ಬೆಂಗಳೂರು: ಇಂದು ಸಂಜೆ ಏಳು ಗಂಟೆ ಸುಮಾರಿಗೆ ಸುರಿದ ದಿಢೀರ್ ಮಳೆಗೆ ಬೆಂಗಳೂರಿನ ಅಶೋಕನಗರ ಪೊಲೀಸ್ ಠಾಣೆ ಸಮೀಪದ
ಗರುಡಾಮಾಲ್ ಜಂಕ್ಷನ್ ಸಂಪೂರ್ಣ ಜಲಾವೃತವಾಯಿತು! ಎಂ.ಜಿ.ರಸ್ತೆ ಕಡೆಯಿಂದ ಶಾಂತಿನಗರ, ಶೋಲೆ ಸರ್ಕಲ್, ಹಳೆ ಮದ್ರಾಸ್ ರಸ್ತೆ, ಹಾಸ್ಮಟ್ ಆಸ್ಪತ್ರೆ ರಸ್ತೆ, ರಾಜ್ಯ ಫುಟ್ಬಾಲ್ ಮೈದಾನ ರಸ್ತೆಗಳ ಸಂಪರ್ಕಕೊಂಡಿ ಅರ್ಧಗಂಟೆ ವರೆಗೆ ಜಾಮ್ ಆಗಿತ್ತು.
ಗರುಡಾಮಾಲ್ ಗೆ ಬಂದ ಜನರು, ನಾಲ್ಕು ರಸ್ತೆಗಳ ಜಂಕ್ಷನ್ ನಲ್ಲಿ ಸಿಲುಕಿ ಪರದಾಡಿದರು. ಇಳಿಜಾರು ರಸ್ತೆಯಲ್ಲಿ ಒಂದು- ಒಂದೂವರೆ ಅಡಿ ನೀರು ನಿಂತ ಕಾರಣ ಬೈಕ್, ಆಟೋ, ಕಾರು, ಕುದುರೆ ಜಟಕಾ ಗಾಡಿ ಸೇರಿದಂತೆ ನಾಗರಿಕರು ತೀವ್ರವಾಗಿ ಪರದಾಡಿದರು.
ಮಳೆನೀರು ರಾಜಕಾಲುವೆಯಲ್ಲಿ ಹರಿಯದೆ ರಸ್ತೆ ಮೇಲೆಯೇ ಹರಿಯುತ್ತಿರುವುದು ಅವಾಂತರಕ್ಕೆ ಕಾರಣವಾಗಿದೆ. ರಾಜಕಾಲುವೆಯಲ್ಲಿ ಮಣ್ಣು, ಕಸಕಡ್ಡಿ, ಹೂಳು ತುಂಬಿಕೊಂಡಿರುವುದು ಮುಂದಾಲೋಚನೆ ಇಲ್ಲದ ಬಿಬಿಎಂಪಿ ಕೆಲಸಕ್ಕೆ ಹಿಡಿದ ಕೈಗನ್ನಡಿಯಂತಿದೆ.
ಸುರೇಶ್ ಬಾಬು, ಪಬ್ಲಿಕ್ ನೆಕ್ಸ್ಟ್ ಬೆಂಗಳೂರು
PublicNext
10/10/2022 11:04 pm