ಬೆಂಗಳೂರು : ಪಿಎಫ್ ಐ ಬ್ಯಾನ್ ಮಾಡಿ ಕೇಂದ್ರ ಸರ್ಕಾರ ಆದೇಶ ಹೊರಡಿಸಿದ್ದು. ಇದನ್ನ "ಸೆಪ್ಟೆಂಬರ್ ಕ್ರಾಂತಿ" ಅಂತ ರಾಜ್ಯ ಕಾನೂನು ಸುವ್ಯವಸ್ಥೆ ಎಡಿಜಿಪಿ ಅಲೋಕ್ ಕುಮಾರ್ ಬಣ್ಣಿಸಿದ್ದಾರೆ. ಈ ಮಾತಿಗೆ 11 ವರ್ಷಗಳ ಇತಿಹಾಸವಿದ್ದು ಹಿಂದೆ 2011 ಸೆಪ್ಟೆಂಬರ್ 26 ರಂದು ಸಿಮಿ ಸಂಘಟನೆಯನ್ನ ಕೇಂದ್ರ ಸರ್ಕಾರ ನಿಷೇಧಿಸಿತ್ತು. ಇದೀಗ 2022 ಸೆ. 28ರಂದು ಪಿಎಫ್ ಐ ಬ್ಯಾನ್ ಮಾಡಿದೆ. ಇದು ಸೆಪ್ಟಂಬರ್ ಕ್ರಾಂತಿಯಾಗಿದೆ. ಸಾಮಾನ್ಯ ಜನರ ಹಿತಾಸಕ್ತಿಗಳನ್ನು ಕಾಪಾಡಲು ಬದ್ಧ ಹಾಗೂ ಕಾನೂನು ಬಾಹಿರ ಚಟುವಟಿಕೆಗಳ ಮೇಲೆ ನಿರ್ದಾಕ್ಷಿಣ್ಯ ಕ್ರಮದ ಭರವಸೆ ಮೂಡಿದೆ. ಪರಿತ್ರಾಣಾಯ ಸಾಧೂನಾಂ ವಿನಾಶಾಯ ಚ ದುಷ್ಕೃತಾಮ್ ಎಂದು ಟ್ವೀಟ್ ನಲ್ಲಿ ತಿಳಿಸಿದ್ದಾರೆ.
ಇನ್ನೂ ಸಿಮಿ ಬ್ಯಾನ್ ನಂತರ ಸಿಮಿ ಸಂಘಟನೆಯ ಸಾಕಷ್ಟು ಕಾರ್ಯಕರ್ತರು ಪಿಎಫ್ ಐ ನಲ್ಲಿ ತೊಡಗಿಕೊಂಡಿದ್ರು ಎಂದು ಹೇಳಲಾಗ್ತಿತ್ತು.
PublicNext
29/09/2022 08:40 am