ಆನೇಕಲ್: ಸರ್ಕಾರಿ ಸ್ವಾಮ್ಯದ ನಕಾಶೆ ಜಾಗವನ್ನು ತೆರವುಗೊಳಿಸುವ ಸಂದರ್ಭದಲ್ಲಿ ಕಂದಾಯ ಇಲಾಖೆ ಅಧಿಕಾರಿಗಳಿಗೂ ಮತ್ತು ರೈತರಿಗೂ ಮಾತಿನ ಚಕಮಕಿ ನಡೆದಿರುವ ಘಟನೆ ಬೆಂಗಳೂರು ಹೊರವಲಯದ ಆನೇಕಲ್ ತಾಲೂಕಿನ ಹಾರಗದ್ದೆ ಗ್ರಾಮ ಪಂಚಾಯಿತಿ ವ್ಯಾಪ್ತಿಯ ಕುಂಬಾರನಹಳ್ಳಿ ಬಳಿ ನಡೆದಿದೆ..
ಇಲ್ಲಿನ ಕುಂಬಾರನಹಳ್ಳಿ ಗ್ರಾಮದ ಸರ್ವೆ ನಂಬರ್ 15ರಲ್ಲಿ ಮೂರು ಎಕರೆ ಒಂದು ಗುಂಟೆ ಜಾಗ ಇದ್ದು, ಮುನಿಯಪ್ಪ, ವೀರಭದ್ರಪ್ಪ ಸಂಜೀವಪ್ಪ ಮತ್ತು ಅಣ್ಣಯ್ಯಪ್ಪ ಎಂಬುವವರ ಸ್ವಾಧೀನದಲಿದ್ದು ಇವರ ಜಾಗದ ಪಕ್ಕದಲ್ಲಿ ನಕಾಶೆ ರಸ್ತೆ ಹಾದು ಹೋದ ಹಿನ್ನೆಲೆಯಲ್ಲಿ ಇಂದು ಸರ್ವೆ ಅಧಿಕಾರಿಗಳು ಪೋಲೀಸ್ ಇಲಾಖೆ ಸಹಭಾಗಿತ್ವದಲ್ಲಿ ತೆರವು ಕಾರ್ಯಾಚರಣೆಯನ್ನು ನಡೆಸಿದ್ರು.
ಈ ವೇಳೆ ಜಮೀನು ಮಾಲೀಕ ಅಣ್ಣಯ್ಯಪ್ಪ ಮಾತನಾಡಿ ಸರ್ಕಾರದಿಂದ ಆಗಲೀ, ತಹಶೀಲ್ದಾರ್ ಕಡೆಯಿಂದ ಆಗಲೀ ಯಾವುದೇ ನೋಟಿಸ್ ನಮಗೆ ಬಂದಿಲ್ಲ. ಏಕಾಏಕಿ ಜೆಸಿಬಿಗಳನ್ನ ತರಿಸಿ ತೆರವು ಮಾಡುತ್ತಿರುವುದು ಇದು ಯಾವ ನ್ಯಾಯ? ಅದಲ್ಲದೇ ಎರಡು ಕಡೆ ರಸ್ತೆ ಮಾಡಬೇಕಿತ್ತು. ಆದರೆ ಕಡೆ ಭಾಗದಲ್ಲಿ ರಸ್ತೆ ಮಾಡ್ತಿರೋದು ಎಷ್ಟು ಸರಿ ಅಂತ ಆಕ್ರೋಶ ಹೊರ ಹಾಕಿದ್ರು. ಇನ್ನು ಪೊಲೀಸ್ ಬಿಗಿ ಭದ್ರತೆಯಲ್ಲಿ ಒಂದು ಕಿಲೋಮೀಟರ್ ಗಟ್ಟಲೆ ರಸ್ತೆಯನ್ನು ಜೆಸಿಬಿ ಮುಖಾಂತರ ತೆರವು ಮಾಡಲಾಯಿತು..
ಹರೀಶ್ ಗೌತಮನಂದ ಪಬ್ಲಿಕ್ ನೆಕ್ಸ್ಟ್ ಆನೇಕಲ್
PublicNext
23/09/2022 06:51 pm