ಅಪ್ಲಿಕೇಶನ್‌ನಲ್ಲಿ ಉಚಿತವಾಗಿ ಪೂರ್ಣ ವೀಡಿಯೊವನ್ನು ವೀಕ್ಷಿಸಿ

ಬೆಂಗಳೂರು: ದೇಶದ ಭದ್ರತೆ, ಸುರಕ್ಷತೆಯಲ್ಲಿ ರಾಜಕಾರಣ ಮಾಡಿದ್ರೆ ಯಾರೂ ಕ್ಷಮಿಸಲ್ಲ; ಸಿಎಂ

ಬೆಂಗಳೂರು: ದೇಶದ ಭದ್ರತೆ, ಸುರಕ್ಷತೆಯ ಬಗ್ಗೆ ರಾಜಕಾರಣ ಮಾಡಿದರೆ ಯಾರೂ ಕ್ಷಮಿಸುವುದಿಲ್ಲ. ಹಲವಾರು ರಾಜಕೀಯ ಪಕ್ಷಗಳು ಪರೋಕ್ಷವಾಗಿ, ಕೆಲವರು ನೇರವಾಗಿ ದೇಶದ್ರೋಹಿಗಳಿಗೆ ಬೆಂಬಲ ನೀಡುತ್ತಿರುವುದನ್ನು ದೇಶದ ಜನರು ನೋಡುತ್ತಿದ್ದಾರೆ ಎಂದು ಮುಖ್ಯಮಂತ್ರಿ ಬಸವರಾಜ ಬೊಮ್ಮಾಯಿ‌ ಹೇಳಿದ್ದಾರೆ.

ಇಂದು ಬಸವನಗುಡಿಯ ಗೋಸಾಯಿ ಮಠದಲ್ಲಿ ದಸರಾ ಕಾರ್ಯಕ್ರಮ ಉದ್ದೇಶಿಸಿ ಮಾತನಾಡುತ್ತಾ ದೇಶದ ಭದ್ರತೆಯ ವಿಚಾರದಲ್ಲಿ ರಾಜಕಾರಣ ಮಾಡಲಾಗುತ್ತಿದೆ. ಇಂತಹ ಜನರಿಂದ ಎಷ್ಟರಮಟ್ಟಿಗೆ ದೇಶದ ರಕ್ಷಣೆ ಸಾಧ್ಯ ಎನ್ನುವುದು ಜನಸಾಮಾನ್ಯರಿಗೆ ಗೊತ್ತಿದೆ. ಜನರಿಗೆ ಅದರ ಬಗ್ಗೆ ಅರಿವು ಇದೆ. ಏನಾದರೂ ಬಿಟ್ಟಕೊಟ್ಟರೂ, ಈ ದೇಶ ಬಿಟ್ಟುಕೊಡಲು ಯಾರು ಸಿದ್ದರಿಲ್ಲ.‌ ಶಿವಾಜಿ ಮಹಾರಾಜರು ಪ್ರಾರಂಭ ಮಾಡಿದಂತಹ ಹೋರಾಟವನ್ನು ಈ ದೇಶ ಉಳಿಸಲು ಮಾಡಬೇಕಾದ ಅವಶ್ಯಕತೆ ಇದೆ. ಅಂತಹ ಪರಂಪರೆಗೆ ಗೋಸಾಯಿ ಕುಲದ ಜನರು ಸೇರಿದ್ದಿರಿ ಎಂದು ಬಸವರಾಜ ಬೊಮ್ಮಾಯಿ‌ ಹೇಳಿದರು.

ಗೋಸಾಯಿ ಮಠದ ಪರಂಪರೆ ಇಡೀ ರಾಷ್ಟ್ರದಲ್ಲಿಯೇ ಅತ್ಯಂತ ಶ್ರೇಷ್ಠವಾದ ಪರಂಪರೆ. ಭವಾನಿ ಮಾತೆಯ ಆಶೀರ್ವಾದ ಈ ಕುಲಕ್ಕಿದೆ. ಶಿವಾಜಿ ಮಹಾರಾಜರು ವಿಂದ್ಯದಿಂದ ಹಿಡಿದು ಕನ್ಯಾಕುಮಾರಿವರೆಗೂ ಸಾಮ್ರಾಜ್ಯ ವಿಸ್ತರಣೆ ಮಾಡಿದರು. ಆದರೂ ಕೂಡ ಸ್ಥಳೀಯ ನಾಯಕರಿಗೆ ಆದ್ಯತೆ ನೀಡಿದರು. ಒಂದು ಸಾಮ್ರಾಜ್ಯದಲ್ಲಿ ಸಂಖ್ಯೆ ಮುಖ್ಯವಲ್ಲ, ಆತ್ಮಸ್ಥೈರ್ಯ ಮುಖ್ಯ ಎನ್ನುವುದನ್ನು ಶಿವಾಜಿ ಮಹಾರಾಜರು ತೋರಿಸಿ ಕೊಟ್ಟರು. ಬೃಹತ ಮೊಘಲ್ ಸಾಮ್ರಾಜ್ಯವನ್ನೇ ಎದುರಿಸಿದವರು ಶಿವಾಜಿ ಮಹಾರಾಜರು ಎಂದು ಸಿಎಂ ಬೊಮ್ಮಾಯಿ‌ ತಿಳಿಸಿದರು.

ಅಂತಹ ಪರಂಪರೆಗೆ ಮರಾಠರು ನೀವು ಸೇರಿದ್ದೀರಿ ಭಾಷೆ, ಬೇರೆ ಬೇರೆ ವೈಚಾರಿಕತೆಯ ವಿಚಿತ್ರ ಶಕ್ತಿಗಳು ದೇಶವನ್ನು ಒಡೆಯುವ ಕೆಲಸ ಮಾಡುತ್ತಿವೆ. ಅವುಗಳನ್ನು ಕೇಂದ್ರ ಸರ್ಕಾರ, ಪ್ರಧಾನಿ ಮೋದಿ ಹಾಗೂ ಅಮಿತ್ ಶಾ ಅವರು ನಿಯಂತ್ರಣ ಮಾಡುತ್ತಿದ್ದಾರೆ. ದೇಶದಲ್ಲಿ ಪ್ರಥಮ ಭಯೋತ್ಪಾದನೆಯ ಮೇಲೆ ಸಂಪೂರ್ಣವಾದ ನಿಯಂತ್ರಣ ಮಾಡಿರುವ ಸರ್ಕಾರ ಇವತ್ತು ಇದೆ ಎಂದರು.

Edited By : Vijay Kumar
Kshetra Samachara

Kshetra Samachara

03/10/2022 10:39 pm

Cinque Terre

6.71 K

Cinque Terre

0

ಸಂಬಂಧಿತ ಸುದ್ದಿ