ಅಪ್ಲಿಕೇಶನ್‌ನಲ್ಲಿ ಉಚಿತವಾಗಿ ಪೂರ್ಣ ವೀಡಿಯೊವನ್ನು ವೀಕ್ಷಿಸಿ

ಬೆಂಗಳೂರು: ಪಿಎಫ್ಐ ಬ್ಯಾನ್- ರಾಜ್ಯಾದ್ಯಂತ ಕಟ್ಟೆಚ್ಚರ ವಹಿಸಲು ಡಿಜಿ ಸೂಚನೆ

ಬೆಂಗಳೂರು: ಪಿಎಫ್‌ಐ ಸಂಘಟನೆ ಬ್ಯಾನ್ ಮಾಡಿ ಕೇಂದ್ರ ಗೃಹ ಇಲಾಖೆ ಆದೇಶ ಹೊರಡಿಸಿದ ಬೆನ್ನಲ್ಲೆ ರಾಜ್ಯಾದ್ಯಂತ ಕಟ್ಟೆಚ್ಚರ ವಹಿಸಲು ಡಿಜಿ ಅಂಡ್ ಐಜಿಪಿ ಪ್ರವೀಣ್ ಸೂದ್ ಸೂಚನೆ ನೀಡಿದ್ದಾರೆ.

ಎಲ್ಲಾ ಠಾಣ ವಲಯದಲ್ಲಿ ಗಸ್ತು ಹೆಚ್ಚಿಸಿ ಅಲರ್ಟ್ ಇರುವಂತೆ‌ ಡಿಜಿ ಸೂಚನೆ ನೀಡಿದ್ದಾರೆ. ಕೇಂದ್ರ ಸರ್ಕಾರದ ಆದೇಶ ಬಂದಿದೆ. ಈ ಆದೇಶದ ಜೊತೆಗೆ ಕರ್ನಾಟಕ ಸರ್ಕಾರ ಸಹ ಆದೇಶ ಹೊರಡಿಸುತ್ತದೆ. ಸರ್ಕಾರದ ಆದೇಶ ಬಂದ ನಂತರ ತೆರವಾಗದ ಪಿಎಫ್‌ಐ ಕಚೇರಿಗೆ ಬೀಗ ಹಾಕುವ ಕೆಲಸವನ್ನ ಪೊಲೀಸರು ಮಾಡಲಿದ್ದಾರೆ. ಪಿಎಫ್ಐ ಬ್ಯಾನ್ ವಿರೋಧ ವ್ಯಕ್ತಪಡಿಸಿ ಪ್ರತಿಭಟನೆ ಮುಷ್ಕರ ಮಾಡುವ ಸಾಧ್ಯತೆಯಿದೆ. ಈ ಹಿನ್ನೆಲೆ ಮುಸ್ಲಿಂ ಸಮುದಾಯದ ಮುಖಂಡರ ಜೊತೆಗೆ ಶಾಂತಿಯಿಂದ ಇರಬೇಕು ಎಂದು ಸಭೆ ನಡೆಸಿ, ಅಹಿತಕರ ಘಟನೆಗಳು ನಡೆಸಲು ಯತ್ನಿಸಿದರೆ ವಶಕ್ಕೆ ಪಡೆದು ಕಾನೂನು ಕ್ರಮ ಕೈಗೊಳ್ಳಿ. ರಾಜ್ಯದಲ್ಲಿ ಯಾವುದೇ ಕಾರಣಕ್ಕೂ ಶಾಂತಿ ಕದಡುವ ಕೆಲಸ ಆಗಬಾರದು ಎಂದು ಪ್ರವೀಣ್ ಸೂದ್ ಸೂಚನೆ ನೀಡಿದ್ದಾರೆ.

Edited By : Vijay Kumar
PublicNext

PublicNext

28/09/2022 09:01 am

Cinque Terre

14.75 K

Cinque Terre

1