ಬೆಂಗಳೂರು : ಎಂಎಸ್ ಎಂಇ ಏರೋಸ್ಪೇಸ್ ಮತ್ತು ಡಿಫೆನ್ಸ್ ಎಕ್ಸ್ಪೋ, ಮಾದಾವರದ ಬೆಂಗಳೂರು ಅಂತರಾಷ್ಟ್ರೀಯ ವಸ್ತು ಪ್ರದರ್ಶನ ಕೇಂದ್ರದಲ್ಲಿ ಆಯೋಜಿಸಿದ್ದ 5 ನೇ ಆವೃತ್ತಿಯ ಇಂಡಿಯಾ ಮ್ಯಾನುಫ್ಯಾಕ್ಚರಿಂಗ್ ಶೋಗೆ ಸಿಎಂ ಬಸವರಾಜ ಬೊಮ್ಮಾಯಿ ಚಾಲನೆ ನೀಡಿದರು.
ಈ ಸಂದರ್ಭದಲ್ಲಿ ಕೇಂದ್ರ ಸಂಸದೀಯ ವ್ಯವಹಾರಗಳ ಸಚಿವ ಪ್ರಹ್ಲಾದ್ ಜೋಷಿ, ಬೃಹತ್ ಕೈಗಾರಿಕಾ ಸಚಿವ ಮುರುಗೇಶ್ ನಿರಾಣಿ, ಯಲಹಂಕ ಶಾಸಕ ಹಾಗೂ ಬಿಡಿಎ ಅಧ್ಯಕ್ಷ ಎಸ್. ಆರ್. ವಿಶ್ವನಾಥ್ ಸೇರಿದಂತೆ ಐಎಂಎಸ್ ಮುಖ್ಯಸ್ಥರು ಉಪಸ್ಥಿತರಿದ್ದರು.
IMS ಫೌಂಡೇಶನ್ ಸಹಯೋಗದೊಂದಿಗೆ ಲಘು ಉದ್ಯೋಗ ಭಾರತಿ ಕರ್ನಾಟಕ ವತಿಯಿಂದ ಇಂಡಿಯಾ ಮ್ಯಾನುಫ್ಯಾಕ್ಚರಿಂಗ್ ಶೋ,ಇಂದಿನಿಂದ 3 ದಿನಗಳವರೆಗೆ ನಡೆಯಲಿಯಲಿದೆ.
ಮೇಳದಲ್ಲಿ ಏರೋಸ್ಪೇಸ್ ಆಟೋಮೇಷನ್, ರೋಬೋಟಿಕ್ಸ್, ಡ್ರೋನ್ಸ್, ಎಲೆಕ್ಟ್ರಿಕಲ್ಸ್ ಮತ್ತು ಎಲೆಕ್ಟ್ರಾನಿಕ್ಸ್, ಸಾಮಾನ್ಯ ಎಂಜಿನಿಯರಿಂಗ್, ಶಕ್ತಿ ಪರಿಸರ ಮತ್ತು EV ಸಾರಿಗೆಗೆ ಸಂಬಂಧಿಸಿದ 400ಕ್ಕೂ ಹೆಚ್ಚು ಪ್ರದರ್ಶಕರು, 20 ಸಾವಿರ ವ್ಯಾಪಾರ ಪ್ರತಿನಿಧಿಗಳು ಮತ್ತು 150 ತಜ್ಞರು,ಪ್ರಮುಖ ಉತ್ಪಾದಕ ಕಂಪನಿಗಳ ಮುಖ್ಯಸ್ಥರು ಭಾಗಿಯಾಗಿದ್ದಾರೆ.
PublicNext
15/09/2022 11:26 am