್ಚದಲ್ಲಿ ಎಲ್ಲಾ ವರ್ಗದ ಜನರನ್ನು ತಲುಪಬೇಕು ಎಂದು ಶಾಸಕ ಎಸ್. ಮುನಿರಾಜು

ಇದೇ ವೇಳೆ ಮಾತನಾಡಿದ ಪ್ರಕ್ರಿಯಾ ಹಾಸ್ಪಿಟಲ್ಸ್‌ ಸಿಇಒ ಡಾ.ಶ್ರೀನಿವಾಸ್‌ ಚಿರಕುರಿ, ಎಸ್‌ಎಸ್‌ಐ ಮಂತ್ರ ರೋಬೋಟಿಕ್‌ ವ್ಯವಸ್ಥೆಯು ಶಸ್ತ್ರಚಿಕಿತ್ಸೆಯಲ್ಲಿ ಕ್ರಾಂತಿಕಾರಿ ಹೆಜ್ಜೆಯಾಗಿದೆ. ಇದನ್ನು ಶೇ.88ಕ್ಕಿಂತ ಹೆಚ್ಚು ಸ್ವದೇಶಿ ಉತ್ಪನ್ನಗಳ ಮೂಲಕ ತಯಾರಿಸಿದ್ದು ಈ ಬಹುಮುಖ ರೋಬೋಟ್ ಜನರಲ್ ಸರ್ಜರಿ, ಸ್ತ್ರೀರೋಗಶಾಸ್ತ್ರ , ಮೂತ್ರಶಾಸ್ತ್ರ ಹಾಗೂ ಕ್ಯಾನ್ಸರ್ ಸೇರಿದಂತೆ ಅನೇಕ ವಿಭಾಗಗಳಲ್ಲಿ ಸೇವೆ ಸಲ್ಲಿಸುವಂತೆ ವಿನ್ಯಾಸಗೊಳಿಸಲಾಗಿದೆ.ಇದು ಸಾಟಿಯಿಲ್ಲದ ನಿಖರ ಫಲಿತಾಂಶವನ್ನು ನೀಡಲಿದ್ದು, ಸ್ಥಳೀಯವಾಗಿಯೇ ತಯಾರಿಸಿರುವುದರಿಂದ ಎಲ್ಲ ವರ್ಗದ ರೋಗಿಗಳಿಗೆ ಸುಲಭ ಮತ್ತು ಕೈಗೆಟುಕುವ ದರದಲ್ಲಿ ಸೇವೆಯನ್ನು ನೀಡಲಿದೆ.

ಎಸ್‌ಎಸ್‌ಐ ಮಂತ್ರವು ಭಾರತದ ಸ್ವಾವಲಂಬನೆಗೆ ಹೆಮ್ಮೆಯ‌ ಉದಾಹರಣೆಯಾಗಿದೆ. ಆತ್ಮನಿರ್ಭರ ಭಾರತ್ ಉಪಕ್ರಮದ ಭಾಗವಾಗಿರುವ ಈ ರೋಬೋಟಿಕ್ ವ್ಯವಸ್ಥೆ ವಿಶ್ವದ ಅತ್ಯುತ್ತಮ ಶಸ್ತ್ರಚಿಕಿತ್ಸಾ ತಂತ್ರಜ್ಞಾನಕ್ಕೆ ಸ್ಪರ್ಧೆಯೊಡ್ಡಲಿದೆ. ವೈದ್ಯರ ತಂಡಕ್ಕೆ ಶಸ್ತ್ರಚಿಕಿತ್ಸೆ ನಡೆಯುವ ಜಾಗವನ್ನು ‘3ಡಿ’ಯಲ್ಲಿ ನೋಡಲು ಎಸ್‌ಎಸ್‌ಐ ಮಂತ್ರ ಅನುವು ಮಾಡಿಕೊಡುತ್ತದೆ. ಇದರಿಂದ ಶಸ್ತ್ರಚಿಕಿತ್ಸೆ ನಿಖರ, ನೋವುರಹಿತ ಹಾಗೂ ಆರಾಮದಾಯಕವಾಗಿ ಇರಲಿದೆ ಎಂದು ಡಾ. ಶ್ರೀನಿವಾಸ್‌ ಚಿರಕುರಿ ತಿಳಿಸಿದರು.

Edited By : Somashekar
PublicNext

PublicNext

22/10/2024 12:14 pm

Cinque Terre

16.28 K

Cinque Terre

0

ಸಂಬಂಧಿತ ಸುದ್ದಿ