ಆನೇಕಲ್: ಭ್ರಷ್ಟಾಚಾರವನ್ನು ತಡೆಗಟ್ಟುವ ನಿಟ್ಟಿನಲ್ಲಿ ಮತ್ತು ಅದು ಯಾವುದೇ ಸ್ವರೂಪದಲ್ಲಿ ಇದ್ದರೂ ಸಹ ನಮ್ಮ ಗಮನಕ್ಕೆ ತರುವಂತೆ ಅಥವಾ ನೇರವಾಗಿ ಲೋಕಾಯುಕ್ತ ಕಚೇರಿಗೆ ದೂರು ನೀಡುವಂತೆ ನ್ಯಾಯಾಧೀಶ ಚನ್ನಕೇಶವ ರೆಡ್ಡಿ ಸುದ್ದಿಗೋಷ್ಠಿಯಲ್ಲಿ ತಿಳಿಸಿದರು.
ಆನೇಕಲ್ ತಾಲ್ಲೂಕಿನ ಕಚೇರಿಗೆ ಲೋಕಾಯುಕ್ತ ನ್ಯಾಯಾಧೀಶರು ದಿಢೀರ್ ಭೇಟಿ ನೀಡಿ, ಸಾರ್ವಜನಿಕರ ಕುಂದುಕೊರತೆ ಬಗ್ಗೆ ತಹಶೀಲ್ದಾರ್ ಕಚೇರಿಯಲ್ಲಿ ಅಹವಾಲು ಖುದ್ದಾಗಿ ಪಡೆದರು. ಸಾರ್ವಜನಿಕರಿಂದ ದೂರು ಕೇಳಿ ಬಂದ ಹಿನ್ನೆಲೆಯಲ್ಲಿ ಲೋಕಾಯುಕ್ತ ಹಾಗೂ ಉಪಲೋಕಾಯುಕ್ತರ ಆದೇಶದ ಮೇರೆಗೆ ದಿಢೀರ್ ಭೇಟಿ ನೀಡಿ ಪರಿಶೀಲನೆ ನಡೆಸಿದರು.
ನ್ಯಾಯಾಧೀಶ ಚನ್ನಕೇಶವ ರೆಡ್ಡಿ, ಲೋಕಾಯುಕ್ತ ಡಿವೈಎಸ್ ಪಿ ಮಂಜಯ್ಯ, ಇನ್ಪೆಕ್ಟರ್ ಗಳಾದ ಕೆ.ಜಿ.ಸತೀಶ್, ರಾಜೇಶ್ ಕೋಟ್ಯಾನ್ ನೇತೃತ್ವದಲ್ಲಿ ಪರಿಶೀಲನೆ ನಡೆಸಲಾಯಿತು.
ಪ್ರಮುಖವಾಗಿ ಸಿಬ್ಬಂದಿ ಕೊರತೆ, ಅಧಿಕಾರಿಗಳು ಸಮಯ ಪಾಲಿಸದಿರುವುದು, ಕಡತ ನಾಪತ್ತೆ ಈ ಬಗ್ಗೆ ಸಾರ್ವಜನಿಕರು ಧೈರ್ಯದಿಂದ ದೂರು ಕೊಟ್ಟಲ್ಲಿ ಸೂಕ್ತ ಕ್ರಮ ಕೈಗೊಳ್ಳುವುದಾಗಿ ಎಚ್ಚರಿಕೆಯನ್ನೂ ನೀಡಿದರು.
PublicNext
27/09/2022 08:45 pm