ಸರ್ಜಾಪುರ ಅತ್ತಿಬೆಲೆ ದೊಮ್ಮಸಂದ್ರ ಅನಧಿಕೃತ ನಾಮಪಲಕಗಳು ತಲೆಯೆತ್ತಿತು ಆ ಘಟನೆ ಮಾಸುವ ಮುನ್ನವೇ ಆನೇಕಲ್ ತಾಲೂಕಿನ ಜಿಗಣಿ ಮುಖ್ಯ ರಸ್ತೆ ಇಂಡ್ಲವಾಡಿ ಕ್ರಾಸ್ ನಲ್ಲಿ ಅನಧಿಕೃತ ಜಾಹೀರಾತು ಫಲಗಳು ತಲೆ ಎತ್ತಿದೆ. ಇನ್ನೂ ರಸ್ತೆ ಕಾಮಗಾರಿ ನಡೆಯುತ್ತಿದ್ದು ಪೂರ್ಣಗೊಳ್ಳುವ ಮುಂಚಿತವಾಗಿ ರಸ್ತೆ ಮಧ್ಯದಲ್ಲಿ ಅನಧಿಕೃತ ನಾಮಫಲಕಗಳು ತಲೆಯೆತ್ತಿವೆ.
ಇನ್ನು ಈ ಬಗ್ಗೆ ನ್ಯಾಯಾಲಯದ ಆದೇಶ ದಂತೆ ಹೆದ್ದಾರಿಗಳಲ್ಲಿ ಜಾಹೀರಾತು ಫಲಕಗಳನ್ನು ಅಳವಡಿಸದಂತೆ ಆದೇಶ ಇದ್ದರು ಸಹ ನಾಯಿ ಕೊಡೆಗಳಂತೆ ತಲೆ ಎತ್ತಿದೆ
ಇನ್ನು ಈ ಹಿಂದೆ ಸರ್ಜಾಪುರ ರಸ್ತೆಗಳಲ್ಲಿ ಮಳೆ ಗಾಳಿ ಸಮಯದಲ್ಲಿ ಪಾದಚಾರಿಗಳ ಮೇಲೆ ಬಿದ್ದಿರುವ ಅವಘಡ ಇಲ್ಲಿ ಯತಸ್ಥಿತಿ ಆಗುವುದರಲ್ಲಿ ಸಂಶಯ ಇಲ್ಲ ಸಂಬಂಧಪಟ್ಟ ಲೋಕೋಪಯೋಗಿ ಇಲಾಖೆ AEE ವೆಂಕಟೇಶ್ ರವರು ಕೂಡಲೇ ಸ್ಥಳ ಪರಿಶೀಲನೆ ಮಾಡಿ ಸೂಕ್ತ ಕಾನೂನು ಕ್ರಮ ಕೈಗೊಳ್ಳತರ ಅನ್ನೋದನ್ನ ಕಾದು ನೋಡಬೇಕಿದೆ..
ಹರೀಶ್ ಗೌತಮನಂದ ಪಬ್ಲಿಕ್ ನೆಕ್ಸ್ಟ್ ಆನೇಕಲ್
PublicNext
23/09/2022 06:58 pm