ಬೆಂಗಳೂರು : ಕಾಂಗ್ರೆಸ್‌ನಲ್ಲಿ ಡಿನ್ನರ್ ಸಭೆಯ ದಂಗಲ್ ಮುಂದುವರಿದಿದೆ, ಗೃಹ ಸಚಿವ ಪರಮೇಶ್ವರ್ ನೇತೃತ್ವದಲ್ಲಿ ನಡೆಯಬೇಕಿದ್ದ ದಲಿತ ನಾಯಕರ ಡಿನ್ನರ್ ಸಭೆಗೆ ಹೈಕಮಾಂಡ್ ಬ್ರೇಕ್ ಹಾಕಿತ್ತು.
ಆದ್ರೆ ಇದು ಬ್ರೇಕ್ ಹಾಕಿದ್ದಲ್ಲ ಮುಂದೂಡಿಕೆ ಅಂತನೇ ಹೇಳುತ್ತ ಬರುತ್ತಿರುವ ಪರಮೇಶ್ವರ್ ,ಇದೀಗ ಸುರ್ಜೆವಾಲ ಜೊತೆ ಮಾತನಾಡಿದ ನಂತರ ಮತ್ತೆ ದಲಿತ ನಾಯಕರ ಸಭೆ ಮಾಡ್ತೀವಿ ಎಂದು ಪರಮೇಶ್ವರ್ ಹೇಳಿದ್ದಾರೆ.
ಈ ಕುರಿತಂತೆ ಬೆಂಗಳೂರಿನಲ್ಲಿ ಮಾತನಾಡಿದ ಅವರು, ರಾಜ್ಯ ಕಾಂಗ್ರೆಸ್ ಉಸ್ತುವಾರಿ ಸುರ್ಜೆವಾಲ ರಾಜ್ಯಕ್ಕೆ ಬರ್ತಿದ್ದಾರೆ ಅವರು ಬಂದ ಮೇಲೆ ಅವರ ಜೊತೆ ಮಾತನಾಡುತ್ತೇನೆ,ಯಾವ ಉದ್ದೇಶಕ್ಕಾಗಿ ಸಭೆ ಮಾಡುತ್ತೇವೆ ಅಂತ ಹೇಳುತ್ತೇವೆ. ಈಗಾಗಲೇ ದೂರವಾಣಿ ಮೂಲಕವೂ ಸುರ್ಜೆವಾಲಾ ಜೊತೆಗೆ ಮಾತಾಡಿದ್ದೇನೆ.
ಸುರ್ಜೆವಾಲಾ ಗಮನಕ್ಕೆ ತಂದು ಸಭೆ ಮಾಡುತ್ತೇವೆ ಸಮಯ ಹಾಗೂ ದಿನಾಂಕ ಆಮೇಲೆ ನಿಗದಿ ಮಾಡುತ್ತೇವೆ ಎಂದು ಪರಮೇಶ್ವರ್ ಸ್ಪಷ್ಟಪಡಿಸಿದ್ದಾರೆ.
PublicNext
11/01/2025 05:55 pm