ಅಪ್ಲಿಕೇಶನ್‌ನಲ್ಲಿ ಉಚಿತವಾಗಿ ಪೂರ್ಣ ವೀಡಿಯೊವನ್ನು ವೀಕ್ಷಿಸಿ

ಬೆಂಗಳೂರು: ಸೆ.21ರಿಂದ ಏಷ್ಯಾದ ಅತಿದೊಡ್ಡ ಶಿಕ್ಷಣ ಮೇಳ ಡೈಡ್ಯಾಕ್ಟ್ ಇಂಡಿಯಾ ಸಮಾವೇಶ ಆರಂಭ

ಬೆಂಗಳೂರು: ಶಿಕ್ಷಣ ಮತ್ತು ಕೌಶಲ್ಯ ಕ್ಷೇತ್ರದಲ್ಲಿ ಏಷ್ಯಾದ ಅತಿದೊಡ್ಡ ಮತ್ತು ಭಾರತದ ಏಕೈಕ ಸಮಾವೇಶವಾದ 'ಡೈಡ್ಯಾಕ್ಟ್ ಇಂಡಿಯಾ' ಬೆಂಗಳೂರಿನಲ್ಲಿ ಸೆ.21ರಿಂದ 23ರವರೆಗೆ ನಡೆಯಲಿದೆ. ಇದಕ್ಕೆ ರಾಜ್ಯ ಉನ್ನತ ಶಿಕ್ಷಣ ಇಲಾಖೆ ಪ್ರಾಯೋಜಕತ್ವ ನೀಡುತ್ತಿದೆ ಎಂದು ಉನ್ನತ ಶಿಕ್ಷಣ ಸಚಿವ ಡಾ.ಸಿ ಎನ್ ಅಶ್ವತ್ಥ ನಾರಾಯಣ ಹೇಳಿದ್ದಾರೆ.

ಈ ಬಗ್ಗೆ ಸುದ್ದಿಗೋಷ್ಠಿಯಲ್ಲಿ ಮಂಗಳವಾರ ಮಾತನಾಡಿದ ಅವರು, 12ನೇ ವರ್ಷದ ಈ ಸಮಾವೇಶವು ಬೆಂಗಳೂರು ಅಂತರರಾಷ್ಟ್ರೀಯ ವಸ್ತುಪ್ರದರ್ಶನ ಕೇಂದ್ರದಲ್ಲಿ (BIEC) ನಡೆಯಲಿದೆ. ಇಲ್ಲಿ ಶಿಕ್ಷಣ ಮತ್ತು ಕೌಶಲ್ಯ ಕ್ಷೇತ್ರಗಳ 4,000ಕ್ಕೂ ಹೆಚ್ಚು ನವೀನ ಉತ್ಪನ್ನ ಹಾಗೂ ಸೇವೆ ಅನಾವರಣಗೊಳ್ಳಲಿವೆ. ಮೈಕ್ರೋಸಾಫ್ಟ್, ಅಮೆಜಾನ್‌, ಸ್ಯಾಮ್ಸಂಗ್, ಎಚ್.ಪಿ. ಸೇರಿದಂತೆ 20 ದೇಶಗಳ 200ಕ್ಕೂ ಹೆಚ್ಚು ಪ್ರದರ್ಶಕರು ಭಾಗವಹಿಸುತ್ತಿದ್ದಾರೆ ಎಂದರು.

ಸಮಾವೇಶದಲ್ಲಿ ಯುಕೆ, ಜರ್ಮನಿ, ಆಸ್ಟ್ರೇಲಿಯಾ, ಕೆನಡಾ, ಫಿನ್ಲೆಂಡ್, ಪೋಲೆಂಡ್, ಸಿಂಗಾಪುರ ಮುಂತಾದ ದೇಶಗಳ ಪ್ರತ್ಯೇಕ ಅಂತರರಾಷ್ಟ್ರೀಯ ಪೆವಿಲಿಯನ್ ಇರಲಿವೆ ಎಂದು ಅವರು ವಿವರಿಸಿದರು.

ಸಮಾವೇಶವು ಇಂಡಿಯಾ ಡೈಡ್ಯಾಕ್ಟಿಕ್ಸ್ ಅಸೋಸಿಯೇಷನ್ (IDA), ಕೇಂದ್ರ ಶಿಕ್ಷಣ ಇಲಾಖೆ, ನೀತಿ ಆಯೋಗ, ಕೇಂದ್ರ ಕೌಶಲ್ಯ ಮತ್ತು ಉದ್ಯಮಶೀಲತೆ ಇಲಾಖೆ ಮತ್ತು ಎಜುಕೇಶನ್ ವರ್ಲ್ಡ್ ಫೋರಂ ಸಹಯೋಗದಲ್ಲಿ ಜರುಗಲಿದೆ. ಅಖಿಲ ಭಾರತ ತಾಂತ್ರಿಕ ಶಿಕ್ಷಣ ಪರಿಷತ್ತು (AICTE) ಹಾಗೂ ರಾಷ್ಟ್ರೀಯ ಶಿಕ್ಷಣ ಸಂಶೋಧನೆ ಮತ್ತು ತರಬೇತಿ ಪರಿಷತ್ತು (NCERT) ಈ ಸಮಾವೇಶದ ಸಹಭಾಗಿತ್ವ ವಹಿಸಿವೆ ಎಂದರು.

Edited By : Nagesh Gaonkar
PublicNext

PublicNext

20/09/2022 06:26 pm

Cinque Terre

16.57 K

Cinque Terre

0

ಸಂಬಂಧಿತ ಸುದ್ದಿ