ಬೆಂಗಳೂರು: ಬಡವರ ಸಂಕಷ್ಟಗಳನ್ನು ಅರಿತು ಬಡವರಿಗಾಗಿ ಗೋವಿಂದರಾಜನಗರ ವಿಧಾನಸಭಾ ಕ್ಷೇತ್ರದಲ್ಲಿ ಹಲವು ಮಲ್ಟಿಸ್ಪೆಷಾಲಿಟಿ ಆಸ್ಪತ್ರೆ ನಿರ್ಮಾಣ ಮಾಡಲಾಗುತ್ತಿದೆ ಎಂದು ವಸತಿ ಸಚಿವ ವಿ. ಸೋಮಣ್ಣ ತಿಳಿಸಿದರು.
ಗೋವಿಂದರಾಜನಗರ ವಿಧಾನಸಭಾ ಕ್ಷೇತ್ರದ ಅಗ್ರಹಾರ ದಾಸರಹಳ್ಳಿ ವಾರ್ಡ್ ನಲ್ಲಿರುವ ಬಿಬಿಎಂಪಿ ಪ್ರಾಥಮಿಕ ಆರೋಗ್ಯ ಕೇಂದ್ರ ಕಟ್ಟಡ ಉದ್ಘಾಟಿಸಿ ಮಾತಾಡಿದ ಅವರು, ಎಂಸಿ ಲೇಔಟ್ ನಲ್ಲಿ ನಿರ್ಮಾಣಗೊಳ್ಳುತ್ತಿರುವ ಬಿಬಿಎಂಪಿ ಮಲ್ಟಿಸ್ಪೆಷಾಲಿಟಿ ಆಸ್ಪತ್ರೆಗೆ ಆದಿಚುಂಚನಗಿರಿ ಶ್ರೀಗಳ ಹೆಸರನ್ನು ಇಡಬೇಕು ಎಂಬ ಇಂಗಿತವಿದೆ ಎಂದರು.
8.3 ಕಿಲೋ ಮೀಟರ್ ಉದ್ದದ, 6.6 ಕಿಲೋ ವ್ಯಾಟ್ ನ ಹೈಟೆನ್ಶನ್ ಲೈನ್ ಅನ್ನು 145 ಕೋಟಿ ರೂಪಾಯಿ ವೆಚ್ಚದಲ್ಲಿ ಕಾರ್ಡ್ ರಸ್ತೆಯಿಂದ ಮೈಸೂರು ರಸ್ತೆ ಬಿಹೆಚ್‌ಇಎಲ್ ವರೆಗೂ ಹಾಕಲಾಗಿದ್ದು, ಸಾವಿರ ಕೋಟಿ ರೂಪಾಯಿ ಆಸ್ತಿಯನ್ನು ಬಳುವಳಿಯಾಗಿ ಕೊಟ್ಟಿದ್ದೇವೆ ಎಂದರು.
ಇಡೀ ರಾಜ್ಯದಲ್ಲಿ ಕಾರ್ಮಿಕ ಇಲಾಖೆಯಿಂದ ಏಕಕಾಲದಲ್ಲಿ ೪೦೦ ಕೋಟಿ ತಂದಿರುವ ಉದಾಹರಣೆ ಇದ್ದರೆ ಅದು ಬಸವರಾಜ್ ಬೊಮ್ಮಾಯಿ ಅವರ ಸರ್ಕಾರದಿಂದ ಮಾತ್ರ. ಮನೆಗಳು ಮಾರಾಟವಾಗಬಾರದು ಎಂಬ ಏಕೈಕ ಕಾರಣಕ್ಕೆ ಹಕ್ಕುಪತ್ರಗಳನ್ನು ಹೆಣ್ಣುಮಕ್ಕಳ ಹೆಸರಿಗೆ ಮಾಡಿದ್ದೇವೆ, ದಯಮಾಡಿ ಹಕ್ಕುಪತ್ರಗಳನ್ನು ಮಾರಾಟ ಮಾಡಬೇಡಿ ಎಂದು ಮನವಿ ಮಾಡಿದರು.
Kshetra Samachara
01/10/2022 04:55 pm