ಅಪ್ಲಿಕೇಶನ್‌ನಲ್ಲಿ ಉಚಿತವಾಗಿ ಪೂರ್ಣ ವೀಡಿಯೊವನ್ನು ವೀಕ್ಷಿಸಿ

ಬೆಂಗಳೂರಿನಲ್ಲಿ ಇಂದು, ನಾಳೆ ಮಳೆ ಸಾಧ್ಯತೆ; ಚಳಿ ಹೆಚ್ಚಾಗಿದ್ದು ಯಾಕೆ ಗೊತ್ತಾ?

ಬೆಂಗಳೂರು: ರಾಜ್ಯ ರಾಜಧಾನಿ ಬೆಂಗಳೂರು ಸೇರಿದಂತೆ ವಿವಿಧೆಡೆ ಇಂದು ಮತ್ತು ನಾಳೆ ಮಳೆಯಾಗುವ ಸಾಧ್ಯತೆಗಳಿವೆ ಎಂದು ಹವಾಮಾನ ಇಲಾಖೆ ಹೇಳಿದೆ.

ನಿನ್ನೆ (ಬುಧವಾರ) ಒಂದು ದಿನ ಬಹುತೇಕ ಭಾಗಗಳಲ್ಲಿ ವರುಣ ಅಬ್ಬರ ಶುರುವಾಗಿದ್ದು, ಮತ್ತೆ ತನ್ನ ಲಯಕ್ಕೆ ಮರಳಲಿರುವ ವರುಣ ದೇವ, ಅಬ್ಬರಿಸುವ ಸಾಧ್ಯತೆಗಳಿವೆ. ಇನ್ನು ಕೆಲವು ಭಾಗಗಳಲ್ಲಿ ಮಿಂಚು ಗುಡುಗು ಸಹಿತ ಮಳೆಯಾಗುವ ನಿರೀಕ್ಷೆಗಳಿವೆ. ರಾಜಧಾನಿ ಬೆಂಗಳೂರಿನ ಜನರು 15 ದಿನಗಳಿಂದ ಸುರಿದ ಮಳೆಯಿಂದಾದ ಅನಾಹುತದಿಂದ ಇನ್ನು ಹೊರ ಬಂದಿಲ್ಲ. ಈ ನಡುವೆ ಮತ್ತು ಎರಡು ದಿನ ಗಾರ್ಡನ್ ಸಿಟಿಯಲ್ಲಿ ಮಳೆಯಾಗುವ ಸಾಧ್ಯತೆಗಳಿವೆ ಎಂಬ ಆತಂಕದ ಮಾಹಿತಿಯನ್ನು ಹವಾಮಾನ ಇಲಾಖೆ ಹೇಳಿದೆ.

ಹೆಬ್ಬಾಳ, ಜಯನಗರ, ಚಾಮರಾಜಪೇಟೆ, ವಿಜಯನಗರ, ಶೇಷಾದ್ರಿಪುರ, ಚೆನ್ನಸಂದ್ರ, ಹುಳಿಮಾವು, ರಾಮಹಲ್ ಗುಟ್ಟಹಳ್ಳಿ, ಯಲಹಂಕ ಸೇರಿದಂತೆ ಹಲವೆಡೆ ತುಂತುರು ರೂಪದಲ್ಲಿ ಮಳೆ ದಾಖಲಾಯಿತು. ಕೆಲವು ಪ್ರದೇಶಗಳಲ್ಲಿ ತಡರಾತ್ರಿವರೆಗೂ ತುಂತುತು ಮಳೆ ಮುಂದುವರಿಯಲಿದೆ.

ಚಳಿ ಹೆಚ್ಚುತ್ತಿರುವುದು ಯಾಕೆ?:

ಅರಬ್ಬಿ ಸಮುದ್ರ ಮಟ್ಟದಲ್ಲಿ ಮಂಗಳವಾರ ಒಂದು ಮೇಲ್ಮೈ ಸುಳಿಗಾಳಿ ಗುರ್ಬಲಗೊಂಡ ಬೆನ್ನಲ್ಲೆ ಮತ್ತೊಂದು ಸುಳಿಗಾಲಿ ಎದ್ದಿದೆ. ಜೊತೆಗೆ ಮಹಾರಾಷ್ಟ್ರದಿಂದ ಗೋವಾದ ಪಶ್ಚಿಮ ಕರಾವಳಿ ಭಾಗದಲ್ಲಿ ಗಾಳಿ ತೀವ್ರತೆ ಹೆಚ್ಚಾಗಿದೆ. ಇವೆಲ್ಲ ಕಾರಣದಿಂದ ಕರ್ನಾಟಕ ಕರಾವಳಿಗೆ ಭಾರಿ ಮಳೆ ಮುಂದುವರಿದಿದೆ.

"ಅಲ್ಲದೇ ಬೆಂಗಳೂರು ನಗರ ಹಾಗೂ ಸುತ್ತಮುತ್ತಲಿನ ಹಲವು ಪ್ರದೇಶಗಳಲ್ಲಿ ಆಗಾಗ ಹಗುರದಿಂದ ಸಾಧಾರಣವಾಗಿ ಮಳೆ ಬರುವ ಸಾಧ್ಯತೆ ಹೆಚ್ಚಿದೆ. ಈ ಎಲ್ಲ ಕಾರಣದಿಂದ ನಗರದಲ್ಲಿ ಎರಡು ದಿನದಿಂದ ತಾಪಮಾನ ಕಡಿಮೆಯಾಗಿ ಚಳಿ ಹೆಚ್ಚಾಗಿದೆ. ಈ ವೇಳೆ ಗರಿಷ್ಠ ತಾಪಮಾನ 26ಡಿಗ್ರಿ ಸೆಲ್ಸಿಯಸ್ ಮತ್ತು ಕನಿಷ್ಠ ತಾಪಮಾನ 20ಡಿಗ್ರಿ ಸೆಲ್ಸಿಯಸ್ ಕಂಡು ಬರಲಿದೆ," ಎಂದು ಬೆಂಗಳೂರು ಹವಾಮಾನ ಕೇಂದ್ರದ ಅಧಿಕಾರಿ ಮತ್ತು ವಿಜ್ಞಾನಿ ಪ್ರಸಾದ್ ತಿಳಿಸಿದ್ದಾರೆ.

Edited By : Vijay Kumar
Kshetra Samachara

Kshetra Samachara

14/09/2022 02:18 pm

Cinque Terre

1.38 K

Cinque Terre

0

ಸಂಬಂಧಿತ ಸುದ್ದಿ